More

    ಮೊದಲನೆ ದಿನವೇ ಯಶಸ್ವಿಯಾದ ಕರೊನಾ ಲಸಿಕೆ; ಯಾರೊಬ್ಬರಲ್ಲೂ ಅಡ್ಡ ಪರಿಣಾಮವಿಲ್ಲ

    ನವದೆಹಲಿ: ದೇಶದಲ್ಲಿ ಮೊದಲನೇ ದಿನದ ಕರೊನಾ ಲಸಿಕೆ ವಿತರಣೆ ಅಂತ್ಯವಾಗಿದೆ. ದೇಶಾದ್ಯಂತ 1.65 ಲಕ್ಷಕ್ಕೂ ಅಧಿಕ ಮಂದಿ ಮೊದಲನೇ ದಿನವೇ ಲಸಿಕೆ ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ಯಾರೊಬ್ಬರಲ್ಲೂ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.

    ಲಸಿಕೆಯನ್ನು ಮೊದಲನೇ ದಿನದಂದೇ 3 ಲಕ್ಷ ಜನರಿಗೆ ನೀಡುವುದಾಗಿ ಕೇಂದ್ರ ಸರ್ಕಾರ ಗುರಿ ನಿರ್ಧರಿಸಿಕೊಂಡಿತ್ತು. ಆದರೆ ಅದು ಸಾಧ್ಯವಾಗಿಲ್ಲ. ದೇಶದ 3,351 ಕೇಂದ್ರಗಳಲ್ಲಿ 1,65,714 ಜನರಿಗೆ ಲಸಿಕೆ ನೀಡಲಾಗಿದೆ. 16,755 ಜನರು ಲಸಿಕೆ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ತಿಳಿಸಿದ್ದಾರೆ.

    ಬಿಹಾರದಲ್ಲಿ 16,401 ಮಂದಿ, ದೆಹಲಿಯಲ್ಲಿ 3,403 ಮಂದಿ, ಗುಜರಾತ್​ನಲ್ಲಿ 8,557 ಮಂದಿ ಹಾಗೂ ಉತ್ತರ ಪ್ರದೇಶದಲ್ಲಿ 15,975 ಮಂದಿ ಲಸಿಕೆ ಪಡೆದಿದ್ದಾರೆ. ಅಸ್ಸಾಂನಲ್ಲಿ 65 ಕೇಂದ್ರ, ಬಿಹಾರದಲ್ಲಿ 301 ಕೇಂದ್ರ, ದೆಹಲಿಯಲ್ಲಿ 81 ಕೇಂದ್ರ, ಹರಿಯಾಣದಲ್ಲಿ 77 ಕೇಂದ್ರ, ಕರ್ನಾಟಕದಲ್ಲಿ 242 ಕೇಂದ್ರ, ಮಹಾರಾಷ್ಟ್ರದಲ್ಲಿ 285 ಕೇಂದ್ರ, ಒಡಿಸ್ಸಾದಲ್ಲಿ 181 ಕೇಂದ್ರ, ರಾಜಸ್ಥಾನದಲ್ಲಿ 167 ಕೇಂದ್ರ, ತಮಿಳುನಾಡಿನಲ್ಲಿ 160 ಕೇಂದ್ರ, ತೆಲಂಗಾಣದಲ್ಲಿ 140 ಕೇಂದ್ರ ಹಾಗೂ ಉತ್ತರ ಪ್ರದೇಶದ 370 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಲಸಿಕೆ ಬೇಡ ಎಂದಿದ್ದು ಅದಕ್ಕಲ್ಲ… ಇದಕ್ಕೆ… ವರಸೆ ಬದಲಿಸಿದ ಅಖಿಲೇಶ್​ ಯಾದವ್​

    ಬಡಪಾಯಿಗಳ ಬದಲು ಸಚಿವರು, ಶಾಸಕರು, ಅಧಿಕಾರಿಗಳ ಮೇಲೆ ಲಸಿಕೆ ಪ್ರಯೋಗವಾಗಲಿ: ಮಾಜಿ ಸಚಿವರ ವಿನಂತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts