More

    ಧ್ವಜಾರೋಹಣಕ್ಕೆ ವಿರೋಧ! ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ

    ಪಣಜಿ: ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಗೋವಾದ ಸಾವೊ ಜಸಿಂತೋ ದ್ವೀಪದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧ ವ್ಯಕ್ತಿಪಡಿಸಿದ್ದ ಸ್ಥಳೀಯ ನಿವಾಸಿಗಳಿಗೆ ಗೋವಾ ಸಿಎಂ ಪ್ರಮೋದ್​ ಸಾವಂತ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ. ನೌಕಾಪಡೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಮುಂದುವರೆಸುವಂತೆ ಸೂಚಿಸಿರುವ ಸಾವಂತ್​, ಗೋವಾ ಪೊಲೀಸರು ತತ್ಸಂಬಂಧವಾಗಿ ಪೂರ್ಣ ಸಹಕಾರ ನೀಡವರು ಎಂದಿದ್ದಾರೆ.

    ಆಜಾದಿ ಕಾ ಅಮೃತ್ ಮಹೋತ್ಸವ್​ ಕಾರ್ಯಕ್ರಮದ ಅಂಗವಾಗಿ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲು ರಕ್ಷಣಾ ಸಚಿವಾಲಯ ದೇಶದ ಎಲ್ಲ ದ್ವೀಪಗಳಲ್ಲಿ ಆಗಸ್ಟ್​ 13 ರಿಂದ 15 ರ ನಡುವೆ ಧ್ವಜಾರೋಹಣವನ್ನು ಆಯೋಜಿಸಿದೆ. ಆದರೆ, ಈ ಸಂಬಂಧ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದಲ್ಲಿರುವ ಸಾವೋ ಜಸಿಂತೋ ದ್ವೀಪಕ್ಕೆ ಭೇಟಿ ನೀಡಿದಾಗ, ಕೆಲವು ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅಲ್ಲಿನ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿರುವುದಾಗಿ ಐಎನ್​ಎಸ್​ ಹಂಸದ ಗೋವಾ ಅಧಿಕಾರಿಗಳು ಹೇಳಿಕೆ ನೀಡಿದ್ದರು.

    ಇದನ್ನೂ ಓದಿ: ಹರೀಶ್ ಬಂಗೇರ ಬಂಧಮುಕ್ತ; ಆ.18ರಂದು ಬೆಂಗಳೂರಿಗೆ ಆಗಮನ

    ಈ ಬಗ್ಗೆ ಟ್ವಿಟರ್​ನಲ್ಲಿ ಪ್ರತಿಕ್ರಯಿಸಿರುವ ರಾಜ್ಯದ ಸಿಎಂ ಪ್ರಮೋದ್​ ಸಾವಂತ್​, “ಕೆಲವು ವ್ಯಕ್ತಿಗಳು ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಇಂಥ ನಡವಳಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲಿಚ್ಛಿಸುತ್ತೇನೆ” ಎಂದಿದ್ದಾರೆ.

    “ನೌಕಾಪಡೆಗೆ ತಮ್ಮ ಯೋಜನೆಯಂತೆ ಕಾರ್ಯಕ್ರಮ ನಡೆಸಲು ಹೇಳಿದ್ದು, ಗೋವಾ ಪೊಲೀಸರು ಇದಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ” ಎಂದಿರುವ ಸಿಎಂ, “ಈ ತೆರನ ಭಾರತವಿರೋಧಿ ಚಟುವಟಿಕೆಗಳ ಪ್ರಯತ್ನಗಳ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಯಾವಾಗಲೂ ರಾಷ್ಟ್ರವೇ ಮೊದಲು” ಎಂದಿದ್ದಾರೆ. (ಏಜೆನ್ಸೀಸ್)

    ಲಸಿಕೆಯಿಂದ ಚಿಂಪಾಜೀಗಳಾಗ್ತಾರೆಂದು ಅಪಪ್ರಚಾರ! 300 ಖಾತೆಗಳನ್ನು ತೆಗೆದುಹಾಕಿದ ಫೇಸ್​ಬುಕ್​

    ಮೀನಿನಂತೆ ಚುರುಕಾಗಲು ಈ ಯೋಗಾಸನ ಸಹಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts