More

    ರೈತನ ಬಳಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!

    ಬೀದರ್: ಪರಿಹಾರ ಕೊಡಿ ಎಂದು ಅರ್ಜಿ ಸಲ್ಲಿಸಿದ್ದ ಬಡ ರೈತನಿಂದ ಅಕ್ರಮವಾಗಿ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ನೌಕರನನ್ನು ಇದೀಗ ಲೋಕಾಯುಕ್ತ ಪೊಲೀಸರು ರೆಡ್​ಹ್ಯಾಂಡ್​ ಆಗಿ ಸೆರೆಹಿಡಿದಿದ್ದು, ಸದ್ಯ ಆತನನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಘಟನೆ ಬೀದರ್​ ಜಿಲ್ಲೆಯ ಕಾರಂಜಾ ಭಾಲ್ಕಿ ವಿಭಾಗದಲ್ಲಿ ವರದಿಯಾಗಿದೆ.

    ಇದನ್ನೂ ಓದಿ: ಅಮೇರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನೋಡಿದ ಪ್ರತ್ಯಕ್ಷ ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್

    ಪ್ರಥಮ ದರ್ಜೆ ಅಧಿಕಾರಿಯಾಗಿರುವ ಚಂದ್ರಶೇಖರ್ ಎಂಬಾತ ರೈತನಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
    ವರದಿ ಪ್ರಕಾರ, ರೈತರೊಬ್ಬರ ಭೂಮಿಯು ಕಾರಂಜಾ ಯೋಜನೆಗೆ ಹೋಗಿದ್ದರಿಂದ ಭೂಮಿಯ ಪರಿಹಾರ ಹಣ ನೀಡಲು ಎಫ್​​ಡಿಎ ಅಧಿಕಾರಿ ಭಾರೀ ಲಂಚಕ್ಕೆ ಬೇಡಿಕೆ ಮುಂದಿಟ್ಟಿದ್ದಾರೆ. ಒಂದು ಎಕರೆಗೆ 19 ಲಕ್ಷ‌ ರೂ. ಹಣ ಬಂದಿತ್ತು. ಇದರ ಪರಿಹಾರ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ, ಒಟ್ಟು 57 ಸಾವಿರ ರೂ. ಕೇಳಿದ್ದ ಎಂದು ವರದಿಯಾಗಿದೆ.

    ಆದರೆ ಇದಕ್ಕೂ ಮುಂಚಿತವಾಗಿ 30 ಸಾವಿರ ರೂ. ಹಣವನ್ನು ಲಂಚವಾಗಿ ರೈತನಿಂದ ಪಡೆಯುತ್ತಿದ್ದ ವೇಳೆಗೆ ಸರಿಯಾಗಿ ಲೋಕಾಯುಕ್ತ ಅಧಿಕಾರಿಗಳು ಆತನನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ. ನೊಂದ ಕಾರಂಜಾ ರೈತ ಶಿವಾಜಿ ರಾವ್ ‌ದೇಶಮುಖ್ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಸದ್ಯ ಲಂಚ ಸ್ವೀಕಾರ ಮಾಡುತ್ತಿದ್ದ ಭ್ರಷ್ಟ ಅಧಿಕಾರಿ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಇದೀಗ ಲೋಕಾಯುಕ್ತ ತನ್ನ ವಶಕ್ಕೆ ಪಡೆದುಕೊಂಡಿದೆ,(ಏಜೆನ್ಸೀಸ್). 

    ನೆಟ್ಟಿಗರ ನಿದ್ದೆಗೆಡಿಸುತ್ತಿರುವ ಕಾವ್ಯ ಮರನ್ ಯಾರು? ಈಕೆಗೂ ರಾಜಕೀಯಕ್ಕೂ ಇದೆ ನಂಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts