More

    ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಬದ್ಧ: ಶಾಸಕ ಎಂ.ಬಿ.ಪಾಟೀಲ ಭರವಸೆ

    ವಿಜಯಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದತೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಬದ್ಧ ಇದ್ದೇವೆ ಎಂದು ಶಾಸಕ ಎಂ.ಬಿ.ಪಾಟೀಲ ಭರವಸೆ ನೀಡಿದರು.

    ನಗರದ ತಮ್ಮ ಸ್ವಗೃಹದಲ್ಲಿ ಭಾನುವಾರ ಭೇಟಿ ನೀಡಿದ ರಾಜ್ಯಸರ್ಕಾರಿ ಎನ್‌ಪಿಎಸ್ ನೌಕರರ ಮನವಿ ಸ್ವೀಕರಿ ಮಾತನಾಡಿದ ಅವರು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಂಚಣಿ ವ್ಯವಸ್ಥೆ ಜಾರಿಗೊಳಿಸುವ ವಿಷಯವನ್ನು ಮಂಡಿಸಿ ಮತಕ್ಕೆ ಹಾಕುವಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.

    ನೂತನ ಪಿಂಚಣಿ ವ್ಯವಸ್ಥೆಯಿಂದ ನೌಕರರು ಅನುಭವಿಸುವ ಸಂಕಷ್ಟದ ಕುರಿತು ಈಗಾಗಲೇ ಮಾಹಿತಿ ಇದೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಡಲಗೇರಿ, ಪ್ರಧಾನ ಕಾರ್ಯದರ್ಶಿ ಶಂಕರ ಖಂಡೇಕರ, ಎಚ್.ಕೆ.ಬೂದಿಹಾಳ, ಜಗದೀಶ ಬೊಳಸೂರ, ಮಲ್ಲಿಕಾರ್ಜುನ ಭೂಸಗೊಂಡ, ರಾಜು ಬಿಸನಾಳ, ಸಂತೋಷ ಕುಲಕರ್ಣಿ, ಚನ್ನಯ್ಯ ಮಠಪತಿ, ಸಂತೋಷ ಜಹಗೀರದಾರ, ನಿಜು ಮೇಲಿನಕೇರಿ, ಆರ್.ಎಂ.ಪಾಟೀಲ, ಆನಂದ ಕೆಂಭಾವಿ, ಸಂತೋಷ ಕಳ್ಳಿಗುಡ್ಡ, ಸಂತೋಷ ಯರಗಲ, ಪ್ರಭು ಬಿರಾದಾರ, ಸಂತೋಷ ತಳವಾರ, ಪ್ರಭು ಬಿರಾದಾರ, ಸಂತೋಷ ಬೂದಿಹಾಳ, ಸಂಗಮೇಶ ಬಂಡೆ, ಶ್ರೀಕಾಂತ ಮೈತ್ರಿ, ಸಿದ್ದರಾಮ ಕೋಳಿ, ಡಿ.ಕೆ.ತಾವಸೆ, ಶ್ರೀಶೈಲ ದೊಡಮನಿ, ಅರವಿಂದ ತಾವರಖೇಡ, ಅಶೋಕ ರಜಪೂತ, ಅಕ್ಕುಬಾಯಿ ನಾಯಕ, ಕವಿತಾ ಕಲ್ಯಾಣಪ್ಪಗೊಳ, ಲಕ್ಷ್ಮಿ ತೊರವಿ, ಎಸ್.ಎನ್. ಕನ್ನೂರ, ಅನೀಲ, ಕೋಟ್ಯಾಳ, ಜ್ಯೋತಿ ಹಿಪ್ಪರಗಿ, ಹಣಮಂತ ಇಂಡಿ, ಸುದರ್ಶನ ಜೇವೂರ, ಮಂಜುನಾಥ ಆರೇಶಂಕರ, ಎಂ.ಎನ್. ಪಾಟೀಲ, ಮುನ್ನಾ ಮುಜಾವರ, ಪ್ರಕಾಶ ಗಬ್ಬೂರು ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts