More

    ವೈದ್ಯಕೀಯ ಸೀಟುಗಳ ಸಂಖ್ಯೆ 1.5 ಲಕ್ಷಕ್ಕೆ ಹೆಚ್ಚಳ: ಕೇಂದ್ರ ಸಚಿವ ಜೋಶಿ ಭರವಸೆ

    ಬೆಂಗಳೂರು ದೇಶಾದ್ಯಂತ 2014ರಲ್ಲಿ 51 ಸಾವಿರ ವೈದ್ಯಕೀಯ ಸೀಟುಗಳು ಲಭ್ಯವಿದ್ದವು. ಪ್ರಸ್ತುತ 1.1 ಲಕ್ಷಕ್ಕೆ ಏರಿದೆ. 2029ಕ್ಕೆ 1.50 ಲಕ್ಷಕ್ಕೆ ಏರಿಕೆ ಮಾಡಲಿದ್ದೇವೆ ಎಂದು ಕೇಂದ್ರ ಗಣಿ. ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಎಜುಕೇಷನ್ ಪ್ರಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್‌ಐ) ಮತ್ತು ಕಾಮೆಡ್-ಕೆ ಆಯೋಜಿಸಿದ್ದ ‘ಜಾಗತಿಕ ಸ್ಪರ್ಧಾತ್ಮಕವಾಗಿ ಭಾರತೀಯ ಉನ್ನತ ಶಿಕ್ಷಣವನ್ನು ರೂಪಿಸುವುದು’ ಎಂಬ ಎರಡು ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ಇಂಗ್ಲಿಷ್ ಬಲ್ಲವರಾಗಿದ್ದರೆ ಮಾತ್ರ ಕೆಲಸ ಸಿಗಲಿದೆ ಎಂಬುದು ಸುಳ್ಳು. ತಕ್ಷಶಿಲಾ, ನಳಂದಾ ವಿಶ್ವವಿದ್ಯಾಲಯದ ಸಮಯದಿಂದಲೂ ಭಾರತ ಕೌಶಲಯುಕ್ತವಾಗಿದೆ. ಎನ್‌ಇಪಿ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಕೌಶಲ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಪ್ರಯತ್ನ ನಡೆಸಿದೆ ಎಂದರು.

    19ನೇ ಶತಮಾನ ಇಂಗ್ಲೇಂಡ್‌ಗೆ ಸೇರಿದ್ದರೆ, 20ನೇ ಶತಮಾನ ಅಮೆರಿಕಕ್ಕೆ ಸೇರಿತ್ತು. 21ನೇ ಶತಮಾನ ಭಾರತಕ್ಕೆ ಸೇರಬೇಕು. 2004 ರಿಂದ 2014ರ ಮಧ್ಯೆ ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಇಂದು ಐದು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸದ್ಯದಲ್ಲಿಯೇ 3ನೇ ದೊಡ್ಡ ಆರ್ಥಿಕತೆಯಾಗಲಿದೆ. ಮಾನವ ಸಂಪನ್ಮೂಲ ಮತ್ತು ಉತ್ಪದನಾ ಚಟುವಟಿಕೆಗಳಲ್ಲಿ ಭಾರತಕ್ಕೆ ಸವಲಾಗಿದ್ದ ಚೀನಾದ ವಿಶ್ವಾಸಾರ್ಹತೆಗೆ ಕುಂದುಂಟಾಗಿರುವುದರ ಪ್ರಯೋಜನವನ್ನು ಭಾರತ ಪಡೆಯುತ್ತಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts