More

    ಫೆ.11ರಂದು ಜಿಕೆವಿಕೆಯಲ್ಲಿ ‘ಪ್ರಕೃತಿಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮ

    ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್ ಜಿಕೆವಿಕೆಯಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆ, ಕೃಷಿ ಅಧ್ಯಯನ ಹಾಗೂ ಇನ್ನಿತರ ಚಟುವಟಿಕೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ‘ಪ್ರಕೃತಿಯೆಡೆಗೆ ನಮ್ಮ ನಡಿಗೆ ಃ ಜಿಕೆವಿಕೆ’ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಭಾನುವಾರ (ಫೆ.11) ನಿಗದಿಯಾಗಿದೆ.

    ಈ ಕಾರ್ಯಕ್ರಮದ ಮೂಲಕ ವಿವಿ ಕೈಗೊಂಡಿರುವ ವಿವಿಧ ಕಾರ್ಯಗಳ ಚಿತ್ರವಣವನ್ನು ಜನರಿಗೆ ಕಟ್ಟಿಕೊಡುವ ಯತ್ನ ಮಾಡಲಾಗುತ್ತದೆ. ಸ್ವತ: ಇದರ ಅನುಭವ ಪಡೆದುಕೊಳ್ಳಲು ವಾಕಥಾನ್ ರೀತಿ ಕ್ಯಾಂಪಸ್‌ನ ವಿವಿಧೆಡೆ ಹರಡಿಕೊಂಡಿರುವ ಹಲವು ಕೇಂದ್ರಗಳು, ಸಸ್ಯಾಗಾರ, ಬೆಳೆ ತಾಕುಗಳು, ಹೊಸದಾಗಿ ಶೋಧಿಸಿರುವ ತಳಿಗಳ ಪ್ರಾತ್ಯಕ್ಷಿಕೆ ಕೂಡ ವೀಕ್ಷಿಸಿ ಮಾಹಿತಿ ಸಂಗ್ರಹಿಸಬಹುದಾಗಿದೆ. ಇದಲ್ಲದೆ ಮಣ್ಣ ರಹಿತ ಕೃಷಿ ಸಾಧ್ಯತೆಗಳ ಪ್ರಾತ್ಯಕ್ಷಿಕೆಯಾದ ‘ಹೈಡ್ರೋಫೋನಿಕ್ಸ್’, ರಾಜ್ಯದ ವಿವಿ ಭಾಗಗಳ ಮಣ್ಣು ಮಾದರಿಗಳ ಸಂಗ್ರಹ ‘ಪೆಡೋನಾರಿಯಂ’, ಜೇನು ಸಾಕಣೆಯ ಹೊಸ ಆಯಾಮ ಪರಿಚಯಿಸುವ ‘ಮಧುವನ’, ಜಿಕೆವಿಕೆ ಸಸ್ಯೋದಾನ ಸಹಿತ ಇನ್ನಿತರ ಪ್ರಮುಖ ವಿಭಾಗಗಳಿಗೆ ಭೇಟಿ ನೀಡಬಹುದಾಗಿದೆ.

    ಕಾರ್ಯಕ್ರಮವು ಅಂದು ಬೆಳಗ್ಗೆ 6.30ಕ್ಕೆ ನಡಿಗೆ ಆರಂಭಗೊಂಡು ಮಧ್ಯಾಹ್ನದವರೆಗೂ ನಡೆಯಲಿದೆ. ಇಂತಹ ವಿಶಿಷ್ಟ ಅನುಭವ ನೀಡಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 150 ಮಂದಿಗೆ ಮಾತ್ರ ಅವಕಾಶ ಇದೆ. ಹೀಗಾಗಿ ಮೊದಲೇ ಹೆಸರು ನೋಂದಾಯಿಸಿಕೊಳ್ಳಬಳಸಬಹುದು. ಶುಲ್ಕ 300 ರೂ. (ಭೋಜನ ಸೇರಿ) ಪಾವತಿಸಬೇಕಿದೆ. ಮಾಹಿತಿಗೆ ದೂ: 080-23625411 ಸಂಪರ್ಕಿಸಬಹುದು ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts