More

    ಚಳಿಗಾಲದಲ್ಲೂ ಅಧಿಕಾರಿಗಳ ಬೆವರಿಳಿಸಿದ ಜಿಪಂ ಆಡಳಿತಾಧಿಕಾರಿ ಮೊನಚು ಮಾತುಗಳು

    ಚಿತ್ರದುರ್ಗ: ನೂತನ ಜಿಪಂ ಆಡಳಿತಾಧಿಕಾರಿ,ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರ ಮೊನಚು ಮಾತು ಗಳು,ಚಳಿಗಾಲದಲ್ಲೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಬೆವರಿಳಿಸಿತು.

    ಶುಕ್ರವಾರ ಪ್ರಸಂಗ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಪರಿಚಯ,ಜಿಲ್ಲೆಯಲ್ಲಿ ಅವರ ಸೇವಾ ಅವಧಿ ಮಾಹಿತಿ ಪಡೆಯು ವುದರೊಂದಿಗೆ ಮಾತುಪ್ರಾರಂಭಿಸಿದ ಮನೋಹರ್,ನಾಮಕಾವಸ್ಥೆ ಕೆಲಸಗಳನ್ನು ಸಹಿಸಲಾಗದು,ಸತತವಾಗಿ ಸ್ಥಳ ತನಿಖೆಗೆ ಬರುತ್ತೇನೆ ಎನ್ನುವ ಮೂಲಕ ಪ್ರಗತಿ ಪರಿಶೀಲನೆ ಸಭೆ ಹೇಗಿರುತ್ತದೆ ಎಂಬುದರ ಮುನ್ಸೂಚನೆ ನೀಡಿದರು.

    ದುರಸ್ತಿ ಕೆಲಸಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ ಜಿಪಂ ಅಧಿಕಾರಿಗಳ ಹಾಗೂ ಪಂ.ರಾಜ್‌ಇಂಜಿನಿಯರ್‌ಗಳ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಸನ ಬದ್ಧ ಅನುದಾನವನ್ನು ನಿಯಮ ಬಾಹಿರವಾಗಿ ಡ್ರಾ ಮಾಡುವುದು 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಅವಕಾಶ ಮಾಡಿಕೊಡಲಿದೆ ಎಂದ ಅವರು,ಜಿಪಂ ಸಿಎಒಗೆ ನೋಟಿಸ್ ಜಾರಿ ಮಾಡ ಬೇಕು ಹಾಗೂ ಕಾಮಗಾರಿ,ಪ್ರಗತಿ, ಹಾಗೂ ಬಿಡುಗಡೆ ಆದ ಅನುದಾನ ವಿವರ ಕುರಿತಂತೆ ಜಿಪಂ ಸಿಇಒ ನೇತೃತ್ವದ ಸಮಿತಿ 15 ದಿನಗಳ ಒಳಗೆ ವರದಿ ಸಲ್ಲಿಸಬೇಕು.

    ಜಿಪಂ ಅನು ದಾನದಲ್ಲಿ ಕಾಮಗಾರಿ ಆರಂಭವಾಗದಿದ್ದರೆ ನಿರ್ಮಿತಿ ಕೇಂದ್ರದಿಂದ ಹಿಂಪಡೆಯ ಬೇಕೆಂದು ಆದೇಶಿಸಿದರು. ನಾನು ಈ ಹಿಂದೆ ಎರಡು ವರ್ಷ ಆದಾಯ ತೆರಿಗೆ,ಪೊಲೀಸ್ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದೇನೆ. ವಿಳಂಬ,ನಿರ್ಲಕ್ಷೃಧೋ ರಣೆ ವಿರುದ್ಧ ಯಾವೆಲ್ಲ ಅಸ್ತ್ರಗಳನ್ನು ಬಳಸ ಬೇಕೆಂಬುದು ಗೊತ್ತಿದೆ. ನಿರ್ಲಕ್ಷೃ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರ ಸು ಮಾಡುವುದಾಗಿ ಹೇಳಿದ ಅವರು,ವಾರಕ್ಕೆ ಒಮ್ಮೆಯಾದರೂ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗುಣಮಟ್ಟದ ಕಾಮಗಾರಿಗಳಾಗಬೇಕು,ಸೋರಿಕೆ ತಡೆಯ ಬೇಕೆಂದರು.

    ನರೇಗಾದಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 30 ಕಿ.ಮೀ.ರಸ್ತೆ ಕಾಮಗಾರಿ ಅನುಷ್ಠಾನ ವಿಳಂಬಕ್ಕಾಗಿ,ಜಿಪಂ ಡಿಎಸ್‌ಡಾ.ರಂಗಸ್ವಾಮಿ, ಪಿ ಆರ್‌ಇಡಿ ಇಂಜನಿಯರ್‌ಗಳು ಹಾಗೂ ತಾಪಂ ಇಒಗಳ ವಿರುದ್ಧ ಹರಿಹಾಯ್ದರು.ಗ್ರಾಮೀಣ ರಸ್ತೆಗಳು ಗುಂಡಿ ಬಿದಿದ್ದರೂ ನರೇಗದಾಡಿ ಕೆಲಸ ಮಾಡಿಲ್ಲ.

    ವಾರ್ಷಿಕ 3 ಕೋಟಿ ರೂ.ಅನುದಾನ ಖರ್ಚು ಮಾಡಲು ತಮ್ಮ ಇಲಾಖೆಗೆ 5.65 ಕೋಟಿ ರೂ.ಸಂಬಳ,ಭತ್ಯೆ ಇದೆ ಎಂದು ಪಿಆರ್ ಇಡಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ತಿಂಗಳ ಒಳಗೆ ಎಲ್ಲ ಕ್ಷೇತ್ರಗಳಲ್ಲೂ 30 ಕಿ.ಮಿ.ರಸ್ತೆ ಕಾಮಗಾರಿ ಪೂರ್ಣ ಗೊಳ್ಳ ಬೇಕೆಂದು ಗಡುವು ವಿಧಿಸಿದರು. ಅನುದಾನ ಬಳಸಿಕೊಳ್ಳದೆ ನಿರ್ಲಕ್ಷೃ ತೋರಿಸಿರುವ ಎಲ್ಲ ಅಧಿಕಾರಿಗಳಿಗೂ ನೋಟಿಸ್ ನೀಡು ವಂತೆ ಸೂಚಿಸಿದರು.

    ಡಿಸಿ ಕಟ್ಟಡಕ್ಕೆ ಇರಲಿ,ಐತಿಹಾಸಿಕ-ಪಾರಂಪರಿಕ ಸ್ಪರ್ಶ
    ನಗರದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ,ಜಿಲ್ಲೆಯ ಐತಿಹಾಸಿಕ,ಪಾರಂಪರಿಕ ಸೊಗಡಿರಲಿ. ಈ ಕುರಿತು ಆ ರ್ಕಿಟೆಕ್ಟ್ ಜತೆ ಮಾತನಾಡುವಂತೆ ಲೋಕೋಪಯೋಗಿ ಇಲಾಖೆ ಇಇ ಟಿ.ಎಸ್.ಮಲ್ಲಿಕಾರ್ಜುನ್ ಅವರಿಗೆ ತಿಳಿಸಿದರು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆಗಿರುವ ಕಾಮಗಾರಿಗಳಿಗೆ 100 ಕೋಟಿ ರೂ.ಬಿಲ್‌ಮೊತ್ತ ಪಾವತಿಸ ಬೇಕಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
    ಜನರಿಗೆ ನ್ಯಾಯ ಒದಗಿಸಲು ವಿವಿಧ ಅಭಿವೃದ್ಧಿ ನಿಗಮ-ಮಂಡಳಿಗಳನ್ನು ಸರ್ಕಾರ ಸ್ಥಾಪಿಸಿದ್ದು,ಸರ್ಕಾರದ ಉದ್ದೇಶ ಈಡೇರ ಬೇ ಕು,ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುವುದಾಗಿ ಮನೋಹರ್ ಹೇಳಿದರು. ಗಂಗಾಕಲ್ಯಾಣ ಯೋಜನೆ ಪರಿಶೀಲಿಸಿ ವರದಿ ಸಲ್ಲಿಸಬೇಕೆಂದು ತಿಳಿಸಿದರು.

    ರಾಜೀ ಪ್ರಶ್ನೆಯೇ ಇಲ್ಲ
    ವಿವಿಧ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಊಟ,ಸ್ಚಚ್ಛತೆ,ಶಿಕ್ಷಣ ಸಹಿತ ಮೂಲ ಸೌಕರ್ಯಗಳಲ್ಲಿ ಕಿಂಚಿತ್ತೂ ದೂರು ಬರಬಾರದು. ಮಕ್ಕಳಿಗೆ ಕೊಡುವ ಆಹಾರದಲ್ಲಿ ವಂಚನೆಯಾಗುತ್ತದೆ ಎಂದರೆ ಹೇಗೆ? ಮಕ್ಕಳಿಗೆ ಅನ್ಯಾಯವಾದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ? ಈ ವಿಚಾರ ದಲ್ಲಿ ರಾಜಿ ಸಾಧ್ಯವಿಲ್ಲ,ತಪ್ಪು ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ತಾಪಂ ಇಒಗಳು ವಾರಕ್ಕೆ ಕನಿಷ್ಠ 2 ಹಾ ಸ್ಟೆಲ್‌ಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕೆಂದರು.

    ಎಸ್ಸೆಸ್ಸೆಲ್ಸಿ ಹಾಗೂ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇ ಶನ ನೀಡಿದರು. ಕೃಷಿ,ತೋಟಗಾರಿಕೆ,ಆರೋಗ್ಯ,ಆಹಾರ ಮತ್ತಿತರ ಇಲಾಖೆಕೆಗಳ ಪ್ರಗತಿ ಪರಿಶೀಲಿಸಿದರು. ಸಿಇಒ ಎಂ.ಎಸ್.ದಿವಾಕರ್, ಸಿಪಿಒ ಗಾಯತ್ರಿ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts