More

    ಮೇ 17ರಂದು ನಮ್ಮ ಕಂಬಳ ಪ್ರಶಸ್ತಿ ಪ್ರದಾನ

    ಮಂಗಳೂರು: ನಗರದ ಸ್ಥಳೀಯ ಖಾಸಗಿ ವಾಹಿನಿ, ನಮ್ಮ ಕಂಬಳ ಟೀಂ ದುಬೈ ಹಾಗೂ ಸಂತ ಅಲೋಶಿಯಸ್ (ಪರಿಗಣಿತ ವಿ.ವಿ.) ಆಯೋಜನೆಯಲ್ಲಿ ಮೇ 17 ರಂದು ‘ನಮ್ಮ ಕಂಬಳ ಪ್ರಶಸ್ತಿ 2024’ ನಮ್ಮೂರ ಕಂಬಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

    ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ, ಸಂಜೆ 4 ಗಂಟೆಯಿಂದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಸಂತ ಅಲೋಶಿಯಸ್ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟೀಸ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಪ್ರಮುಖರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೃಷ್ಣ ಜೆ. ಪಾಲೆಮಾರ್, ರೋಹನ್ ಮೊಂತೇರೊ, ಕಿಶೋರ್ ಆಳ್ವ, ಪ್ರತಾಪ್ ಮಧುಕರ ಕಾಮತ್, ಪ್ರಶಾಂತ್ ಶೇಟ್, ಪ್ರೊ. ಗುಣಪಾಲ ಕಡಂಬ, ಭಾಸ್ಕರ ಕೋಟ್ಯಾನ್, ಡಾ. ಅದರ್ಶ ಗೌಡ ಭಾಗವಹಿಸಲಿದ್ದಾರೆ ಎಂದರು.

    ನಮ್ಮ ಕುಡ್ಲ ವಾಹಿನಿ ಸಿಇಒ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಕನೆ ಹಲಗೆ ಹಾಗೂ ಅಡ್ಡ ಹಲಗೆ ಪ್ರತ್ಯೇಕ ವಿಭಾಗಗಳಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ, ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯಕುಮಾರ ಶೆಟ್ಟಿ ಹೀಗೆ ಕೋಣಗಳ ಯಜಮಾನರಿಗೆ ಚಾಂಪಿಯನ್ ಅವಾರ್ಡ್ ನೀಡಲಾಗುವುದು ಎಂದರು.

    ಕನೆ ಹಲಗೆ ವಿಭಾಗದಲ್ಲಿ ಬೈಂದೂರು ಮಹೇಶ್ ಪೂಜಾರಿ, ಅಡ್ಡ ಹಲಗೆಯಲ್ಲಿ ಭಟ್ಕಳ ಹರೀಶ್, ಹಗ್ಗ ಹಿರಿಯ ವಿಭಾಗದಲ್ಲಿ ಬಂಬ್ರಾಣ ಬೈಲ್ ವಂದಿತ್ ಶೆಟ್ಟಿ, ಹಗ್ಗ ಕಿರಿಯ ವಿಭಾಗದಲ್ಲಿ ಭಟ್ಕಳ ಶಂಕರ ನಾಯ್ಕ, ನೇಗಿಲು ಹಿರಿಯ ವಿಭಾಗದಲ್ಲಿ ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ನೇಗಿಲು ಕಿರಿಯ ವಿಭಾಗದಲ್ಲಿ ಮಾಸ್ತಿಕಟ್ಟೆ ಸ್ವರೂಪ್ ಹೀಗೆ ಕೋಣಗಳ ಓಟಗಾರರಿಗೆ ಚಾಂಪಿಯನ್ ಅವಾರ್ಡ್ ನೀಡಲಾಗುವುದು. ಕನೆ ಹಲಗೆ ವಿಭಾಗದಲ್ಲಿ ಬೋಳಾರ ಕಾಳೆ ಮತ್ತು ಕುಟ್ಟಿ ಕೋಣ, ಅಡ್ಡ ಹಲಗೆಯಲ್ಲಿ ನಾರಾವಿ ಬಾಬು ಕೋಣ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಮೋಡೆ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಕಾರ್ಕಳ ನೆಕ್ಲಾಜೆ ಗುತ್ತು ಪಾಂಡು ಕೋಣ, ನೇಗಿಲು ಹಿರಿಯದಲ್ಲಿ ನಾವೊಂದ ಪುಟ್ಟೆ, ಕೋಣ ನೇಗಿಲು ಕಿರಿಯದಲ್ಲಿ ಮುನಿಯಾಲು ಕೋಟ ಹೊಸವಕ್ಳು ಮನೆ ಮೋಡ ಮತ್ತು ಜಿಂಕೆ ಹೀಗೆ ಕೋಣಗಳಿಗೆ ಚಾಂಪಿಯನ್ ಅವಾರ್ಡ್ ನೀಡಲಾಗುವುದು ಎಂದರು.

    *ಸರಣಿ ಶ್ರೇಷ್ಠ (ದ್ವಿತೀಯ) ಪ್ರಶಸ್ತಿ ವಿಜೇತರು

    ಕನೆ ಹಲಗೆ ವಿಭಾಗದಲ್ಲಿ ಕಾಂತಾವರ ಬೇಲಾಡಿ ಬಾ ಅಶೋಕ್ ಶೆಟ್ಟಿ/ಹವ್ಯನ್ ಪ್ರಜೋತ್ ಶೆಟ್ಟಿ, ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ರಕ್ಷಿತ್ ಯುವರಾಜ್ ಜೈನ್, ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ, ನೇಗಿಲು ಹಿರಿಯ ವಿಭಾಗದಲ್ಲಿ ಕಕ್ಕೆಪದವು ಪೆಂರ್ಗಾಲು ಕೃತಿಕ್ ಬಾಬು ತನಿಯಪ್ಪ ಗೌಡ, ನೇಗಿಲು ಕಿರಿಯ ವಿಭಾಗದಲ್ಲಿ ನಲ್ಲೂರು ಬಜಗೋಳಿ ಶಿಪ್ರಸಾದ್ ನಿಲಯ ದಿನೀಶ್ ಭಂಡಾರಿ, ನೇಗಿಲು ಕಿರಿಯ ವಿಭಾಗದಲ್ಲಿ ನಿಟ್ಟೆ ಪರಪ್ಪಾಡಿ ಹೊಸವಕ್ಲು ಸುರೇಶ್ ಕೋಟ್ಯಾನ್ ಅವರುಗಳಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

    *ಸರಣಿ ಶ್ರೇಷ್ಠ (ದ್ವಿತೀಯ) ಓಟಗಾರರಿಗೆ

    ಓಟಗಾರರ ವಿಭಾಗದಲ್ಲಿ ಕನೆ ಹಲಗೆ ವಿಭಾಗದಲ್ಲಿ ತೆಕ್ಕಟ್ಟೆ ಸುಧೀರ್ ದೇವಾಡಿಗ, ಅಡ್ಡ ಹಲಗೆ ವಿಭಾಗದಲ್ಲಿ ಸಾವ್ಯ ಗಂಗಯ್ಯ ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಆನಂದ್, ಹಗ್ಗ ಕಿರಿಯ ವಿಭಾಗದಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರು ಮಂಜುನಾಥ್ ಗೌಡ, ನೇಗಿಲು ಕಿರಿಯ ವಿಭಾಗದಲ್ಲಿ ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ ಇವರುಗಳಿಗೆ ಸರಣಿ ಶ್ರೇಷ್ಠ ದ್ವೀತಿಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಒಟ್ಟು 24 ಕಂಬಳಗಳ ಸಂಯೋಜಕರಿಗೆ ಗೌರವ ಸ್ಮರಣಿಕೆಯೊಂದಿಗೆ ಸಮ್ಮಾನಿಸಲಾಗುವುದು, ಕಂಬಳದ 24 ಮಂದಿ ತೀರ್ಪುಗಾರರಿಗೆ ಗೌರವ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಗುವುದು. ಕೋಣ ಬಿಡಿಸುವ ಅನುಭವಿಗಳಿಗೆ ನಮ್ಮ ಕಂಬಳ ಅಭಿನಂದನೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

    ಪ್ರಮುಖರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ ಕರ್ಕೇರ ಇದ್ದರು.

    —————–

    ನಮ್ಮ ಕಂಬಳ ಗೌರವ ಸನ್ಮಾನ, ವಿಶೇಷ ಗೌರವ

    ಎಸ್‌ಸಿಡಿಸಿಸಿ ಬ್ಯಾಂಕ್‌ಅಧ್ಯಕ್ಷ ಡಾ ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ರೋಹನ್ ಕಾರ್ಪೋರೇಷನ್ ಪ್ರೈ.ಲಿ. ನಿರ್ದೇಶಕ ರೋಹನ್ ಮೊಂತೇರೊ ಅವರಿಗೆ ನಮ್ಮ ಕಂಬಳ ಗೌರವ ನೀಡಿ ಸಮ್ಮಾನಿಸಲಾಗುವುದು. ಸೀತಾರಾಮ ಶೆಟ್ಟಿ-ಬಂಟ್ವಾಳ ಮಕಾಳಿಬೆಟ್ಟು ಮಲ್ಲಿಕಾ ಶೆಟ್ಟಿ ಬಳ್ಳುಂಜೆ, ಜಾನ್ ಸಿರಿಲ್ ಡಿಸೋಜಾ ಸರಪಾಡಿ (ಅಪ್ಪು), ಸಾನೂರು ಶ್ರೀಧರ ಆಚಾರ್ಯ ಅವರುಗಳಿಗೆ ನಮ್ಮ ಕಂಬಳ ವಿಶೇಷ ಗೌರವ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts