More

    ಅಮೇರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನೋಡಿದ ಪ್ರತ್ಯಕ್ಷ ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್

    ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕದ ಕೆಲವು ನಗರಗಳಲ್ಲಿ ಇಂದು ಸಂಪೂರ್ಣ ಸೂರ್ಯಗ್ರಹಣ ( Total Solar Eclipse )ಉಂಟಾಯಿತು. ಇಂತಹ ಒಂದು ಅದ್ಭುತ ಅಪೂರ್ವ ಅಸಾಮಾನ್ಯ ಅನುಭವವನ್ನು ಪಡೆಯಲು ನಾನು (ಬೆಂಕಿ ಬಸಣ್ಣ ) ಆಲ್ಬನಿಯಿಂದ ನಾಲ್ಕು ಗಂಟೆ ಡ್ರೈವ್ ಮಾಡಿಕೊಂಡು ರೋಚಸ್ಟರ್​ಗೆ ಬಂದಿದ್ದೆನು. ಇಲ್ಲಿಯ ಒಂಟೋರಿಯೋ ಬೀಚ್​ನಲ್ಲಿ ಸಂಪೂರ್ಣ ಸೂರ್ಯಗ್ರಹಣವನ್ನು ನೋಡಲು ಸಾವಿರಾರು ಜನರು ಸೇರಿದರು. ಇವರಿಗೆ ಯುಎಸ್ ಕೋಸ್ಟಲ್ ಗಾರ್ಡ್​ನವರು ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು.

    ಇದನ್ನೂ ಓದಿ: ಹೊಸ ವರ್ಷದ ಹೊಸ ಹರ್ಷ; ಯುಗಾದಿಯ ಬೇವು, ಬೆಲ್ಲದ ಸವಿಯಲ್ಲಿ ತಾರೆಯರು

    ಸುಮಾರು 3 ಗಂಟೆ 20 ನಿಮಿಷಕ್ಕೆ ಸಂಪೂರ್ಣ ಕತ್ತಲಾಗಿ ವಿಸ್ಮಯ ಉಂಟಾಯಿತು. ಇಂತಹ ಪ್ರಕೃತಿಯ ಅದ್ಭುತ ರೋಚಕವನ್ನು ಅನುಭವಿಸಿ ತುಂಬಾ ಖುಷಿ ಆಯ್ತು. ಆದರೆ ಮೂಡ ಕವಿದ ವಾತಾವರಣದಿಂದ ಸಂಪೂರ್ಣ ಸೂರ್ಯಗ್ರಹವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬ ಸ್ವಲ್ಪ ನೋವು, ಅಸಹಾಯಕತೆ ಮತ್ತು ಅಸಮಾಧಾನ ಇದೆ.

    ಅಮೇರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನೋಡಿದ ಪ್ರತ್ಯಕ್ಷ ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್
    ಕೆಲವು ಫೋಟೋ ಮತ್ತು ವಿಡಿಯೋಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ಇಲ್ಲಿವೆ ನೋಡಿ…..

    ಅಮೇರಿಕಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನೋಡಿದ ಪ್ರತ್ಯಕ್ಷ ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts