More

    ‘ಎರಡು ಪೊರಕೆ ಎಲ್ಲಿ ಹೋಯ್ತು ಹೇಳ್ತಿಯೋ ಇಲ್ವೋ’: ಗ್ರಾಮಲ್ಕೆಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕನ ಫೈಟ್

    ರಾಯಬಾಗ (ಬೆಳಗಾವಿ): ಹಣ, ಆಸ್ತಿಗಾಗಿ ಕಿತ್ತಾಡುವುದನ್ನು ನೋಡಿದ್ದೇವೆ. ಇನ್ನೂ ಮುಂದುವರಿದು ಲವ್ ವಿಚಾರವಾಗಿ, ಕಡಿಯೋ ನೀರು, ಬಸ್​ನಲ್ಲಿ ಸೀಟಿಗಾಗಿ ಕರ್ಚಿಫ್​ ಹಾಕಿ ಜಗಳ ಆಡುವುದನ್ನ ನಿತ್ಯ ನೋಡುತ್ತಲೇ ಇರ್ತೇವೆ. ಆದರೆ ‘ಪೊರಕೆ’ಗಾಗಿ ಕಿತ್ತಾಡಿದ್ದನ್ನು ಬಹುಶಃ ಕೇಳಿರಲಿಕ್ಕಿಲ್ಲ. ಇಂದು ಈ ಘಟನೆಯೂ ನಡೆದಿದೆ. ಅದೂ ತಹಸೀಲ್ದಾರ್​ ಸಮ್ಮುಖದಲ್ಲೇ ಪೊರಕೆಗಾಗಿ ಅಧಿಕಾರಿಗಳ ಕಿತ್ತಾಟ!

    ಕರೊನಾ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾದ ಅಧಿಕಾರಿಗಳು ಸಣ್ಣದೊಂದು ಕಸಬರಿಕೆ (ಪೊರಕೆ) ವಿಷಯಕ್ಕೆ ಜಗಳವಾಡಿದ ಘಟನೆ ತಾಲೂಕಿನ ನಾಗರಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್​ ಕೇರ್​ ಸೆಂಟರ್​ನಲ್ಲಿ ಸೋಮವಾರ ಸಂಜೆ ನಡೆದಿದೆ.

    ಇದನ್ನೂ ಓದಿರಿ video/ ಕಾವೇರಿ ಮಾತೆಗೆ ಕೈ ಮುಗಿದು ನದಿಗೆ ಹಾರಿದ ಮಹಿಳೆ! ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ವೈರಲ್

    ಪೊರಕೆ ವಿಚಾರವಾಗಿ ರಾಯಬಾಗ ಕಂದಾಯ ನಿರೀಕ್ಷಕ ಗೌಡಪ್ಪ ಸಸಾಲಟ್ಟಿ ಮತ್ತು ನಾಗರಾಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ವಿನಾಯಕ ಭಾಟೆ ಅವರು ತಹಸೀಲ್ದಾರ್​ ಎನ್​.ಬಿ. ಗೆಜ್ಜೆ

    'ಎರಡು ಪೊರಕೆ ಎಲ್ಲಿ ಹೋಯ್ತು ಹೇಳ್ತಿಯೋ ಇಲ್ವೋ': ಗ್ರಾಮಲ್ಕೆಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕನ ಫೈಟ್
    ರಾಯಬಾಗ ತಾಲೂಕಿನಲ್ಲಿ ಪೊರಕೆಗಾಗಿ ಕಿತ್ತಾಡುತ್ತಿದ್ದ ಅಧಿಕಾರಿಗಳನ್ನು ತಹಸೀಲ್ದಾರ್​ ಎನ್​.ಬಿ. ಗೆಜ್ಜೆ ಸಮಾಧಾನ ಪಡಿಸಿದರು.

    ಅವರ ಎದುರೇ ಜಗಳವಾಡಿಕೊಂಡಿದ್ದಾರೆ. ಕೋವಿಡ್​ ಕೇರ್​ ಸೆಂಟರ್​ನಲ್ಲಿ ಎರಡು ಕಸಬರಿಕೆ ಕಾಣೆಯಾದ ವಿಚಾರಕ್ಕೆ ಪ್ರಾರಂಭವಾದ ಜಗಳ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಅಲ್ಲಿಯೇ ಇದ್ದ ತಹಸೀಲ್ದಾರ್​ ಗೆಜ್ಜೆ, ಮಧ್ಯ ಪ್ರವೇಶಿಸಿ ಸಮಾಧಾನ ಮಾಡಿ ಕಳುಹಿಸಿದರು.

    ತಾಲೂಕಿನಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕಾದ ಅಧಿಕಾರಿಗಳು, ಪೊರಕೆ ವಿಷಯಕ್ಕೆ ಗಲಾಟೆ ಮಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts