More

    ಯುಗಾದಿ ಹಬ್ಬದಂದು ತಪ್ಪದೇ ಈ ಕೆಲಸಗಳನ್ನು ಮಾಡಿ! ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ

    ಬೆಂಗಳೂರು: ‘ಯುಗಾದಿ…ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ, ಹೊಸ ವರುಷಕೆ, ಹೊಸ ಹರುಷವ ಹೊಸತು ಹೊಸತು ತರುತ್ತಿದೆ’ ಎಂಬ ಹಾಡು ಎಲ್ಲರಿಗೂ ಹಬ್ಬಕ್ಕೂ ಒಂದು ವಾರದ ಹಿಂದಿನಿಂದಲೇ ಶುರುವಾಗಿರುತ್ತದೆ. ಹಿಂದೂಗಳಿಗೆ ಹೊಸ ವರ್ಷ ಆರಂಭವಾಗುವುದೇ ಯುಗಾದಿ ಹಬ್ಬದಿಂದ ಎಂಬುದು ಹಿಂದೂ ಸಂಪ್ರದಾಯದಲ್ಲಿದೆ. ಈ ಹಬ್ಬದಂದು ಮಾಡುವ ಕೆಲವು ಕೆಲಸಗಳು ನಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಸಂತೃಪ್ತಿ ನೆಲೆಸುವಂತೆ ಮಾಡುತ್ತದೆ.

    ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕೃಷಿಯ ಮೂಲಗಳಿಂದ ಆದಾಯ ವೃದ್ಧಿ.

    ಎಂದಿನಂತೆ ಪ್ರತಿವರ್ಷವೂ ಮಾರ್ಚ್​ ಅಥವಾ ಏಪ್ರಿಲ್ ತಿಂಗಳ ಅಂತರದಲ್ಲಿ ಬರುವ ಯುಗಾದಿ ಹಬ್ಬವು ಈ ಬಾರಿ ಏಪ್ರಿಲ್ 09ರಂದು ಬಂದಿದೆ. ಈ ಹಬ್ಬದ ಮಹತ್ವ ಎಲ್ಲರಿಗೂ ತಿಳಿದೇ ಇದೆ. ಹಿಂದೂಗಳಿಗೆ ಯುಗಾದಿ ಹಬ್ಬದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ಈ ದಿನದಂದು ನಾವು ಎದ್ದ ಕೂಡಲೇ ವಿಶೇಷವಾಗಿ ಮಾಡಬೇಕಾದ ಕೆಲವು ಕಾರ್ಯಗಳಿವು. ಇದನ್ನು ಮಾಡಿದರೆ, ನಮ್ಮ ಜೀವನದಲ್ಲಿ ಸಕಲ ಐಶ್ವರ್ಯ, ಆನಂದ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.

    ಅಭ್ಯಂಜನ ಸ್ನಾನ: ಯುಗಾದಿ ಹಬ್ಬದ ದಿನ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಭ್ಯಂಜನ ಸ್ನಾನ ಮಾಡುವುದು ಬಹಳ ಒಳಿತು ಎಂದು ಹೇಳಲಾಗುತ್ತದೆ. ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿರುವ ಈ ಆಚರಣೆಯನ್ನು ಇಂದಿಗೂ ಅನೇಕರು ಕಟ್ಟುನಿಟ್ಟಾಗಿ ಹಬ್ಬದ ದಿನದಂದು ಪಾಲಿಸುತ್ತಾರೆ.

    ಇದನ್ನೂ ಓದಿ: ಬೆಲ್ಲವಷ್ಟೇ ಅಲ್ಲ ಬೇವು ಕೂಡ ನಮಗೆ ಸವಿಯಲ್ಲವೇ?!

    ಮನೆಗೆ ಮಾವಿನ ತೋರಣದಿಂದ ಅಲಂಕಾರ: ಹಬ್ಬ ಅಂದಮೇಲೆ ಸುಮ್ಮನಿರಲು ಹೇಗೆ ಸಾಧ್ಯ ಅಲ್ವಾ? ಮನೆಯನ್ನು ಮಾವಿನ ತೋರಣ ಹಾಗೂ ಹೂವುಗಳಿಂದ ಅಲಂಕರಿಸುವುದು ಬಹಳ ಮುಖ್ಯ. ಮನೆಯೊಳಗಿನ ಅಷ್ಟು ಬಾಗಿಲುಗಳಿಗೆ ಸೇರಿದಂತೆ ದೇವರ ಕೋಣೆಯ ಬಾಗಿಲಿಗೆ ಹೂವುಗಳಿಂದ ಅಲಂಕರಿಸಬೇಕು. ಇದರ ಜತೆಗೆ ಮನೆಯ ಮುಖ್ಯದ್ವಾರದಲ್ಲಿ ಚೆನ್ನಾಗಿ ಅಲಂಕಾರ ಮಾಡುವುದರಿಂದ ಕಣ್ಣಿಗೆ ಎಷ್ಟು ಹಿತವೆನ್ನಿಸುತ್ತದೆಯೋ, ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ, ಐಶ್ವರ್ಯ ಪಾಪ್ತಿಯಾಗುತ್ತದೆ ಎಂಬುದು ನಂಬಿಕೆ.

    ಇನ್ನು ಈ ವಿಶೇಷ ದಿನದಂದು ಮನೆಯಲ್ಲಿ ದೀಪವನ್ನು ಬೆಳಗಿಸಿ, ಲಕ್ಷ್ಮಿ ದೇವಿ ಆರಾಧಿಸಿ, ಕುಲದೇವರ ಪ್ರಾರ್ಥಿಸಿ, ಬೇವು-ಬೆಲ್ಲ ತಿಂದು, ಕುಟುಂಬ ಸಮೇತ ಹಬ್ಬದ ಊಟ ಸವಿದು, ಕೈಲಾದಷ್ಟು ದಾನ ಮಾಡಿದರೆ ಸಮೃದ್ಧಿ, ಸಂತೋಷ ಸಿದ್ಧಿಸುತ್ತದೆ ಎಂದು ನಮ್ಮ ಪೂರ್ವಜರು ಈ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಕೆಲವು ನಮ್ಮ ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ.

    ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts