ನವದೆಹಲಿ: ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ಮೊಟಕುಗೊಂಡಿರುವ 14ನೇ ಆವೃತ್ತಿಯ ಐಪಿಎಲ್‌ನ ಎರಡನೇ ಭಾಗಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ತಿಂಗಳಲ್ಲಿ 2ನೇ ಭಾಗ ನಡೆಯಲಿದೆ. ಆದರೆ, ವಿದೇಶಿ ಆಟಗಾರರು ಲೀಗ್‌ನಲ್ಲಿ ಆಡುವ ಕುರಿತು ಇನ್ನೂ ಖಚಿತವಾಗಿಲ್ಲ. ಬಹುತೇಕ ವಿದೇಶಿ ಆಟಗಾರರು ಲೀಗ್‌ನಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ನಡುವೆ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದ ಸಂಭ್ರಮದಲ್ಲಿರುವ ನ್ಯೂಜಿಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ಗೆ ತೃತೀಯ ಲಿಂಗಿ ಅರ್ಹತೆ,
ಯುಎಇಯಲ್ಲಿ 14ನೇ ಐಪಿಎಲ್‌ನ 2ನೇ ಭಾಗ ನಡೆಯುವ ವೇಳೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಿಗದಿಯಾಗಿದೆ. ಆದರೆ, ನ್ಯೂಜಿಲೆಂಡ್ ಕ್ರಿಕೆಟ್ ಮೂಲಗಳ ಪ್ರಕಾರ, ಕಿವೀಸ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಕೇನ್ ವಿಲಿಯಮ್ಸನ್ ಕೇನ್ ವಿಲಿಯಮ್ಸನ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುನ್ನಡೆಸುತ್ತಿದ್ದರೆ, ಅಗ್ರಆಟಗಾರರಾದ ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಟ್ರೆಂಟ್ ಬೌಲ್ಟ್, ಆಡಂ ಮಿಲ್ನೆ, ಲೂಕಿ ಫರ್ಗ್ಯುಸನ್, ಜೇಮ್ಸ್ ನೀಶಾಮ್, ಮಿಚೆಲ್ ಸ್ಯಾಂಟ್ನರ್ ಹಾಗೂ ಫಿನ್ ಅಲೆನ್ ಸೇರಿದಂತೆ ಕೆಲ ಕಿವೀಸ್ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮ ಸ್ಪೈ ಮಾಡುತ್ತಿದ್ದಾರೆ ಎಂದ ಪತ್ನಿ ರಿತಿಜಾ.
ಕ್ರಿಕೆಟ್ ನ್ಯೂಜಿಲೆಂಡ್ ತಂಡದಿಂದ ಲೀಗ್‌ಗೆ ಮತ್ತಷ್ಟು ಮೆರಗು ಬಂದಿದ್ದು, ಆಟಗಾರರಿಗೆ ಲೀಗ್‌ನಲ್ಲಿ ಆಡಲು ಅನುಮತಿ ನೀಡುವಂತೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಂಡಳಿಗಳಿಗೂ ಮನವಿ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಲೀಗ್‌ನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ. 14ನೇ ಐಪಿಎಲ್‌ನ 2ನೇ ಹಂತ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಯುಎಇಯಲ್ಲಿ ನಡೆಯುವುದು ಖಚಿತವಾಗಿದ್ದು, ಇದಾದ ಬಳಿಕ ಯುಎಇಯಲ್ಲೇ ಟಿ20 ವಿಶ್ವಕಪ್ ಆಯೋಜನೆಗೊಳ್ಳುವ ಸಾಧ್ಯತೆಗಳಿವೆ.