More

    ಕಳಕ್ಕೋಡಿನ ಮೇಗಲಮಕ್ಕಿ, ಮಣ್ಣಕುಂಬ್ರಿ ರೋಗಿಗೆ ಕಂಬಳಿ ಜೋಳಿಗೆಯೇ ಗತಿ!

    ಕಳಸ: ಎಂತಹ ದುರ್ಗಮ ಪ್ರದೇಶದಲ್ಲೂ ಉಳ್ಳವರ ಒಂಟಿ ಮನೆಗೆ ಕೋಟ್ಯಾಂತರ ರೂ. ಖರ್ಚು ಮಾಡಿ ಕಾಂಕ್ರೀಟ್ ರಸ್ತೆ ನಿರ್ವಿುಸಿಕೊಡುವ ಸರ್ಕಾರ, ಬಡವರು ಇರುವ ಪ್ರದೇಶದಲ್ಲಿ ಅನಾರೋಗ್ಯಪೀಡಿತರನ್ನು ಕಂಬಳಿಯಲ್ಲಿಯಲ್ಲಿ ಕಟ್ಟಿಕೊಂಡು ಹೋದರೂ ರಸ್ತೆ ನಿರ್ವಣಕ್ಕೆ ಮುಂದಾಗುವುದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ.

    ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕ್ಕೋಡಿನ ಮೇಗಲಮಕ್ಕಿ ಮಣ್ಣಕುಂಬ್ರಿ ಪ್ರದೇಶ ಹೋಗಲು ರಸ್ತೆ ಇಲ್ಲದಿರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ಹಾಗೂ ಮರಣ ಹೊಂದಿದವರನ್ನು ಸ್ಮಶಾನಕ್ಕೆ ಕಂಬಳಿಯಲ್ಲಿ ಹೊತ್ತುಕೊಂಡು ಹೋಗುವ ಸ್ಥಿತಿ ನಿರ್ವಣವಾಗಿದೆ.

    ಎರಡು ದಿನಗಳ ಹಿಂದೆ ಇಲ್ಲಿನ ಚಂದುಗೌಡ ಎಂಬುವವರ ಪತ್ನಿಗೆ ಅನಾರೋಗ್ಯ ಉಂಟಾಗಿತ್ತು. ನಡೆಯುವ ಸ್ಥಿಯಲ್ಲಿ ಇಲ್ಲದಿರುವುದರಿಂದ ಮನೆಯಿಂದ ಮುಖ್ಯ ರಸ್ತೆಯವರೆಗೆ ಕಂಬಳಿಯಲ್ಲಿ ಕಟ್ಟಿ ಹೊತ್ತುಕೊಂಡು ಕಳಸ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಲ್ಲಿ ‘ಬದುಕುಳಿಯುವ ಸಾಧ್ಯತೆ ಇಲ್ಲ, ಮನೆಗೆ ಕರೆದುಕೊಂಡು ಹೋಗಿ’ ಎಂದು ವೈದ್ಯರು ಹೇಳಿದಾಗ ಗ್ರಾಮಸ್ಥರು ಅವರನ್ನು ಕಂಬಳಿಯಲ್ಲಿ ಕಟ್ಟಿ ಹೊತ್ತುಕೊಂಡು ಮನೆಗೆ ತೆರಳಿದರು. ಮನೆಗೆ ತೆರಳಿದ ಕೆಲ ಗಂಟೆಗಳಲ್ಲೇ ಅವರು ಮೃತಪಟ್ಟಿದ್ದಾರೆ.

    ಈ ಪ್ರದೇಶದಲ್ಲಿ ಮೂರು ಗಿರಿಜನ ಕುಟುಂಬಗಳಿವೆ. ಇವರಿಗೆ ಮನೆಗೆ ಮುಖ್ಯ ರಸ್ತೆಯಿಂದ ಎರಡು ಕಿಮೀ ದೂರ ಹೋಗಬೇಕು. ಆದರೆ ಹೋಗಲು ಸರಿಯಾದ ರಸ್ತೆಯೇ ಇಲ್ಲ. ದಿನಬಳಕೆ ಸಾಮಗ್ರಿಗಳನ್ನೂ ಕೊಂಡು ಹೊತ್ತುಕೊಂಡೇ ಬರಬೇಕು.

    ನಮ್ಮ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾಡಲು ವ್ಯವಸ್ಥೆ ಇದೆ. ಹಲವು ವರ್ಷಗಳಿಂದ ರಸ್ತೆ ನಿರ್ವಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಬೇಡಿಕೆ ಬೇಡಿಕೆಯಾಗಿ ಉಳಿದಿದೆ. ಈ ಹಿಂದೆ ಇದೇ ಕುಟುಂಬದ ಸದಸ್ಯರೊಬ್ಬರು ಮರದಿಂದ ಬಿದ್ದಾಗ ಕಂಬಳಿಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಮ್ಮಂತಹ ಬಡವರ ಗೋಳು ಯಾರೂ ಕೇಳುವವರೇ ಇಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts