More

    ಡಿ.12ರಂದು ಎಂ.ಎಸ್. ರಾಮಯ್ಯ ಆತ್ಮಕತೆ ’ರಾಮೈಯಾನಂ’ ಲೋಕಾರ್ಪಣೆ

    ಬೆಂಗಳೂರು ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಎಂ. ಎಸ್. ರಾಮಯ್ಯ ಅವರ ಆತ್ಮಕತೆ ’ರಾಮೈಯಾನಂ’ವನ್ನು ಇದೇ 12ರಂದು ಲೋಕಾರ್ಪಣೆಗೊಳ್ಳುತ್ತಿದೆ.

    ರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕಳೆದ ಮಾರ್ಚ್‌ನಲ್ಲಿ ’ಧೀಮಂತ ಸಾಹುಕಾರರು’ ಮತ್ತು ’ಅಪೂರ್ವ ಸಾಧಕ’ ಎಂಬ ಎರಡು ಕನ್ನಡ ಕೃತಿಗಳನ್ನು ಉಪರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದರು. ರಾಮಯ್ಯ ಅವರ ಜೀವನ ಕುರಿತು ದೇಶಾದ್ಯಂತ ಮಾಹಿತಿ ತಲುಪಬೇಕು ಎಂಬ ಉದ್ದೇಶದಿಂದ ಇಂಗ್ಲಿಷ್ ಭಾಷೆಯಲ್ಲಿ ಆತ್ಮಕತೆಯನ್ನು ಪ್ರಕಟಿಸಲಾಗುತ್ತಿದೆ.
    ನಗರದ ಖಾಸಗಿ ಹೋಟೆಲ್‌ನಲ್ಲಿ ಡಿ.12ರಂದು ಸಂಜೆ 4.30ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

    ಈ ಕುರಿತು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಕುಲ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಕೋದಂಡರಾಮ್ ರಾಮಯ್ಯ, ದೇಶದಲ್ಲಿ ಬಿಎಂಎಸ್ ಕಾಲೇಜಿನ ಬಳಿಕ ಎರಡನೇ ಖಾಸಗಿ ವಿದ್ಯಾಸಂಸ್ಥೆಯಾಗಿ ರಾಮಯ್ಯ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿದರು. ಬಳಿಕ 16 ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತೊಡಗಿದರು ಎಂದು ಹೇಳಿದರು.

    ಕಾಲೇಜು ಆರಂಭಿಸುವ ಮುನ್ನ ರಾಜ್ಯ ಮತ್ತು ದೇಶದ ವಿವಿಧ ಕಡೆ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಸಾಧನೆಯನ್ನು ಜನರಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ಪುಸ್ತಕವನ್ನು ಪ್ರಕಟಿಸಲಾಗಿದೆ. ಬರಹ ಮತ್ತು ಚಿತ್ರಗಳನ್ನು ಒಳಗೊಂಡಿರುವ 150 ಪುಟಗಳನ್ನು ಹೊಂದಿದೆ ಎಂದರು.

    ಲೇಖಕ, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಮಾತನಾಡಿ, ಮಧುಗಿರಿಯ ಸಾಮಾನ್ಯ ಕುಟುಂಬದಿಂದ ಬಂದು ರಾಮಯ್ಯ ಅವರು ದಂತಕತೆಯಾದವರು. ಮತ್ತಿಕೆರೆಯ ಚಿತ್ರಣವನ್ನೇ ಬದಲಾಯಿಸಿದ ರಾಮಯ್ಯ ಅವರ ಜೀವನದ ಹಲವು ಹೊಳಹುಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ನಾನು ಈ ಕೃತಿಯಲ್ಲಿ ಮಾಡಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts