More

    ಅಮ್ಮ ಕರೊನಾದಿಂದ ಬಳಲುತ್ತಿದ್ದರೂ ಸ್ಪರ್ಧಿಸಿ ಒಲಿಂಪಿಕ್ಸ್ ಅರ್ಹತೆ ಪಡೆದ ಭವಾನಿ ದೇವಿ!

    ನವದೆಹಲಿ: ತಮಿಳುನಾಡಿನ ಕತ್ತಿವರಸೆ ಪಟು ಭವಾನಿ ದೇವಿ ಕಳೆದ ಮಾರ್ಚ್‌ನಲ್ಲಿ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ ಭಾರತದ ಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ವೇಳೆ ತಾವು ಎದುರಿಸುತ್ತಿದ್ದ ವೈಯಕ್ತಿಕ ನೋವಿನ ಬಗ್ಗೆ ಭವಾನಿ ದೇವಿ ಅವರು ಇದೀಗ ಹೇಳಿಕೊಂಡಿದ್ದಾರೆ.

    ಮಾರ್ಚ್‌ನಲ್ಲಿ ಭವಾನಿ ದೇವಿ ಅವರ ಅಮ್ಮ ಕರೊನಾ ಸೋಂಕಿಗೆ ತುತ್ತಾಗಿ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಇದರಿಂದಾಗಿ ಅವರು ಹಂಗೆರಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಫೆನ್ಸಿಂಗ್ ಟೂರ್ನಿಯನ್ನೇ ತಪ್ಪಿಸಿಕೊಳ್ಳುವ ಚಿಂತನೆ ನಡೆಸಿದ್ದರು. ಆದರೆ ಅಮ್ಮನೇ ಹುರಿದುಂಬಿಸಿ ಅವರನ್ನು ಸ್ಪರ್ಧೆಗೆ ಕಳುಹಿಸಿದ್ದರು. ಇದರಿಂದಾಗಿ ಭವಾನಿ ದೇವಿ ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಾಯಿತು.

    ಇದನ್ನೂ ಓದಿ: ಕರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ಸಂಗ್ರಹಿಸಿದ ಕೊಹ್ಲಿ-ಅನುಷ್ಕಾ

    ‘ಬುಡಾಪೆಸ್ಟ್‌ನಲ್ಲಿ ನಡೆದ ಸ್ಪರ್ಧೆಗೆ ತೆರಳುವ ಮುನ್ನ ನನ್ನ ಅಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೋವಿಡ್ ಪಾಸಿಟಿವ್ ಆಗಿದ್ದರು. ಸುಮಾರು 2 ತಿಂಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು. ಆ ಸಮಯದಲ್ಲಿ ನಾನು ಸ್ಪರ್ಧೆಯಿಂದಲೇ ಹಿಂದೆ ಸರಿಯುವ ಬಗ್ಗೆ ಚಿಂತಿಸಿದ್ದೆ. ಅಮ್ಮನ ಜತೆಗಿರುವುದೇ ನನಗೆ ಮುಖ್ಯವೆನಿಸಿತ್ತು. ಆದರೆ ಅಮ್ಮ ನನಗೆ ಚಿಂತೆ ಮಾಡದಂತೆ ಹೇಳಿದರು. ಸ್ವಲ್ಪ ಸಮಯ ವಿಶ್ರಾಂತಿ ಪಡೆದರೆ ಎಲ್ಲವೂ ಸರಿಯಾಗುತ್ತದೆ. ನಾನು ಬೇಗನೆ ಮನೆಗೆ ಬರುವೆ. ನೀನು ನಿನ್ನ ಕ್ರೀಡೆಯತ್ತ ಗಮನಹರಿಸು ಎಂದಿದ್ದರು’ ಎಂದು 27 ವರ್ಷದ ಭವಾನಿ ದೇವಿ ಹೇಳಿದ್ದಾರೆ. ಅವರು ಸದ್ಯ ಇಟಲಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅಲ್ಲಿಂದಲೇ ನೇರವಾಗಿ ಟೋಕಿಯೊಗೆ ತೆರಳಲಿದ್ದಾರೆ.

    ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ನಾಯಕತ್ವ ರೇಸ್‌ನಲ್ಲಿ ಧವನ್, ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts