More

    ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಬೆಂಗಳೂರು: ಒಮಿಕ್ರಾನ್​ ಅಪಾಯಕಾರಿ ಅಲ್ಲ ಎನ್ನುವ ಜತೆಜತೆಗೆ ಅದು ಅಪಾಯಕಾರಿ ಕೂಡ ಎನ್ನುವ ಮಾತುಗಳೂ ಕೇಳಿಬರುತ್ತಿದ್ದು, ಇದೀಗ ಜನರು ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಏಕೆಂದರೆ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವವರಿಗೂ ಒಮಿಕ್ರಾನ್ ಬಂದಿದೆ.

    ಕೋವಿಡ್​ನ ರೂಪಾಂತರಿ ‘ಒಮಿಕ್ರಾನ್​’ ಅಷ್ಟೇನೂ ಅಪಾಯಕಾರಿ ಅಲ್ಲ ಎಂದು ಕೆಲವು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಿಗೇ ಒಮಿಕ್ರಾನ್​ ಜಾಗತಿಕವಾಗಿ ಅಪಾಯಕಾರಿ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೊರಗೆಡಹಿದೆ. ಕೋವಿಡ್​ನ ಹೊಸ ರೂಪಾಂತರಿ ಒಮಿಕ್ರಾನ್​ ಅಧಿಕ ಮ್ಯುಟೇಷನ್​ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನೂ ದಾಟಿ ವ್ಯಾಪಕವಾಗಿ ಹರಡಬಲ್ಲಂಥದ್ದು ಎಂಬುದು ತಿಳಿದುಬಂದಿದೆ. ಅದಾಗ್ಯೂ ಒಮಿಕ್ರಾನ್​ ಕುರಿತು ಖಚಿತ ಮಾಹಿತಿಗಳ ಕೊರತೆ ಇನ್ನೂ ಇರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಇನ್ನು ಬೆಂಗಳೂರಿನಲ್ಲಿ ಪತ್ತೆಯಾಗಿರುವ, ಭಾರತದ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳ ಹಿನ್ನೆಲೆ ಇದೀಗ ಒಮಿಕ್ರಾನ್ ಕುರಿತ ಆತಂಕವನ್ನು ಹೆಚ್ಚಿಸಿದೆ. 46 ಮತ್ತು 66 ವರ್ಷದ ಇಬ್ಬರಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಒಮಿಕ್ರಾನ್ ಸೋಂಕು ಪತ್ತೆಯಾಗಿರುವ 66 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕದ ಪ್ರಜೆಯಾಗಿದ್ದು, ಆತ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೂ ಒಮಿಕ್ರಾನ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.

    ಇದನ್ನೂ ಓದಿ: ಕಾಂಪ್ರೊಮೈಸ್ ಅನ್ನೋದು​ ಇಲ್ಲವೇ ಇಲ್ಲ ಎಂದ ಅರ್ಜುನ್ ಸರ್ಜಾ: ಮೀಟೂ ಪ್ರಕರಣ ಕುರಿತು ಏನೂ ಹೇಳದೆ ‘ಸತ್ಯ’ ತೆರೆದಿಟ್ರು..

    ಇನ್ನೊಂದೆಡೆ 46 ವರ್ಷದ ವ್ಯಕ್ತಿ ಸ್ಥಳೀಯ ವೈದ್ಯರಾಗಿದ್ದು, ಅವರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಅಂದರೆ ಅವರು ಬೆಂಗಳೂರು ಬಿಟ್ಟು ಹೊರಗೆಲ್ಲೂ ಹೋಗಿಲ್ಲ. ಅದಾಗ್ಯೂ ಭಾರತ ಬಿಟ್ಟು ಜಗತ್ತಿನ ಹತ್ತಕ್ಕೂ ಅಧಿಕ ಇತರ ದೇಶಗಳಲ್ಲಿದ್ದ ಒಮಿಕ್ರಾನ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಅಲ್ಲದೆ ಇವರೊಂದಿಗೆ 13 ಮಂದಿ ಪ್ರಾಥಮಿಕ ಹಾಗೂ 205 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದರು. ಆ ಪೈಕಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರಲ್ಲಿ ಕೋವಿಡ್​ ಸೋಂಕಿರುವುದು ದೃಢಪಟ್ಟಿದೆ.

    ಇದನ್ನೂ ಓದಿ: ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…

    ಈ ಎಲ್ಲ ಕಾರಣದಿಂದಾಗಿ ಒಮಿಕ್ರಾನ್​ ಕುರಿತ ಆತಂಕ ಹೆಚ್ಚಾಗಿದೆ. ಮಾತ್ರವಲ್ಲ ಎರಡು ಕೇಸ್ ಮಾತ್ರವಲ್ಲದೆ ಇನ್ನೂ ಹೆಚ್ಚಿನ ಜನರಲ್ಲಿ ಒಮಿಕ್ರಾನ್ ಇರುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ದಾರೆ. ಆದ್ದರಿಂದ ಜನರು ಹಿಂದೆಂದಿಗಿಂತಲೂ ಎಚ್ಚರಿಕೆಯಿಂದ ಇರುವುದು ಮತ್ತು ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಎನ್ನಲಾಗಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಒಮಿಕ್ರಾನ್ ಸೋಂಕಿತರ​ ಸಂಪರ್ಕಿತ ಐವರಲ್ಲಿ ಕೋವಿಡ್​ ಸೋಂಕು!; ನಗರದಲ್ಲಿ ಮತ್ತಷ್ಟು ಜನರಲ್ಲಿ ಒಮಿಕ್ರಾನ್​ ಸೋಂಕಿರುವ ಶಂಕೆ…

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts