More

    26ರಂದು ಉಪಾಧ್ಯಕ್ಷ ಚಿತ್ರ ಬೆಳ್ಳಿ ತೆರೆಗೆ

    ಶಿವಮೊಗ್ಗ: ಕನ್ನಡ ಸಿನಿಪ್ರಿಯರ ಬಹು ನಿರೀಕ್ಷಿಯ ಚಿತ್ರ, ಹಾಸ್ಯ ನಟ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಇದೇ ಜ.26ಕ್ಕೆ ತೆರೆ ಕಾಣಲಿದೆ. ಹೀಗಾಗಿ ಚಿತ್ರತಂಡ ಪ್ರಮೋಷನ್‌ಗೆಂದು ಪ್ರವಾಸ ಕೈಗೊಂಡಿದೆ. 10 ವರ್ಷಗಳ ಹಿಂದೆ ಅದ್ಭುತ ಯಶಸ್ಸು ಕಂಡಿದ್ದ ಶರಣ್ ಅಭಿನಯದ ಅಧ್ಯಕ್ಷ ಸಿನಿಮಾದ ಮುಂದುವರಿದ ಭಾಗವೇ ಉಪಾಧ್ಯಕ್ಷ ಎಂದು ಚಿತ್ರದ ನಿರ್ದೇಶಕ ಅನಿಲ್‌ಕುಮಾರ್ ಸಿನಿಮಾದ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿವೆ. ಪ್ರೀತಿಯ ಹಂದರವನ್ನೊಳಗೊಂಡ ಚಿತ್ರಕತೆಯಲ್ಲಿ ಹಾಸ್ಯಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಕುಟುಂಬ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಚಿತ್ರವಿದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಚಿಕ್ಕಣ್ಣ ಇದುವರೆಗೆ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿಮಾನಿಗಳ ಬಳಗ ದೊಡ್ಡದಿದೆ. ಈ ಚಿತ್ರವನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಉಪಾಧ್ಯಕ್ಷನಿಗೆ ವ್ಯಾಪಕ ಬೆಂಬಲ ಸಿಗುವ ನಿರೀಕ್ಷೆಯಿದೆ ಎಂದರು.
    ನಟ ಚಿಕ್ಕಣ್ಣ ಮಾತನಾಡಿ, ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಚಿತ್ರದ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾಕ್ಕೆ ಉತ್ತಮ ಚಿತ್ರಕತೆಯಿದೆ. ಕತೆಯಲ್ಲಿ ಗ್ರಾಮೀಣ ಸೊಗಡಿದೆ. ಟೀಸರ್ ಹಾಗೂ ಟ್ರೇಲರ್ ಗಮನ ಸೆಳೆದಿವೆ. ಇದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ ಎಂದು ಹೇಳಿದರು.
    ಚಿತ್ರದ ನಾಯಕಿ ಮಲೈಕಾ, ಕಿರುತೆರೆಯಲ್ಲಿ ಅಭಿನಯಿಸಿದ ಅನುಭವ ಹೊಂದಿರುವ ನಾನು ಉಪಾಧ್ಯಕ್ಷನ ಮೂಲಕ ಮೊದಲ ಬಾರಿಗೆ ನಾಯಕಿಯಾಗಿದ್ದೇನೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಲ್ಲ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ಹಾಸ್ಯದ ಹೊನಲು ಹರಿದಿದೆ. ಹೀಗಾಗಿ ಯಶಸ್ಸು ಕಾಣುವ ವಿಶ್ವಾಸವಿದೆ ಎಂದರು. ನಟ ಧರ್ಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts