More

    ಕ್ಷೇತ್ರದ ಜನರ ಋಣ ಮರೆಯಲಾರೆ

    ಬೈಲಹೊಂಗಲ: ಶಾಸಕ ಮಹಾಂತೇಶ ಕೌಜಲಗಿ ಅವರ 53ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ಬುಧವಾರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    ಕಾಂಗ್ರೆಸ್ ಪಕ್ಷದ ಸಭೆ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಶಾಸಕ ಕೌಜಲಗಿ ವಿಜಯವಾಣಿಯೊಂದಿಗೆ ಮಾತನಾಡಿ, ನನಗೆ ಆಡಂಬರದ ಜನ್ಮದಿನಾಚರಣೆ ಸರಿ ಎನಿಸುವುದಿಲ್ಲ. ಕಳೆದ ಬಾರಿ ಕಾರ್ಯಕರ್ತರ ಒತ್ತಾಸೆಯಿಂದ ಆಚರಿಸಿಕೊಂಡಿದ್ದೆ. ಈ ಬಾರಿಯೂ ಕಾರ್ಯಕರ್ತರ ಸಂಭ್ರಮ, ಅಭಿಮಾನಕ್ಕೆ ನನ್ನ ಎದೆ ತುಂಬಿದೆ. ಅಭಿಮಾನಿಗಳ ಪ್ರೀತಿಯ ಕಾಳಜಿಗೆ ಚಿರಋಣಿಯಾಗಿರುವೆ. ಜನರ ಹಾರೈಕೆಯು ಜವಾಬ್ದಾರಿ ಹೆಚ್ಚಿಸಿದ್ದು, ಹುಮ್ಮಸ್ಸು ಮೂಡಿಸಿದೆ. ನಾನು ಸ್ಥಳೀಯವಾಗಿ ಲಭ್ಯ ಇರದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸುವೆ ಎಂದರು.

    ನಮ್ಮ ತಂದೆ, ಅಜ್ಜ ಹಾಗೂ ನನ್ನ ಸೇವೆ ಪರಿಗಣಿಸಿ ಕ್ಷೇತ್ರದ ಜನತೆ ನನಗೆ ನಾಲ್ಕನೆಯ ಬಾರಿಗೆ ಅಧಿಕಾರ ನೀಡಿದ್ದಾರೆ. ಕಳೆದ ಅವಧಿಯಲ್ಲಿ ಇಂಚಲ ರಸ್ತೆಯಲ್ಲಿ 705 ನಿರಾಶ್ರಿತರಿಗೆ ಮನೆ, 24/7 ಶುದ್ಧ ಕುಡಿಯುವ ನೀರು ಯೋಜನೆ, ದೊಡ್ಡ ಕೆರೆ ಅಭಿವೃದ್ಧಿ, ತಾಯಿ ಮಗುವಿನ ಆರೈಕೆ ಕೇಂದ್ರ, ಹೈಟೆಕ್ ಬಸ್ ನಿಲ್ದಾಣ, ಸಂಗೊಳ್ಳಿ ಗ್ರಾಮದಲ್ಲಿ ಸೈನಿಕ ಶಾಲೆ, ರಾಕ್ ಗಾರ್ಡನ್, ಇಂಚಲ ಕ್ರಾಸ್‌ನಿಂದ ಬೈಪಾಸ್ ರಸ್ತೆ, ಸರ್ಕಾರಿ ಪಿಯು ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಚನ್ನಮ್ಮ ಸಮಾಧಿ ರಸ್ತೆ ಅಭಿವೃದ್ಧಿ, ಬೆಳವಡಿ ಮಲ್ಲಮ್ಮ ನೂತನ ಮೂರ್ತಿ ಸ್ಥಾಪನೆ ಸೇರಿ ಹಲವಾರು ಯೋಜನೆ ಅನುಷ್ಠಾನಕ್ಕೆ ತಂದ ತೃಪ್ತಿ ಇದೆ ಎಂದರು.

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ ಸೇರಿ ವಿವಿಧ ಸಚಿವರು, ಶಾಸಕ ಮಿತ್ರರು ಮಹಾಂತೇಶ ಕೌಜಲಗಿ ಅವರಿಗೆ ಶುಭ ಕೋರಿದ್ದಾರೆ. ಮುಖಂಡರಾದ ಮಹೇಶ ಬೆಲ್ಲದ, ಮಹಾಂತೇಶ ಕಳ್ಳಿಬಡ್ಡಿ, ಕಾರ್ತಿಕ ಪಾಟೀಲ, ಅನಿಲ ಮೇಕಲಮರ್ಡಿ, ಉಮೇಶ ಬೋಳೆತ್ತಿನ ಅವರು ಬೆಂಗಳೂರಿನಲ್ಲಿ ಶಾಸಕರನ್ನು ಸನ್ಮಾನಿಸಿ, ಶುಭಕೋರಿದರು.

    ನನ್ನ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶ್ರಮಿಸಿದ್ದೇನೆ. ಕ್ಷೇತ್ರದ ಜನರ ಏಳಿಗೆಯೊಂದಿಗೆ ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಗಮನಹರಿಸುವೆ. ವಿಜಯವಾಣಿ ಪತ್ರಿಕೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರಿದ ಎಲ್ಲರಿಗೂ ನಾನು ಚಿರಋಣಿ.
    | ಮಹಾಂತೇಶ ಕೌಜಲಗಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts