More

    ದಾದಿಗೆ ಲೈಂಗಿಕ ದೌರ್ಜನ್ಯವೆಸಗಿದ ವೈದ್ಯನಿಗೆ ದಾದಿಯರ ಕಪಾಳದೇಟು

    ಪಂಚಕುಲ: ದಾದಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವೈದ್ಯನನ್ನು ಪಂಚಕುಲ ಆಸ್ಪತ್ರೆಯಲ್ಲಿ ದಾದಿಯರೇ ಥಳಿಸಿದ್ದಾರೆ.
    ಜುಲೈ 11 ಮತ್ತು 12 ರ ಮಧ್ಯರಾತ್ರಿ ವೈದ್ಯ ತನಗೆ ಕಿರುಕುಳ ನೀಡಿದ್ದಾನೆ ಎಂದು ಆಸ್ಪತ್ರೆಯ ದಾದಿಯೊಬ್ಬಳು ಆರೋಪಿಸಿದ್ದು. ಮಂಗಳವಾರ, ದಾದಿಯರೆಲ್ಲ ಸೇರಿ ಆ ವೈದ್ಯನನ್ನು ಥಳಿಸಿದ್ದಾರೆ ಎನ್ನಲಾಗಿದೆ.
    ಶನಿವಾರ, ನರ್ಸ್ ಕೋವಿಡ್ -19 ಕೇಂದ್ರದ ಕರ್ತವ್ಯದಲ್ಲಿದ್ದರೆ, ಆ ವೈದ್ಯ ಕೂಡ ರಾತ್ರಿ ಕರ್ತವ್ಯದಲ್ಲಿದ್ದ. ಆತ ತನ್ನ ಪಾಳಿಯನ್ನು ಇನ್ನೊಬ್ಬ ವೈದ್ಯರೊಂದಿಗೆ ವಿನಿಮಯ ಮಾಡಿಕೊಂಡಿದ್ದಾನೆ ಹಾಗೂ ಅಲ್ಲಿ ಪಾಳಿ ಪದ್ಧತಿಯನ್ನು ಸೂಕ್ತವಾಗಿ ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಆಂಡಿಯನ್ ಕಾಂಡೋರ್​​ ಬಗ್ಗೆ ನಿಮಗೆಷ್ಟು ಗೊತ್ತು?

    ಶನಿವಾರ ರಾತ್ರಿ 9 ಕ್ಕೆ ವೈದ್ಯ ವಾರ್ಡ್‌ನ ಸುತ್ತುಗಳನ್ನು ಮುಗಿಸಿ ಮಧ್ಯರಾತ್ರಿ 12 ಗಂಟೆಗೆ ಕೇಂದ್ರಕ್ಕೆ ಮರಳಿದ. ಆಗ ಆತ ಮದ್ಯ ಸೇವಿಸಿದ್ದ ಎಂದು ಆರೋಪಿಸಲಾಗಿದೆ. ಅದೇ ಹೊತ್ತಲ್ಲಿ ದಾದಿಯೊಬ್ಬಳು ವಾರ್ಡ್‌ನ ಚೇಂಜಿಂಗ್ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು.
    ಆಗ ಒಳಪ್ರವೇಶಿಸಿದ ವೈದ್ಯ ಬಾಗಿಲು ಮುಚ್ಚಿ ದಾದಿಗೆ ಲೈಂಗಿಕ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನರ್ಸ್ ಅಲ್ಲಿಂದ ತಪ್ಪಿಸಿಕೊಂಡು ಕೋಣೆಯಿಂದ ಹೊರಗೆ ಓಡಿದಳು. ಶಬ್ದ ಕೇಳಿದ ಆರ್‌ಎಂಒ, ಪಿಎಂಒ ಮತ್ತು ಇತರ ಹಿರಿಯ ಅಧಿಕಾರಿಗಳು ವಾರ್ಡ್‌ಗೆ ಬಂದರು.
    ಅಧಿಕಾರಿಗಳು ಆ ವೈದ್ಯನನ್ನು ತುರ್ತು ವಾರ್ಡ್‌ಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಆತ ಪರಾರಿಯಾಗಿದ್ದ. ಘಟನೆಯ ಬಗ್ಗೆ ತಿಳಿದ ನಂತರ, ಆಸ್ಪತ್ರೆಯು ಆಂತರಿಕ ದೂರುಗಳ ಸಮಿತಿಯನ್ನು (ಐಸಿಸಿ) ರಚಿಸಿ ವಿಚಾರಣೆಯನ್ನು ಪ್ರಾರಂಭಿಸಿತು. ಸಮಿತಿಯಲ್ಲಿ ಲೈಂಗಿಕ ಕಿರುಕುಳ ಸಮಿತಿ ಸದಸ್ಯರು ಸೇರಿ ನಾಲ್ವರು ವೈದ್ಯರು ಇದ್ದರು. ಆದರೆ ವೈದ್ಯರಲ್ಲಿ ಒಬ್ಬರು ಗೈರು ಹಾಜರಾಗಿದ್ದರಿಂದ ಅಧಿಕಾರಿಗಳಿಗೆ ತನಿಖೆ ನಡೆಸಲು ಸಾಧ್ಯವಾಗಲಿಲ್ಲ.
    ಅದಾದ ನಂತರ ಸಂತ್ರಸ್ತ ದಾದಿ ಎಫ್ಐಆರ್ ಸಲ್ಲಿಸಿದಳು. ಕೊನೆಗೆ ಐಸಿಸಿ ತನ್ನ ದೂರನ್ನು ಡಿಜಿಗೆ ಸಲ್ಲಿಸಿತು ಮತ್ತು ವೈದ್ಯನನ್ನು 60 ದಿನಗಳ ಕಾಲ ಜಿಲ್ಲೆಯಿಂದ ಹೊರಗೆ ಕಳುಹಿಸಲಾಯಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಏತನ್ಮಧ್ಯೆ, ಪೊಲೀಸರು ಈ ಪ್ರಕರಣದ ತನಿಖೆಯನ್ನು ಸಹ ಪ್ರಾರಂಭಿಸಿದರು.

    ಇದನ್ನೂ ಓದಿ: ಪರೀಕ್ಷೆಯಲ್ಲದೇ ಸಿಕ್ತು ‘ಪಾಸ್‌’ ಮಾರ್ಕ್ಸ್‌ಕಾರ್ಡ್‌- ತನಿಖೆಗೆ ವಿದ್ಯಾರ್ಥಿಗಳು ಸುಸ್ತು

    ಕೋಪಗೊಂಡ ದಾದಿಯರು ಆಸ್ಪತ್ರೆಯ ಆಡಳಿತ ಮಂಡಳಿ ಈ ವಿಷಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
    “ವೈದ್ಯ ರಾತ್ರಿ 9 ಗಂಟೆಗೆ ಒಂದು ಸುತ್ತು ಮುಗಿಸಿ ವೈದ್ಯರ ಡ್ಯೂಟಿ ರೂಮ್​​ಗೆ ಕೆಳಗಡೆ ಹೋಗುವುದು ಸಾಮಾನ್ಯ ಪರಿಪಾಠವಾಗಿದೆ. ಸುತ್ತು ಮುಗಿದಾಗಲೂ ಮತ್ತೇನಾದರೂ ತುರ್ತು ನಿಗಾ ವಹಿಸಬೇಕಾಗಿದ್ದರೆ ಮಾತ್ರ ಆತ ಮರಳಿ ಬರಬಹುದು. ಇಲ್ಲದಿದ್ದರೆ ಮರುದಿನ ಬೆಳಗ್ಗೆ ಸುತ್ತಿಗೇ ಅವರು ಬರಬೇಕು ಎಂಬುದು ನಿಯಮ. ಆದರೆ ಈ ಪ್ರಕರಣದಲ್ಲಿ ಆತ ಮರಳಿ ಬರಲು ಕಾರಣವೇನಿತ್ತು ಎಂಬುದು ಗೊತ್ತಿಲ್ಲ ಎಂದು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. ಈ ಆಸ್ಪತ್ರೆಯನ್ನು ಮಹಿಳೆಯರಿಗೆ ಕೆಲಸ ಮಾಡಲು ಸುರಕ್ಷಿತ ಆಸ್ಪತ್ರೆಯನ್ನಾಗಿ ಮಾಡಲು ಪ್ರಯತ್ನಿಸಬೇಕಾದುದು ಅಗತ್ಯವಾಗಿದೆ ಎಂದು ಮತ್ತೊಬ್ಬ ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಯುವತಿಯ ಬರ್ಬರ ಹತ್ಯೆಗೆ ಸ್ನೇಹಿತನಿಗೆ ಸಾಥ್​ ನೀಡಿದ ಆರೋಪಿಗಳಿಬ್ಬರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts