More

    VIDEO | ಧೋನಿ ಬರ್ತ್‌ಡೇಗೆ ಬ್ರಾವೊ ಹಾಡು, ಯುಟ್ಯೂಬ್‌ನಲ್ಲಿ ಭರ್ಜರಿ ಹಿಟ್

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ 39ನೇ ಜನ್ಮದಿನದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಸಹ-ಆಟಗಾರರಾಗಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇಯ್ನ ಬ್ರಾವೊ ತಾವೇ ಬರೆದು ಹಾಡಿರುವ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರ ವಿಡಿಯೋ ಯುಟ್ಯೂಬ್‌ನಲ್ಲಿ ಭರ್ಜರಿ ಹಿಟ್ ಆಗಿದೆ.

    ಧೋನಿ ಅವರನ್ನು ಅವರ ಅಭಿಮಾನಿಗಳಂತೆ ಸಹ-ಆಟಗಾರರೂ ಸಾಕಷ್ಟು ಪ್ರೀತಿಸುತ್ತಾರೆ. ಬ್ರಾವೊ ಕೂಡ ಅದರಲ್ಲೊಬ್ಬರು. ಧೋನಿ ಅವರನ್ನು ತಮ್ಮ ಸಹೋದರ ಎಂದೇ ಕರೆದಿರುವ ಬ್ರಾವೊ, ‘ಹೆಲಿಕಾಪ್ಟರ್ 7’ ಎಂಬ ಹೆಸರಿನ ಹಾಡನ್ನು ಸೋಮವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಧೋನಿ ಬರ್ತ್‌ಡೇಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.

    ಇದನ್ನೂ ಓದಿ: ಧೋನಿಗೆ 39 ವರ್ಷ, 39 ದಾಖಲೆಗಳು; ಟೀಮ್ ಇಂಡಿಯಾ ಮಾಜಿ ನಾಯಕನಿಗೆ ಜನ್ಮದಿನದ ಸಂಭ್ರಮ

    ಕೆಲ ದಿನಗಳ ಹಿಂದೆಯೇ ಹಾಡಿನ ವಿಡಿಯೋ ಬಿಡುಗಡೆ ಮಾಡಿ ‘ಹೆಲಿಕಾಪ್ಟರ್ ಸೆಲಬ್ರೇಷನ್’ಗೆ ಸಿದ್ಧರಾಗಿ ಎಂದಿದ್ದ ಬ್ರಾವೊ, ‘ಹೆಲಿಕಾಪ್ಟರ್ ಡ್ಯಾನ್ಸ್’ನ ಸವಾಲನ್ನೂ ಅಭಿಮಾನಿಗಳಿಗೆ ನೀಡಿದ್ದರು. ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಭಾರತ ತಂಡದ ಅತ್ಯುತ್ತಮ ನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆದ ಸಾಧನೆಯನ್ನು ಹಾಡಿನಲ್ಲಿ ಬ್ರಾವೊ ಬಣ್ಣಿಸಿದ್ದಾರೆ. ಈ ಹಾಡು ಸೋಮವಾರ ರಾತ್ರಿ ಬಿಡುಗಡೆಯಾದ ಬೆನ್ನಲ್ಲೇ 1.30 ಲಕ್ಷ ವೀವ್ಸ್‌ಗಳನ್ನು ಪಡೆದುಕೊಂಡಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಸುಮಾರು 4 ಲಕ್ಷದಷ್ಟು ಧೋನಿ ಅಭಿಮಾನಿಗಳು ಈ ಹಾಡಿನ ವಿಡಿಯೋ ನೋಡಿದ್ದು, 1.12 ಲಕ್ಷದಷ್ಟು ಜನರು ಲೈಕ್ಸ್ ಮಾಡಿದ್ದಾರೆ. ಜತೆಗೆ ಧೋನಿ ಮತ್ತು ಬ್ರಾವೊ ಅವರನ್ನು ಮೆಚ್ಚಿ ಕಮೆಂಟ್‌ಗಳನ್ನು ಹಾಕಿದ್ದಾರೆ.

    ‘ಮಹೀ ನೀವು ವಿಶ್ವದೆಲ್ಲೆಡೆಯ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದೀರಿ. ನಾವು ನಿಮ್ಮ ಜನ್ಮದಿನವನ್ನು ಸಂಭ್ರಮಿಸಲು ಸಜ್ಜಾಗುತ್ತಿರುವ ವೇಳೆ ನನ್ನ ತಂಡ, ನನ್ನ-ನಿಮ್ಮ ಅಭಿಮಾನಿಗಳ ಕಡೆಯಿಂದ ನಿಮಗೆ ಶುಭ ಹಾರೈಸುತ್ತೇನೆ. ಹೆಲಿಕಾಪ್ಟರ್ ಈಗ ಹಾರಾಟ ಆರಂಭಿಸಿದೆ. ಧೋನಿ ಹಾಡನ್ನು ಯುಟ್ಯೂಬ್‌ನಲ್ಲಿ ಹೋಗಿ ನೋಡಿ’ ಎಂದು ಬ್ರಾವೊ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts