More

  18ರಂದು ಮಲಪ್ರಭಾ ನದಿ ಸ್ವಚ್ಛತಾ ಆಂದೋಲನ

  ಬೈಲಹೊಂಗಲ: ಕಲುಷಿಗೊಳ್ಳುತ್ತಿರುವ ಮಲಪ್ರಭಾ ನದಿ ನೀರಿನ ರಕ್ಷಣೆ, ಜನತೆಯ ಆರೋಗ್ಯದ ದೃಷ್ಟಿಯಿಂದ ಮಲಪ್ರಭಾ ನದಿ ಸ್ವಚ್ಛತಾ ಆಂದೋಲನ ಅಭಿಯಾನವನ್ನು ಜಾಲಿಕೊಪ್ಪದ ನಿರ್ಮಲ ಮಲಪ್ರಭಾ ಕರ್ತೃ ಶಿವಾನಂದ ಗುರುಜಿ ಸಾನ್ನಿಧ್ಯದಲ್ಲಿ ಡಿ.17ರಂದು ಬೆಳಗ್ಗೆ 8 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಸ್ತುಗಳನ್ನು ಹಾಗೂ ನದಿ ದಡದ ಮೇಲೆ ಅನಧಿಕೃತವಾಗಿ ಮೀನು ಮಾರಾಟ ಮಾಡಿ ಮೀನಿನ ತ್ಯಾಜ್ಯ ಎಸೆಯಲಾಗುತ್ತಿದೆ. ರಸ್ತೆ ನಿರ್ಮಾಣ ಗುತ್ತಿಗೆ ಪಡೆದಿರುವ ಕಂಪನಿ ನದಿಗೆ ಸೇರಿಸುತ್ತಿದ್ದು, ನೀರು ಕಲುಷಿತವಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡಿ ಜನರು ಅನಾರೋಗ್ಯ ಪೀಡಿತರಾಗುತ್ತಿದ್ದು, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಮಳೆಗಾಲ ಕಡಿಮೆಯಾಗಿರುವುದರಿಂದ ನಿಂತ ನೀರು ಮತ್ತಷ್ಟು ಮಲೀನವಾಗುತ್ತಿದೆ.

  ನೀರಿನ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಎಲ್ಲರೂ ಸೇರಿಕೊಂಡು ಮಲಪ್ರಭೆ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನವಿ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ರೈತ ಮುಖಂಡ ಮಹಾಂತೇಶ ಕಮತ, ಮಡಿವಾಳಪ್ಪ ಹೋಟಿ, ಸುರೇಶ ಹೋಳಿ, ಬಸವರಾಜ ನೇಸರಗಿ, ಮಡಿವಾಳಪ್ಪ ಬುಳ್ಳಿ, ವಿಠಲ ವಕ್ಕುಂದ, ಮಡಿವಾಳಪ್ಪ ಚಳಕೊಪ್ಪ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts