More

    ಮಳೆ ಕೊರತೆಯಿಂದ ಒಣಗುತ್ತಿವೆ ಅಡಕೆ ಸಿಂಗಾರ

    ಸಿದ್ದಾಪುರ: ಕೈಕೊಟ್ಟ ಮುಂಗಾರು ಪೂರ್ವ ಮಳೆ ಯಿಂದ ಅಡಕೆ ಮರಗಳು ಹಾಗೂ ಮುಂದಿನ ಬೆಳೆಯಾದ ಅಡಕೆ ಸಿಂಗಾರಗಳೆಲ್ಲ ಒಣಗುತ್ತಿದ್ದು ತೋಟಗಳೆಲ್ಲ ಬರಡಾಗುತ್ತಿದೆ. ಮುಂದಿನ ಫಸಲು ಉಳಿಸಿಕೊಳ್ಳುವುದು ಬೆಳೆಗಾರರಿಗೆ ಕಷ್ಟವಾಗಿದೆ.


    ತಾಲೂಕಿನ ರೈತರ ಬಹುಮುಖ್ಯ ಆರ್ಥಿಕ ಬೆಳೆಯಾದ ಅಡಕೆ ಇಂದು ಬಿಸಿಲಿನ ತಾಪಕ್ಕೆ ಒಣಗುತ್ತಿದೆ. ಅಡಕೆ ತೋಟದಲ್ಲಿ ಮರಗಳು ಒಣಗಿ ಮರದಲ್ಲಿನ ಸೋಗೆಗಳು ಸತ್ವವನ್ನು ಕಳೆದುಕೊಂಡು ಬಾಗಿ ಬಿದ್ದಿವೆ. ಅಲ್ಲದೆ, ಬೆಳೆಗಾರರು ಮುಂದಿನ ಫಸಲಿಗಾಗಿ ಬಹುನಿರೀಕ್ಷೆಯಿಂದ ನೋಡುತ್ತಿದ್ದ ಅಡಕೆ ಶಿಂಗಾರಗಳು ಒಣಗಿ ಕರಕಲಾಗುತ್ತಿದ್ದು ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಕೆ ಬೆಳೆಯೊಂದಿಗೆ ಉಪಬೆಳೆಯಾದ ಬಾಳೆ, ಕಾಳುಮೆಣಸಿನ ಬಳ್ಳಿಗಳು ನೀರಿಲ್ಲದೆ ಸಾಯುತ್ತಿದೆ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಬೀಳಬೇಕಾಗಿದ್ದ ಹದ ಮಳೆ ಬೀಳದಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಡಕೆ ಬೆಳೆಗಾರರು ಹೇಳುತ್ತಾರೆ.


    ತಾಲೂಕಿನಲ್ಲಿ ಸುಮಾರು 4936 ಹೆಕ್ಟೇರ್ ಅಡಕೆ ತೋಟ ಇದೆ. ಇನ್ನು ಅರಣ್ಯ ಒತ್ತುವರಿಯಲ್ಲಿ ಸುಮಾರು 1400 ಹೆಕ್ಟೇರ್ ಅಡಕೆ ತೋಟ ಇದೆ. ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಅಂದಾಜು 2000 ಹೆಕ್ಟೇರ್ ಅಡಕೆ ತೋಟಕ್ಕೆ ಅಷ್ಟೇನು ಬಿಸಿಲಿನ ತಾಪ ತಟ್ಟಿಲ್ಲ. ಆದರೆ ಭತ್ತದ ಗದ್ದೆಯಲ್ಲಿ ಹಾಗೂ ಅರಣ್ಯ ಒತ್ತುವರಿಯಲ್ಲಿ, ಮನೆಯ ಹಿತ್ತಲಿನಲ್ಲಿ, ಗುಡ್ಡ-ಬೆಟ್ಟಗಳಲ್ಲಿ ಬೆಳೆದಿರುವ ಅಡಕೆ ತೋಟಗಳಿಗೆ ಬಿಸಿಲಿನ ಹೊಡೆತ ತಟ್ಟಿದೆ. ಗಿಡಗಳು ಸುಟ್ಟು ಕರಕಲಾಗುತ್ತಿದೆ. ಒಂದೆರಡು ವಾರದಲ್ಲಿ ಮೆಳೆ ಬೀಳದಿದ್ದರೆ ಸಾಂಪ್ರದಾಯಿಕವಾಗಿ ಇರುವ ಅಡಕೆ ತೋಟ ಬಿಟ್ಟು ಉಳಿದೆಡೆ ಅಡಕೆ ತೋಟಗಳು ಸಂಪೂರ್ಣ ನಾಶವಾಗುವ ಸಾಧ್ಯತೆ ಕಂಡು ಬರುತ್ತಿದೆ.

    ಈ ವರ್ಷ ಹದ ಮೆಳೆ ಬೀಳದೆ ಇರುವುದರಿಂದ ಅಡಕೆ ತೋಟದಲ್ಲಿ ಮರಗಳು ಒಣಗುತ್ತಿವೆ. ಮುಂದಿನ ಬೆಳೆಯಾದ ಅಡಕೆ ಸಿಂಗಾರಗಳು ಒಣಗಿ ಬೀಳುತ್ತಿದೆ. ಇದ್ದ ಕೆರೆ, ಹಳ್ಳಗಳಲ್ಲಿ ನೀರು ಬರಿದಾಗುತ್ತಿದೆ. ಮಳೆ ಬೀಳದಿದ್ದರೆ ತೋಟಗಳಿಗೆ ನೀರುಣಿಸುವುದು ಕಷ್ಟವಾಗಲಿದೆ. —- ಪ್ರಶಾಂತ ಭಟ್ಟ, ಅಡಕೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts