More

    ‘ಮೋದಿ’ಯನ್ನು ಭ್ರಷ್ಟಾಚಾರಕ್ಕೆ ಹೋಲಿಸಿದ್ದ ಖುಷ್ಬು ಟ್ವೀಟ್ ವೈರಲ್ : ‘ನನ್ನ ಕರ್ತವ್ಯ ನಿಭಾಯಿಸಿದ್ದೆ’ ಎಂದಿದ್ದೇಕೆ ಬಿಜೆಪಿ ನಾಯಕಿ?

    ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಈ ಹಿಂದೆ ಕೋಲಾರ ಪ್ರವಾಸದ ವೇಳೆ ಮಾಡಿದ ‘ಎಲ್ಲ ಕಳ್ಳರಿಗೂ ಮೋದಿ ಎಂಬುದೇ ಸಾಮಾನ್ಯ ಉಪನಾಮ ಹೇಗೆ’ ಎಂಬ ಹೇಳಿಕೆಗೆ ಗುಜರಾತ್​ ನ್ಯಾಯಾಲಯ ‘ದೋಷಿ’ ಎಂದು ತೀರ್ಪು ನೀಡಿದ್ದು, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಇದರ ಪರಿಣಾಮ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದು ಗೊತ್ತೇ ಇದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆಗ ಕಾಂಗ್ರೆಸ್​ನಲ್ಲಿದ್ದ ಪ್ರಸ್ತುತ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಮುಖ್ಯಸ್ಥೆ ಖುಷ್ಬು ಸುಂದರ್ ಮಾಡಿದ್ದ 2018ರ ನಂತರ ಮಾಡಿದ್ದ ಟ್ವೀಟ್​ಗಳು ಶನಿವಾರ ವೈರಲ್​ ಆಗಿವೆ.

    ಇದನ್ನೂ ಓದಿ: ತೇಜಸ್​​ ಏರ್​ಕ್ರಾಫ್ಟ್​ನಲ್ಲಿ ಪ್ರಧಾನಿ ಹಾರಾಟ- ದೇಶೀಯ ಸಾಮರ್ಥ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಮೋದಿ
    ಆಗ ಕಾಂಗ್ರೆಸ್​ನಲ್ಲಿದ್ದ ಖುಷ್ಬು ಟ್ವೀಟ್‌ನಲ್ಲಿ, “ಮೋದಿ ಎಲ್ಲೆಡೆ ಇದ್ದಾನೆ… ಪ್ರತಿಯೊಬ್ಬ ಮೋದಿಯ ನಂತರದ ಉಪನಾಮ ಭ್ರಷ್ಟಾಚಾರ” ಎಂದು ಹೇಳಿದ್ದರು.
    ಇದೆಲ್ಲ ಅವರು ಕಾಂಗ್ರೆಸ್​ನಲ್ಲಿದ್ದಾಗ ಆ ಪಕ್ಷವನ್ನು ಸಮರ್ಥಿಸಿಕೊಳ್ಳಲಿಕ್ಕೆ ಮಾಡಿದ್ದಾಗಿತ್ತು. 2020 ರಲ್ಲಿ ಅವರು ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾದರು. ಬಳಿಕ ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರೂ ಆದರು. ಆದರೆ ಅವರು ಮೋದಿಯವರನ್ನು ಟೀಕಿಸಿದ್ದ ಟ್ವೀಟ್ ಅನ್ನು ಅಳಿಸಲಿಲ್ಲ. ಹೀಗಾಗಿಯೇ ಕಾಂಗ್ರೆಸ್ ಈಗ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಪಕ್ಷದ ನಾಯಕ ಮತ್ತು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಟ್ವಿಟ್ಟರ್ ಪೋಸ್ಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ “ನಿಮ್ಮ ಶಿಷ್ಯೆ ಖುಷ್ಬು ಸಹ ಎಲ್ಲ ಕಳ್ಳರಿಗೂ ಮೋದಿ ಉಪನಾಮ ಹೇಗೆ ಎಂದು ಪ್ರಶ್ನಿಸಿದ್ದರು. ಈಗ ಅವರು ನಿಮ್ಮ ಪಕ್ಷದಲ್ಲೇ ಇದ್ದಾರೆ. ಅವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವಂತೆ ಮಾಡುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

    ಖುಷ್ಬು ಪ್ರತಿಕ್ರಿಯೆ: ದಿಗ್ವಿಜಯ ಸಿಂಗ್ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಖುಷ್ಬು “ಕಾಂಗ್ರೆಸ್ ಹತಾಶವಾಗಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಅವರು ಎತ್ತುತ್ತಿರುವ ವಿಷಯದ ಬಗ್ಗೆ ಅವರ ಅಜ್ಞಾನದ ಮಟ್ಟವನ್ನು ಇದು ಬಹಿರಂಗಪಡಿಸುತ್ತದೆ” ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

    “ನನ್ನ ಟೈಮ್‌ಲೈನ್‌ನಲ್ಲಿರುವ ಯಾವುದೇ ಟ್ವೀಟ್‌ಗಳನ್ನು ನಾನು ಅಳಿಸಿಲ್ಲ ಮತ್ತು ನಾನು ಈಗ ಹಾಗೆ ಮಾಡುವುದಿಲ್ಲ. “ಕಾಂಗ್ರೆಸ್ ನಾಯಕರು ನನ್ನನ್ನು ಆರಿಸಿಕೊಂಡು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ? ಅವರು ನನ್ನನ್ನು ರಾಹುಲ್ ಗಾಂಧಿಗೆ ಹೋಲಿಸುತ್ತಿದ್ದಾರೆಯೇ? ನಾನು ಹಾಗೆ ಟ್ವೀಟ್​ ಮಾಡಿದಾಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಕಾಂಗ್ರೆಸ್‌ ವಕ್ತಾರೆಯಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೆ. ಇದು ನಾವು ಮಾತನಾಡಬೇಕಾಗಿದ್ದ ಭಾಷೆ ಮತ್ತು ಅದನ್ನೇ ನಾನು ಮಾಡುತ್ತಿದ್ದೆ. ನಾನು ಅನುಸರಿಸುತ್ತಿದ್ದೆ. ನಾವು ಕೇವಲ “ನೀರವ್​ ಮೋದಿಯನ್ನು ಭ್ರಷ್ಟಾಚಾರದೊಂದಿಗೆ ಸಮೀಕರಿಸಿದರೆ, ರಾಹುಲ್​ ಗಾಂಧಿ “ಎಲ್ಲಾ ಮೋದಿಗಳನ್ನು ಕಳ್ಳರು ಎಂದು ಕರೆಯುವ ಮಟ್ಟಕ್ಕೆ ಇಳಿದರು” ಎಂದು ಅವರು ಹೇಳಿದರು.

    “ಕಾಂಗ್ರೆಸ್ ಪಕ್ಷವು ವ್ಯತ್ಯಾಸವನ್ನು ನೋಡಲು ಅಸಮರ್ಥವಾಗಿದೆ. ಆದರೆ ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸು ದಾಖಲಿಸಸಲಿ, ಕಾನೂನಾತ್ಮಕವಾಗಿ ಎದುರಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕುತ್ತೇನೆ” ಎಂದರು.

    ಭಾರತವಿಲ್ಲದೆ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ: ನಾರ್ವೆ ಉಪ ವಿದೇಶಾಂಗ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts