ಲಸಿಕೆಯಿಂದ ಚಿಂಪಾಜೀಗಳಾಗ್ತಾರೆಂದು ಅಪಪ್ರಚಾರ! 300 ಖಾತೆಗಳನ್ನು ತೆಗೆದುಹಾಕಿದ ಫೇಸ್​ಬುಕ್​

ನವದೆಹಲಿ : ಕರೊನಾ ಲಸಿಕೆಯ ಬಗ್ಗೆ ಹಲವಾರು ಸುಳ್ಳು ಮಾಹಿತಿಗಳು ಮತ್ತು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸಾಮಾನ್ಯ ವಿಚಾರವಾಗಿದೆ. ಈ ರೀತಿಯ ಸುಳ್ಳು ವದಂತಿಗಳನ್ನು ಹರಡುವ ವ್ಯವಸ್ಥಿತ ಸಂಚೊಂದನ್ನು ಫೇಸ್​ಬುಕ್​ ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 300 ಫೇಸ್​ಬುಕ್​ ಮತ್ತು ಇನ್ಸ್​​ಟಾಗ್ರಾಂ ಖಾತೆಗಳನ್ನು ತೆಗೆದುಹಾಕಿದೆ. ಸದರಿ ಖಾತೆಗಳು ಆಸ್ಟ್ರಾಜೆನೆಕಾ ಮತ್ತು ಫೈಜರ್​ನ ಕರೊನಾ ಲಸಿಕೆಗಳು ಮನುಷ್ಯರನ್ನು ಚಿಂಪಾಜೀಗಳನ್ನಾಗಿ ಬದಲಾಯಿಸುತ್ತವೆ ಎಂಬ ಮೀಮ್​ಗಳು ಮತ್ತು ಇತರ ಸಂದೇಶಗಳನ್ನು ಹರಡುತ್ತಿದ್ದವು. ಪ್ಲಾನೆಟ್​ ಆಫ್​ ಏಪ್ಸ್​ ಎಂಬ ಹಾಲಿವುಡ್​ … Continue reading ಲಸಿಕೆಯಿಂದ ಚಿಂಪಾಜೀಗಳಾಗ್ತಾರೆಂದು ಅಪಪ್ರಚಾರ! 300 ಖಾತೆಗಳನ್ನು ತೆಗೆದುಹಾಕಿದ ಫೇಸ್​ಬುಕ್​