More

    ಎಣ್ಣೆ ಕಾಳು ಬೆಳೆಯಲು ಮುಂದಾಗಿ

    ಕಂಪ್ಲಿ: ಭಾರತವು ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ರೈತರು ಆಹಾರ ಧಾನ್ಯಗಳೊಂದಿಗೆ ಖಾದ್ಯ ತೈಲ ಬೀಜಗಳನ್ನು ಉತ್ಪಾದಿಸುವಲ್ಲಿ ಜಾಗೃತಿ ತೋರಬೇಕು ಎಂದು ಡಿಎಟಿಸಿ ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷ ಹೇಳಿದರು.

    ಇದನ್ನೂ ಓದಿ: ದೇಶದಲ್ಲಿ ಎಣ್ಣೆಕಾಳು ಇಳುವರಿ ಕಡಿಮೆ

    ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನಡಿ ರೈತರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಖಾದ್ಯ ತೈಲವನ್ನು ಅಮದು ಮಾಡಿಕೊಳ್ಳುತ್ತಿದ್ದು, ಸ್ವಾವಲಂಬನೆಗಾಗಿ ಎಣ್ಣೆ ಕಾಳುಗಳನ್ನು ಬೆಳೆಯುವಲ್ಲಿ ಮುಂದಾಗಬೇಕು ಎಂದರು.

    ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಕೀಟಶಾಸ್ತ್ರಜ್ಞ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿ, ಸೂರ್ಯಕಾಂತಿ ಬೆಳೆ ಮಧ್ಯದಲ್ಲಿ ಜೇನುಪೆಟ್ಟಿಗೆ ಅಳವಡಿಸಿದಲ್ಲಿ ಪರಾಗಸ್ಪರ್ಶ ಹೆಚ್ಚಿ ಅಧಿಕ ಇಳುವರಿ ಪಡೆಯುಬಹುದು.

    ತೊಗರಿ, ಸಜ್ಜೆ, ನವಣಿ ಜತೆ ಶೇಂಗಾವನ್ನು, ಸಜ್ಜೆ, ಜೋಳದೊಂದಿಗೆ ಕುಸುಬೆಯನ್ನು, ಹತ್ತಿಯೊಂದಿಗೆ ಶೇಂಗಾ, ಸೋಯಾಬೀನ್ ಮೊದಲಾದ ಎಣ್ಣೆ ಉತ್ಪಾದಿಸುವ ಬೀಜಗಳನ್ನು ಅಂತರ ಬೆಳೆಗಳನ್ನಾಗಿ ಬೆಳೆಯುವಂತೆ ಸಲಹೆ ನೀಡಿದರು.

    ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಬೀಜ ವಿಜ್ಞಾನಿ ಡಾ.ರಾಧಾ, ಮಾತನಾಡಿ, ಆಹಾರ ಧಾನ್ಯದಂತೆ ಖಾದ್ಯ ತೈಲವು ಅಗತ್ಯವಿದ್ದು, ಹೆಚ್ಚು ಇಳುವರಿ ಕೊಡುವ ಸುಧಾರಿತ ಎಣ್ಣೆ ಬೀಜಗಳ ಬಿತ್ತನೆ ಅಗತ್ಯವಿದೆ. ಡಿಎಚ್256, ಕೆಡಿಜಿ128, ಕದ್ರಿ 6, ಕದ್ರಿ 9ತಳಿಯ ಶೇಂಗಾವನ್ನು,

    ಆರ್‌ಎಸ್‌ಎಫ್‌ಎಚ್ 1887, ಆರ್‌ಎಸ್‌ಎಫ್‌ಎಚ್ 700, ಕೆಬಿಎಸ್‌ಎಚ್ 5341/42 ತಳಿಯ ಸೂರ್ಯಕಾಂತಿ ಸುಧಾರಿತ ಬೀಜಗಳನ್ನು ಬಳಸಿದಲ್ಲಿ, ಎಣ್ಣೆ ಅಂಶ ಹೆಚ್ಚು ಇರುವ ಇಳುವರಿ ದೊರಕುತ್ತದೆ ಎಂದರು. ಬೇಸಾಯಶಾಸ್ತ್ರ ತಜ್ಞ ಡಾ.ನಾರಪ್ಪ ಸೇರಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts