More

  ಒನಕೆ ಓಬವ್ವನ ಶೌರ್ಯ ಮಾದರಿಯಾಗಲಿ

  ಶ್ರೀರಂಗಪಟ್ಟಣ: ರಾಜ್ಯದ ರಕ್ಷಣೆಗಾಗಿ ಹೋರಾಡಿದ ಧೀರ ಮಹಿಳೆ ಒನಕೆ ಓಬವ್ವ ಎಂದು ಕಸಾಪ ತಾಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ಬಣ್ಣಿಸಿದರು.

  ಪಟ್ಟಣದ ಶ್ರೀ ರಂಗನಾಯಕಿ ಸಮಾಜದಲ್ಲಿ ರೋಟರಿ ಮಂಡ್ಯ ಹಾಗೂ ಶ್ರೀ ರಂಗನಾಯಕಿ ಸ್ತ್ರೀ ಸಮಾಜದಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರಾಲಿ ಸೈನ್ಯ ಮುಂದಾದಾಗ ಒನಕೆ ಓಬವ್ವ ಏಕಾಂಗಿಯಾಗಿ ಹೋರಾಡಿದರು. ತನ್ನ ಒನಕೆಯ ಸಹಾಯದಿಂದ ಶತ್ರುಗಳನ್ನು ಸದೆ ಬಡೆದು ಚಿತ್ರದುರ್ಗ ಸಂಸ್ಥಾನವನ್ನು ರಕ್ಷಿಸಿದರು. ಓಬವ್ವನ ಶೌರ್ಯ ಹಾಗೂ ವೀರತನ ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂದರು.

  ಸಂಘದ ಮುಖ್ಯಸ್ಥೆ ಅಶಾಲತಾ ಪುಟ್ಟೇಗೌಡ ಮಾತನಾಡಿ, ನಮ್ಮ ಶ್ರೀರಂಗ ನಾಯಕಿ ಸಮಾಜದ ವತಿಯಿಂದ ಪ್ರತಿ ವರ್ಷ ಒನಕೆ ಓಬವ್ವನ ಹೆಸರಿನಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗಿದೆ. ಮಹಿಳೆಯರು ಸ್ವಾವಲಂಬಿ ಹಾಗೂ ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿದೆ ಎಂದರು.
  ಕಸಾಪ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ, ರೋಟರಿ ಅಧ್ಯಕ್ಷೆ ಅನುಪಮಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಸಂಯೋಜಕ ಗಣಪತಿ ಭಟ್, ಶೀಲಾ ನಂಜುಂಡಯ್ಯ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಇತರರಿದ್ದರು. ಓಬವ್ವನ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts