More

    ಪ್ರಾಣ ಕೈಗೆ ನೀಡಿದವರಿಗೆ ನಂಬಿಕೆದ್ರೋಹ… 7 ಜನರಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿದ ನರ್ಸ್​!

    ವೆಸ್ಟ್​​ ವರ್ಜಿನಿಯಾ : ಏಳು ನಿವೃತ್ತ ಸೇನಾ ಅಧಿಕಾರಿಗಳಿಗೆ ವೈದ್ಯರ ಆಣತಿಯಿಲ್ಲದೆ ಮಾರಣಾಂತಿಕವಾಗಿ ಇನ್ಸುಲಿನ್​ ಇಂಜೆಕ್ಷನ್​ಗಳನ್ನು ನೀಡಿದ್ದ ಮಾಜಿ ನರ್ಸಿಂಗ್ ಸಹಾಯಕಿಗೆ ಅಮೆರಿಕದ ಕೋರ್ಟ್​ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾಗಿರುವ ರೇಟಾ ಮೇಯ್ಸ್​ ಎಂಬುವಳು ವೆಸ್ಟ್​​ ವರ್ಜಿನಿಯಾದ ಆಸ್ಪತ್ರೆಯೊಂದರಲ್ಲಿ 2017 ಮತ್ತು 2018 ರ ನಡುವೆ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಇನ್ನೂ 13 ಅನುಮಾನಾಸ್ಪದ ಸಾವುಗಳು ಸಂಭವಿಸಿದ್ದವು ಎನ್ನಲಾಗಿದೆ.

    ರೇಟಾ ಮೇಯ್ಸ್​ಗೆ ಏಳು ಸತತ ಅವಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಮೆರಿಕ ಜಿಲ್ಲಾ ನ್ಯಾಯಾಧೀಶ ಥಾಮಸ್​ ಕ್ಲೀಹ್​ ಅವರು, ಆಕೆಯನ್ನು ಯಾರೂ ನಿರೀಕ್ಷಿಸಿರದಂಥ “ಮಾನ್ಸ್​​ಟರ್”​ ಎಂದು ವರ್ಣಿಸಿದ್ದಾರೆ. ಆದೇಶದನ್ವಯ ಮೇಯ್ಸ್​ ಬದುಕಿರುವವರೆಗೆ ಜೈಲಿನಲ್ಲಿ ಕಾಲ ಕಳೆಯಬೇಕಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ಫೇಕ್ ವಿಡಿಯೋ ಬಗ್ಗೆ ಮಹಿಳೆಯ ವಿಚಾರಣೆ

    ಮೇಯ್ಸ್​ಗೆ ಮಾನಸಿಕ ಅನಾರೋಗ್ಯದ ಸಮಸ್ಯೆಯಿದ್ದು, ವಿಚಾರಣೆ ನಡೆಯುತ್ತಿದ್ದಾಗ ಏಕೆ ಕೊಲೆ ಮಾಡಿದಳೆಂಬುದಕ್ಕೆ ನ್ಯಾಯಾಧೀಶರಿಗೆ ಏನೂ ವಿವರಣೆ ನೀಡಲಿಲ್ಲ. ಆದರೆ, ಶಿಕ್ಷೆ ಘೋಷಣೆಯಾಗುವ ಮುನ್ನ ‘ಸತ್ತವರ ಕುಟುಂಬದ ನೋವನ್ನು ಬದಲಾಯಿಸುವುದಕ್ಕೆ ನನ್ನ ಬಳಿ ಏನೂ ಶಬ್ದಗಳಿಲ್ಲ. ನಾನು ಕ್ಷಮೆ ಯಾಚಿಸುವುದಿಲ್ಲ. ಏಕೆಂದರೆ ನಾನು ಮಾಡಿದ್ದನ್ನು ಕ್ಷಮಿಸಲು ಸಾಧ್ಯ ಎನಿಸುವುದಿಲ್ಲ’ ಎಂದು ಹೇಳಿದಳು ಎನ್ನಲಾಗಿದೆ.

    ಕ್ಲಾರ್ಕ್ಸ್​ಬರ್ಗ್​ನಲ್ಲಿರುವ ಲೂಯಿ ಎ. ಜಾನ್ಸನ್ ವಿಎ ಮೆಡಿಕಲ್ ಸೆಂಟರ್​ನಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಈಗ 46 ವರ್ಷ ವಯಸ್ಸಾಗಿರುವ ಮೇಯ್ಸ್​, ಮಹಿಳಾ ಸೀರಿಯಲ್​ ಕಿಲ್ಲರ್​​ಗಳ ಬಗ್ಗೆ ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡುತ್ತಿದ್ದಳು. ‘ನರ್ಸಸ್​ ಹೂ ಕಿಲ್’ ಎಂಬ ಧಾರಾವಾಹಿ ನೋಡುತ್ತಿದ್ದಳು ಎನ್ನಲಾಗಿದೆ. ಮೇಯ್ಸ್​ ಬಗ್ಗೆ ಸಂಶಯಗೊಂಡ ಆಸ್ಪತ್ರೆ ಆಡಳಿತಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ನಡೆಸಲಾಯಿತು. ಪೊಲೀಸ್​ ವಿ​ಚಾರಣೆಯ ಸಂದರ್ಭದಲ್ಲಿ, ಆ ಸೇನಾ ಅಧಿಕಾರಿಗಳು ನರಳುತ್ತಿದ್ದುದರಿಂದ ತಾನು ಅವರು ಸುಖಾಂತ್ಯ ಕಾಣಲಿ ಎಂದು ಇನ್​​ಸುಲಿನ್​ ನೀಡಿದ್ದಾಗಿ ಮೇಯ್ಸ್​ ಹೇಳಿದ್ದಳು ಎನ್ನಲಾಗಿದೆ.

    ಇದನ್ನೂ ಓದಿ: ಮೇ 1 ರಿಂದ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಕೆ ನಡೆಯುತ್ತಿದೆ : ಭಾರತ್ ಬಯೋಟೆಕ್

    ಸೇನೆಯ ವೆಟರನ್​​ಗಳಾದ ರಾಬರ್ಟ್ ಲೀ ಕೊಜುಲ್ ಸೀನಿಯರ್(89), ಆರ್ಚೀ ಡಿ. ಎಡ್ಗೆಲ್ (84), ಫೆಲಿಕ್ಸ್ ಕಿರ್ಕ್ ಮೆಕ್‌ಡರ್ಮೊಟ್(82), ವಿಲಿಯಂ ಹಾಲೊವೇ (96); ನೌಕಾ ಪಡೆಯ ವೆಟರನ್​ಗಳಾಗಿದ್ದ ರಾಬರ್ಟ್ ಎಡ್ಜ್ ಸೀನಿಯರ್(82); ವಾಯುಪಡೆಯ ವೆಟರನ್ಸ್​ ಜಾರ್ಜ್ ನೆಲ್ಸನ್ ಶಾ ಸೀನಿಯರ್(81); ಮತ್ತು ಸೈನ್ಯ ಮತ್ತು ವಾಯುಪಡೆಯ ಅನುಭವಿ ರೇಮಂಡ್ ಗೋಲ್ಡನ್(88) – ಇವರುಗಳು ಕೊಲೆಯಾದವರು. ನೌಕಾಪಡೆಯ ಹಿರಿಯ ರಸ್ಸೆಲ್ ಆರ್. ಪೋಸಿ ಸೀನಿಯರ್(92) ಎಂಬುವರ ಮೇಲೆ ಹಲ್ಲೆ ಮಾಡಿದ್ದಕ್ಕೂ ಮೇಯ್ಸ್​ಗೆ ಹೆಚ್ಚುವರಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. (ಏಜೆನ್ಸೀಸ್)

    “ಸರ್, ಐ ಕಾಂಟ್ ಲಿವ್ ವಿಥೌಟ್ ಸ್ಮೋಕಿಂಗ್” ಎಂದು ಸಮಜಾಯಿಷಿ ನೀಡಿದ ವಾಹನಸವಾರ!

    ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts