More

  ಸುಣ್ಣವೆಂದು ಇಲಿ ಪಾಷಾಣ ಸವರಿ ವೀಳ್ಯದೆಲೆ ತಿಂದ ವೃದ್ಧೆ ಸಾವು

  ಗಂಗೊಳ್ಳಿ: ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ನಾಡ ಗ್ರಾಮ ಚುಂಗಿಗುಡ್ಡೆ ನಿವಾಸಿ ಸಾಧು ಪೂಜಾರ್ತಿ(71) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

  ಸಾಧು ಪೂಜಾರ್ತಿ ಅವರಿಗೆ ವೀಳ್ಯದೆಲೆ ಸೇವಿಸುವ ಅಭ್ಯಾಸವಿದ್ದು, ಎಂದಿನಂತೆ ಫೆ.6ರಂದು ಬೆಳಗ್ಗೆ ವೀಳ್ಯದೆಲೆ ಸೇವಿಸುತ್ತಿರುವಾಗ ವಿಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಬೆರೆಸಿ ತಿಂದು ಅಸ್ವಸ್ಥಗೊಂಡಿದ್ದರು. ಕೂಡಲೇ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಭಾನುವಾರ ಮೃತಪಟ್ಟಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts