More

    ಪಾರದರ್ಶಕ ಚುನಾವಣೆಗೆ ಮೊದಲ ಆದ್ಯತೆ

    ಹುಣಸೂರು: ಲೋಕಸಭಾ ಚುನಾವಣೆ ಪ್ರಕ್ರಿಯೆ ತಾಲೂಕಿನಾದ್ಯಂತ ಪಾರದರ್ಶಕತೆಯಿಂದ ನಡೆಯಬೇಕೆಂಬ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ತಿಳಿಸಿದರು.

    ಶಾಂತಿಯುತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹುಣಸೂರು ವಿಧಾನಸಭಾ ಕ್ಷೇತ್ರ(212)ದಲ್ಲಿ ಒಟ್ಟು 2,46, 559 ಮತದಾರರಿದ್ದಾರೆ. ಈ ಪೈಕಿ 1,22,305 ಪುರುಷರು, 1,24,238 ಮಹಿಳಾ ಮತದಾರರಿದ್ದಾರೆ. ಚುನಾವಣಾ ಕರ್ತವ್ಯದಲ್ಲಿ 266 ಪುರುಷ ಮತ್ತು 7 ಮಹಿಳಾ ಮತದಾರರಿದ್ದಾರೆ. 5878 ಯುವ ಮತದಾರರು (3165 ಯುವಕರು, 2711 ಯುವತಿಯರು) ಇದ್ದು, 85 ವರ್ಷ ಮೇಲ್ಪಟ್ಟ 3928 ಮತದಾರರು (1567 ಪುರುಷ ಹಾಗೂ 2361 ಮಹಿಳಾ ಮತದಾರರು) ಇದ್ದಾರೆ. 3676 ಅಂಗವಿಕಲ ಮತದಾರರು(2256 ಪುರುಷರು ಹಾಗೂ1419 ಮಹಿಳಾ ಮತದಾರರು) ಇದ್ದಾರೆ. ತಾಲೂಕಿನಲ್ಲಿ 274 ಮತಗಟ್ಟೆ ಸ್ಥಾಪಿಸಲಾಗುವುದು. ಈ ಪೈಕಿ 41 ಮತಗಟ್ಟೆಗಳು ಹುಣಸೂರು ನಗರವ್ಯಾಪ್ತಿಯಲ್ಲಿ ಇರಲಿದ್ದು, ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 1096 ಸಿಬ್ಬಂದಿ ಮತ್ತು ಅಧಿಕಾರಿವರ್ಗ ಭಾಗವಹಿಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಶೇ.85ರಷ್ಟು ಗುರಿ: ವಿಧಾನಸಭಾ ಕ್ಷೇತ್ರದಲ್ಲಿ ಮಂಗಳೂರು ಮಾಳ ಗ್ರಾಮದ ಮತಗಟ್ಟೆಯು(ಮ.ಸಂಖ್ಯೆ 111, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಅತಿ ಹೆಚ್ಚು ಮತದಾರರನ್ನು (1515) ಹೊಂದಿದ್ದು, ಮತಗಟ್ಟೆ ಸಂಖ್ಯೆ 264, ಚಿಕ್ಕಪಡುವಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಅತಿ ಕಡಿಮೆ (228) ಮತದಾರರಿದ್ದಾರೆೆ. 2019ರ ಲೋಕಸಭಾ ಚುನಾವಣೆ ವೇಳೆ ತಾಲೂಕಿನಲ್ಲಿ ಶೇ.77.24ರ ಪ್ರಮಾಣದ ಮತದಾನವಾಗಿತ್ತು. ಈ ಬಾರಿ ಶೇ.85ರ ಪ್ರಮಾಣದಲ್ಲಿ ಮತದಾನವಾಗುವ ನಿರೀಕ್ಷೆಯಿದ್ದು, ಅದಕ್ಕೆ ಅನುಗುಣವಾಗಿ ಅರಿವು ಮೂಡಿಸುವ ಕಾರ್ ನಡೆಸಲಾಗುವುದು ಎಂದು ತಿಳಿಸಿದರು.

    5 ಚೆಕ್‌ಪೋಸ್ಟ್ ಸ್ಥಾಪನೆ: ತಾಲೂಕಿನ ನಾಲ್ಕು ದಿಕ್ಕಿನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಹುಣಸೂರು ಮೈಸೂರು ಮುಖ್ಯರಸ್ತೆಯ ಮನುಗನಹಳ್ಳಿ, ಹುಣಸೂರು ಎಚ್.ಡಿ.ಕೋಟೆ ಮುಖ್ಯರಸ್ತೆಯ ಉಮ್ಮತ್ತೂರು, ಹುಣಸೂರು ಕೆ.ಆರ್.ನಗರ ಮುಖ್ಯರಸ್ತೆಯ ಗಾವಡಗೆರೆ ಹೋಬಳಿ ವ್ಯಾಪ್ತಿಯ ಚಿಕ್ಕಾಡಿಗನಹಳ್ಳಿ ಮತ್ತು ಹುಣಸೂರು ಮಡಿಕೇರಿ ಮುಖ್ಯರಸ್ತೆಯ ಮುತ್ತುರಾಯನಹೊಸಳ್ಳಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

    5 ಫ್ಲೈಯಿಂಗ್ ಸ್ಕ್ವಾರ್ಡ್: ತಾಲೂಕಿನಲ್ಲಿ 5 ಫ್ಲೈಯಿಂಗ್ ಸ್ಕ್ವಾಡ್ ತಂಡ, 4 ಸ್ಟಾಟಿಕ್ ಸರ್ವೇಲೆನ್ಸ್ ಟೀಂ, 2 ವಿಡಿಯೋ ಸರ್ವೇಲೆನ್ಸ್ ಟೀಂ, ಒಂದು ಅಕೌಂಟಿಂಗ್ ಮತ್ತು ವಿಡಿಯೋ ಪರಿಶೀಲನಾ ತಂಡ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಲಿದೆ. ತಾಲೂಕಿನಲ್ಲಿ ಮೂರು ವಲ್ನರಬಲ್ ಮತ್ತು 55 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಗಳು ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ಸ್ಟ್ರಾಂಗ್‌ರೂಂ ಅನ್ನು ಕೂಡ ಇದೇ ಶಾಲೆಯಲ್ಲಿ ಸ್ಥಾಪಿಸಲಾಗುವುದೆಂದರು.

    ಚುನಾವಣಾ ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಸ್ವೀಪ್ ಸಮಿತಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲಿದೆ. ತಾಲೂಕಿನಲ್ಲಿ 9 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು ಈ ಪೈಕಿ 5 ಯೋಜನಾ ಬದ್ಧ(ಪ್ಲಾನ್ಡ್), 1 ಯುವ ಮತಗಟ್ಟೆ, 1 ಯತ್ನಿಕ್, 1 ಥೀಮ್‌ಬೇಸ್(ವಿಷಯಾಧಾರಿತ) ಮತ್ತು ಅಂಗವಿಕಲರಿಗಾಗಿ ಒಂದು ಮತಗಟ್ಟೆ ಸ್ಥಾಪಿಸಲಾಗುವುದು. ಮಾ.25ರವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಮತದಾರರು ಇ ವಿಜಿಲ್ ಆಪ್ ಮೂಲಕ ಸ್ವತಃ ತಾವೇ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

    ತಹಸೀಲ್ದಾರ್ ಡಾ.ಎಂ.ನಯನಾ, ನಗರಸಭೆ ಪೌರಾಯುಕ್ತೆ ಎಂ.ಲಕ್ಷ್ಮೀ, ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್, ಉಪತಹಸೀಲ್ದಾರ್ ನರಸಿಂಹಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts