More

    VIDEO| ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಹೋಯ್ತು ನವವಿವಾಹಿತ ರೈತನ ಪ್ರಾಣ: ಪೊಲೀಸರ ವಿರುದ್ಧ ಗಂಭೀರ ಆರೋಪ!

    ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್​ ರ್ಯಾಲಿಯ ವೇಳೆ ಕೇಂದ್ರ ದೆಹಲಿಯ ಐಟಿಒ ಜಂಕ್ಷನ್​ ಬಳಿ ಟ್ರ್ಯಾಕ್ಟರ್​ ಉರುಳಿಬಿದ್ದು ರೈತನೊಬ್ಬ ಮೃತಪಟ್ಟಿರುವುದಾಗಿ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.

    ಪೊಲೀಸರು ಮತ್ತು ರೈತರ ನಡುವಿನ ತಿಕ್ಕಾಟದಲ್ಲಿ ದುರ್ಘಟನೆ ಸಂಭವಿಸಿದ್ದು, ಪ್ರತಿಭಟನೆ ಕೂರುವ ಮುನ್ನ ಪೊಲೀಸರು ನಡೆಸಿದ ಫೈರಿಂಗ್​ನಲ್ಲಿ ರೈತ ಮೃತಪಟ್ಟಿದ್ದಾನೆಂದು ಇದೇ ವೇಳೆ ದೀನ ದಯಾಳ್​ ಉಪಾಧ್ಯಾಯ ಮಾರ್ಗದ ಬಳಿಯಿದ್ದ ರೈತರು ಆರೋಪಿಸಿದ್ದಾರೆ.

    ಇದನ್ನೂ ಓದಿರಿ: ನೀ ಬಂದ ಮೇಲೆ ಸಾಲ ಹೆಚ್ಚಾಯಿತೆಂದು ಸೊಸೆಯನ್ನು ಹೀಯಾಳಿಸಿದ ಮಾವ; ಕೆಲವೇ ದಿನಗಳಲ್ಲಿ ಹಾದಿಯ ಹೆಣವಾದ

    ವೈರಲ್​ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ವೇಗವಾಗಿ ಬರುತ್ತಿದ್ದ ನೀಲಿ ಬಣ್ಣದ ಟ್ರ್ಯಾಕ್ಟರ್​, ದೆಹಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್​ ಗುದ್ದಿ ಎರಡು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆಯುತ್ತದೆ.

    ಮೃತ ರೈತನನ್ನು ನವದೀಪ್​ ಸಿಂಗ್​ ಹುಂಡಾಲ್​ಗ (26) ಎಂದು ಗುರುತಿಸಲಾಗಿದ್ದು, ಈತ ಉತ್ತರಖಂಡದ ಬಜ್ಪುರ್​ ಏರಿಯಾ ನಿವಾಸಿ. ನವದೀಪ್​ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಪೊಲೀಸರು ಮಾಡಿದ ಫೈರಿಂಗ್​ನಿಂದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟನೆಂದು ಉತ್ತರಖಂಡದ ಇತರೆ ಇಬ್ಬರು ರೈತರು ಆರೋಪ ಮಾಡಿದ್ದಾರೆ. ಮಧ್ಯಾಹ್ನದ ಬಳಿಕ ನವದೀಪ್​ ಮೃತದೇಹವನ್ನು ಸ್ಥಳದಿಂದ ತೆಗೆಯಲು ರೈತರು ಅನುಮತಿ ನೀಡಿದರು.

    ಗಣರಾಜ್ಯೋತ್ಸವ ದಿನದಂದೇ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್​ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರು ಮತ್ತು ರೈತರ ನಡುವೆ ತೀವ್ರ ತಿಕ್ಕಾಟ ನಡೆಯಿತು. ಈ ವೇಳೆ ರೈತರನ್ನು ಚೆದುರಿಸಲು ಲಾಠಿಚಾರ್ಜ್​ ಮತ್ತು ಅಶ್ರುವಾಯು ಬಳಸಲಾಯಿತು. ಉದ್ರಿಕ್ತ ರೈತರು ಪೊಲೀಸರು ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೇಡ್​ಗಳನ್ನು ಕಿತ್ತೆಸೆದು, ಕೆಂಪುಕೋಟೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. (ಏಜೆನ್ಸೀಸ್​)

    ಇದನ್ನೂ ಓದಿರಿ: ಆ ಒಂದು ವಾಟ್ಸ್​ಆ್ಯಪ್​ ಮೆಸೇಜ್​ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!

    ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!

    ಮತ್ತೊಬ್ಬರ ನೋವು ಅರ್ಥವಾಗದ ಆದಿತ್ಯಾನಾಥ ನಿಜವಾದ ಯೋಗಿಯಲ್ಲ; ಬಿಜೆಪಿ ಕಾಲೆಳೆದ ಅಖಿಲೇಶ್​ ಯಾದವ್​

    ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts