More

    VIDEO: ಆಶಸ್ ಪಂದ್ಯದ ನಡುವೆ ಸ್ಪಿನ್ನರ್ ಆದ ಇಂಗ್ಲೆಂಡ್ ವೇಗಿ ರಾಬಿನ್‌ಸನ್!

    ಅಡಿಲೇಡ್: ಕ್ರಿಕೆಟ್‌ನಲ್ಲಿ ವೇಗದ ಬೌಲರ್ ವೇಗದ ಎಸೆತಗಳನ್ನು ಎಸೆಯುವುದರಲ್ಲಿ ತಜ್ಞರಾಗಿದ್ದರೆ, ಸ್ಪಿನ್ನರ್‌ಗಳು ಚೆಂಡನ್ನು ತಿರುಗಿಸುವುದರಲ್ಲಿ ಪರಿಣತರು. ವೇಗದ ಬೌಲರ್‌ಗಳಿಗೆ ಸ್ಪಿನ್ ಬೌಲಿಂಗ್ ಬಗ್ಗೆ ಹೆಚ್ಚಿನ ಜ್ಞಾನವೂ ಇರುವುದಿಲ್ಲ. ಆದರೆ, ಇಂಗ್ಲೆಂಡ್ ವೇಗದ ಬೌಲರ್ ಒಲಿ ರಾಬಿನ್‌ಸನ್ ಅಡಿಲೇಡ್ ಟೆಸ್ಟ್ ಪಂದ್ಯದ 4ನೇ ದಿನ ಆಫ್​ ಸ್ಪಿನ್ನರ್ ಆಗಿ ಬದಲಾಗಿದ್ದರು!

    ತಂಡದ ಓವರ್‌ಗತಿ ಸುಧಾರಣೆಗಾಗಿ ಅವರು ಈ ರೀತಿ ಮಾಡಬೇಕಾಗಿ ಬಂದಿತ್ತು. ಕಳೆದ ಪಂದ್ಯದಲ್ಲಿನ ನಿಧಾನಗತಿ ಓವರ್‌ಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 8 ಅಂಕ ಕಡಿತಗೊಂಡಿದ್ದ ಕಾರಣ ಇಂಗ್ಲೆಂಡ್ ತಂಡಕ್ಕೆ ಇನ್ನಷ್ಟು ಹೊಡೆತ ಬೀಳದಿರಲೆಂದು ಓವರ್‌ಗತಿ ಸುಧಾರಿಸಲು ಅವರು ಈ ಮೂಲಕ ನೆರವಾದರು. ಐವರು ವೇಗಿಗಳೊಂದಿಗೆ ಕಣಕ್ಕಿಳಿದಿರುವ ಇಂಗ್ಲೆಂಡ್ ತಂಡದ ನಾಯಕ ಹಾಗೂ ಅರೆಕಾಲಿಕ ಸ್ಪಿನ್ನರ್ ಜೋ ರೂಟ್ ಕೂಡ 4ನೇ ದಿನದಾರಂಭದಲ್ಲಿ ಗಾಯದಿಂದಾಗಿ ಕಣಕ್ಕಿಳಿಯಲಿಲ್ಲ. ಹೀಗಾಗಿ ರಾಬಿನ್‌ಸನ್ 3 ಓವರ್ ಸ್ಪಿನ್ ಬೌಲಿಂಗ್ ಮಾಡಿದರು.

    ಪಿಂಕ್ ಚೆಂಡಿನಲ್ಲಿ ಅವರಿಗೆ ಸ್ವಲ್ಪ ತಿರುವು ಕೂಡ ಲಭಿಸಿತು. ಅಂದ ಹಾಗೆ ರಾಬಿನ್‌ಸನ್ ಸ್ಪಿನ್ ಬೌಲಿಂಗ್ ಮಾಡಿದ್ದು ಇದೇ ಮೊದಲಲ್ಲ. ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ಪರ 26 ಓವರ್ ಸ್ಪಿನ್ ಬೌಲಿಂಗ್ ಮಾಡಿದ ಅನುಭವಿ ಅವರಾಗಿದ್ದಾರೆ. ವೇಗಿಯಾಗಿ 2 ವಿಕೆಟ್ ಕಬಳಿಸಿದ್ದ ರಾಬಿನ್‌ಸನ್‌ಗೆ ಸ್ಪಿನ್ ಬೌಲರ್ ಆಗಿ ವಿಕೆಟ್ ಲಭಿಸದಿದ್ದರೂ, ಆಸೀಸ್ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್‌ರಿಂದ ಮೆಚ್ಚುಗೆ ಲಭಿಸಿತು.

    ರಾಬಿನ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗಿಯಾಗಿ ಕಣಕ್ಕಿಳಿದು ಸ್ಪಿನ್ ಬೌಲಿಂಗ್ ಮಾಡಿದ ಮೊದಲಿಗರೇನಲ್ಲ. 2000-01ರ ಅಡಿಲೇಡ್ ಟೆಸ್ಟ್‌ನಲ್ಲಿ ಆಸೀಸ್ ವೇಗಿ ಕಾಲಿನ್ ಮಿಲ್ಲರ್ ಗಾಯದಿಂದಾಗಿ ಸ್ಪಿನ್ನರ್ ಆಗಿ ಬದಲಾಗಿದ್ದು ಮಾತ್ರವಲ್ಲದೆ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts