More

    ಜ್ವಾಲಾಮಾಲಿನಿ ದೇವಿಗೆ 108 ಬಗೆಯ ಬಳೆಗಳ ಅರ್ಪಣೆ

    ಎನ್.ಆರ್.ಪುರ: ಸಿಂಹನಗದ್ದೆ ಬಸ್ತಿ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ 6 ದಿನ ಗುರುವಾರ ಜ್ವಾಲಾಮಾಲಿನಿ ದೇವಿಗೆ 108 ಬಗೆಯ ಬಳೆಗಳನ್ನು ಸಮರ್ಪಣೆ ನಡೆಯಿತು.
    ಸಿಂಹನಗದ್ದೆ ಬಸ್ತಿಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ 6 ದಿನವಾದ ಗುರುವಾರ ಜ್ವಾಲಾಮಾಲಿನಿ ದೇವಿಗೆ 108 ಬಗೆಯ ಬಳೆಗಳನ್ನು ಸಮರ್ಪಣೆ ನಡೆಯಿತು. ಶುಕ್ರವಾರ ಬೆಳಗ್ಗೆ ಬಸ್ತಿಮಠದ ಎಲ್ಲ ಬಸದಿಗಳಿಗೆ ವಿಶೇಷ ಪೂಜೆ, ಅಲಂಕಾರ ನಡಯಿತು. ಶ್ರೀ ಕ್ಷೇತ್ರದ ಅಧಿದೇವತೆ ಜ್ವಾಲಾಮಾಲಿನಿ ಅಮ್ಮನವರಿಗೆ ವಿಶೇಷ ಬಂಗಾರದ ಸೀರೆ, ಶ್ರೀದೇವಿಗೆ ಷ್ಠಮಸಿದ್ಧಿ ಅಭಯಹಸ್ತೆ ಶೋಭಿತೆ ಅಲಂಕಾರದ ಪೂಜೆ ಮಾಡಲಾಗಿತ್ತು. ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿಗಳು ಉಪಸ್ಥಿತರಿದ್ದರು.
    ಸಂಜೆ ಬಸ್ತಿಮಠದ ಆವರಣದ ಚಂದ್ರ ಶಾಲೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಶರನ್ನವರಾತ್ರಿಯ 6 ನೇ ದಿನದ ಶ್ರೀ ದೇವಿಯ ಅವತಾರದ ಬಗ್ಗೆ ಆರ್ಶೀವಾಚನ ನೀಡಿದರು. ಜ್ವಾಲಾಮಾಲಿನಿ ದೇವಿಯ ಆವರಣದಲ್ಲಿ ಶ್ರೀಬಲಿ ಉತ್ಸವ, ಮಹಾ ಮಂಗಳಾರತಿ ನಡೆಯಿತು. ಹೊರನಾಡಿನ ಜಿನಗಾನ ವಿಶಾರಾಧೆ ಜಯಶ್ರೀ ಧರಣೇಂದ್ರ ಜೈನ್ ಅವರಿಂದ ಸಂಗೀತ ಸೇವೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಶನಿವಾರದಂದು ಜ್ವಾಲಾ ಮಾಲಿನಿ ದೇವಿಗೆ 108 ಬಗೆಯ ಸೀರೆಉಡಿ ಅರ್ಪಣೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts