More

    ಓಲಾ ಕ್ಯಾಬ್​ ಆರಂಭವಾದರೂ 1,400 ಸಿಬ್ಬಂದಿ ಬೀದಿಗೆ ಬಂದಿದ್ದೇಕೆ?

    ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ ನಿರ್ಬಂಧ ಸಡಿಲಿಸಿದ್ದು, ಬಸ್​ ಹಾಗೂ ಕ್ಯಾಬ್​ಗಳ ಸೇವೆ ಆರಂಭವಾಗಿದೆ. ಸೇವೆ ಆರಂಭಿಸಿದ ಒಂದೇ ದಿನದಲ್ಲಿ ಓಲಾ ಕಂಪನಿಯ 1,400 ಜನರು ಬೀದಿಗೆ ಬರುವಂತಾಗಿದೆ.

    ಹೌದು… ಆ್ಯಪ್​ ಆಧಾರಿತ ಕ್ಯಾಬ್​ ಸೇವಾ ಕಂಪನಿ ಓಲಾ ನಷ್ಟದ ಕಾರಣವೊಡ್ಡಿ 1,400 ಸಿಬ್ಬಂದಿಯನ್ನು ವಜಾಗೊಳಿಸಿದೆ. ಕ್ಯಾಬ್​ ಸೇವೆ, ಹಣಕಾಸು ಸೇವೆ ಹಾಗೂ ಆಹಾರ ಪೂರೈಕೆ ಘಟಕಗಳಿಂದ ನೌಕರರನ್ನು ಕಡಿಮೆ ಮಾಡಲಾಗಿದೆ ಎಂದು ಕಂಪನಿ ಸಿಇಒ ಭವೀಶ್​ ಅಗರ್​ವಾಲ್ ಮಾಹಿತಿ ನೀಡಿದ್ದಾರೆ.

    ಕರೊನಾ ವೈರಸ್​ನಿಂದಾಗಿ ವಹಿವಾಟು ಅತ್ಯಂತ ಅನಿಶ್ಚಿತ ಹಾಗೂ ಅಸ್ಪಷ್ಟವಾಗಿದೆ. ​ ಸಂಕಷ್ಟದಿಂದ ಒಟ್ಟಾರೆ ಉಂಟಾಗಿರುವ ಪರಿಣಾಮವು ದೀರ್ಘಕಾಲದವರೆಗೆ ಮುಂದುವರಿಯಲಿದೆ ಎಂದು ಸಿಬ್ಬಂದಿಗೆ ಕಳುಹಿಸಿರುವ ಇಮೇಲ್​ನಲ್ಲಿ ಭವೀಶ್​ ವಿವರಿಸಿದ್ದಾರೆ.

    ಇದನ್ನೂ ಓದಿ; ಶಂಕಿತರನ್ನು ತ್ವರಿತವಾಗಿ ಕರೊನಾ ಪರೀಕ್ಷೆಗೊಳಪಡಿಸಿ, ಸೋಂಕಿತರ ಸಂಖ್ಯೆ ಜತೆ ಆತಂಕವೂ ಹೆಚ್ಚಳ

    ಕಳೆದೆರಡು ತಿಂಗಳಲ್ಲಿ ಕಂಪನಿ ಆದಾಯ ಶೇ.95 ಕಡಿಮೆಯಾಗಿದೆ. ಹೀಗಾಗಿ ಸಿಬ್ಬಂದಿಯನ್ನು ವಜಾ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
    ಕರೊನಾ ಕೋಟ್ಯಂತರ ಜನರ ಬದುಕಿಗೆ ಭಾರಿ ಸಂಕಷ್ಟ ತಂದಿಟ್ಟಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಬ್​ ಸೇವೆಗೆ ಭಾರಿ ಹೊಡೆತ ನೀಡಿದೆ. ಭಾರತದಲ್ಲಷ್ಟೇ ಅಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಓಲಾ ಕ್ಯಾಬ್​ ಚಾಲಕರ ಹಾಗೂ ಅವರ ಕುಟುಂಬಕ್ಕೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಸಿಬ್ಬಂದಿ ಗಾತ್ರವನ್ನು ತಗ್ಗಿಸಲಾಗುತ್ತಿದೆ ಎಂದಿದ್ದಾರೆ.

    ಕ್ಯಾಬ್​ ಸೇವಾ ವಿಭಾಗದಲ್ಲಿ ಈ ವಾರದಲ್ಲಿ ವಜಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಹಣಕಾಸು ಹಾಗೂ ಆಹಾರ ಪೂರೈಕೆ ವಲಯದ ಸಿಬ್ಬಂದಿ ವಜಾ ಪ್ರಕ್ರಿಯೆ ನಡೆಯಲಿದೆ. ಇದಾದ ನಂತರ ಇನ್ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯದು ಎಂದು ಭವೀಶ್​ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ವಿರುದ್ಧ ಹೋರಾಟಕ್ಕಾಗಿ 362 ಕೋಟಿ ರೂ. ಸಂಗ್ರಹಿಸಿದ ಶತಾಯುಷಿಗೆ ನೈಟ್​ಹುಡ್​ ಗೌರವ 

    4,500ಕ್ಕೂ ಅಧಿಕ ಸಿಬ್ಬಂದಿ ಹೊಂದಿರುವ ಓಲಾ ಕಳೆದ ವರ್ಷ 350 ಜನರನ್ನು ಕೆಲಸದಿಂದ ತೆಗೆದಿತ್ತು. ಇತ್ತೀಚೆಗೆ ಉಬರ್​, ಜೋಮ್ಯಾಟೋ, ಸ್ವಿಗ್ಗಿ ಕಂಪನಿಗಳು ಕೂಡ ಸಿಬ್ಬಂದಿ ವಜಾಗೊಳಿಸಿದ್ದನ್ನು ಸ್ಮರಿಸಬಹುದು.

    ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts