More

    ವಿದ್ಯಾರ್ಥಿಗಳಿಗೆ ಶುಚಿ-ರುಚಿಯಾದ ಊಟ ನೀಡಿ; ಸಿಇಒ ಸೂಚನೆ

    ಯಲಬುರ್ಗಾ: ಪಟ್ಟಣದ 14ನೇ ಅಂಗನವಾಡಿ ಕಟ್ಟಡ ಕಾಮಗಾರಿ, ಬಾಲಕಿಯರ ಪ್ರೌಢಶಾಲೆ, ವಸತಿ ನಿಲಯಕ್ಕೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬಾಲಕಿಯರ ಪ್ರೌಢಶಾಲಾ ಮಕ್ಕಳಿಗೆ ಕೊಡುವ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದ ಸಿಇಒ, ಊಟದ ರುಚಿ ಬಗ್ಗೆ ಮಾಹಿತಿ ಪಡೆದರು. ಇಬ್ಬರು ವಿದ್ಯಾರ್ಥಿಗಳನ್ನು ಕರೆದು ಶಾಲೆಯ ಶೌಚಗೃಹ ಬಳಕೆ, ಗುಣಮಟ್ಟದ ಊಟ ನೀಡುವ ಬಗ್ಗೆ ವರದಿ ಸಿದ್ಧಪಡಿಸಿ ಕೊಡಲು ತಿಳಿಸಿದರು. ಊಟದ ಕೋಣೆ ಸ್ವಚ್ಛತೆ, ಊಟಕ್ಕೂ ಮುನ್ನ ಕೈತೊಳೆಯುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಏನಾದರೂ ಸಮಸ್ಯೆ ಕಂಡುಬಂದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ರಾಹುಲ್ ರತ್ನಂ ಪಾಂಡೆಯ ತಿಳಿಸಿದರು.

    ಬಳಿಕ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿ, ಊಟ ಸವಿಯುವ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿದರು. ಪ್ರತಿದಿನ ಇದೇ ರೀತಿ ಶುಚಿ-ರುಚಿಯಾದ ಊಟ ಕೊಡಲು ಸಿಬ್ಬಂದಿಗೆ ಸೂಚಿಸಿದರು. ವಸತಿ ನಿಲಯದ ಕಂಪ್ಯೂಟರ್ ಕೊಠಡಿಗೆ ಭೇಟಿ ನೀಡಿ ಕಂಪ್ಯೂಟರ್ ಜ್ಞಾನದ ಬಗ್ಗೆ ಕೇಳಿದಾಗ ವಿದ್ಯಾರ್ಥಿಗಳು ತಡವರಿಸಿದರು. ಬಿಸಿಎಂ ತಾಲೂಕು ಅಧಿಕಾರಿ ಶಿವಶಂಕರ ಕರಡಕಲ್ ಅವರನ್ನು ಕರೆದು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಕೊಡಿಸಲು ತಿಳಿಸಿದರು.


    ತಾಪಂ ಇಒ ಸಂತೋಷ ಪಾಟೀಲ್, ಪಿಆರ್ ಎಇಇ ಶ್ರೀಧರ ತಳವಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ, ಸಿಡಿಪಿಒ ಸಿಂಧೂ ಎಲಿಗಾರ್, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts