More

    ನುಗ್ಗಿಕೇರಿ ಗಲಾಟೆ ಪ್ರಕರಣ; ಆರೋಪಿಗಳಿಗೆ ಕಲ್ಲಂಗಡಿ ಹಣ್ಣಿಂದಲೇ ಸ್ವಾಗತ!

    ಧಾರವಾಡ: ಇಲ್ಲಿನ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದುಯೇತರರಿಗೆ ಅಂಗಡಿ ಕೊಟ್ಟ ಹಿನ್ನೆಲೆಯಲ್ಲಿ ಹಣ್ಣಿನ ವ್ಯಾಪಾರಿ ಇಟ್ಟುಕೊಂಡಿದ್ದ ಕಲ್ಲಂಗಡಿ ಹಣ್ಣುಗಳನ್ನು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

    ಧಾರವಾಡ ಹೊರವಲಯದ ನುಗ್ಗಿಕೇರಿ ದೇವಸ್ಥಾನದಲ್ಲಿ ಏ. 9ರಂದು ಈ ಗಲಾಟೆ ನಡೆದಿದ್ದು, ಶ್ರೀರಾಮಸೇನೆ ಸೇರಿರುವ ಮೈಲಾರಪ್ಪ, ಮಹಾಲಿಂಗ, ಚಿದಾನಂದ ಮತ್ತು ಕುಮಾರ ಎಂಬವರನ್ನು ಬಂಧಿಸಲಾಗಿತ್ತು. ಆದರೆ ಇಂದು ಅವರಿಗೆ ಧಾರವಾಡ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಆರೋಪಿಗಳ ವಿರುದ್ಧ ಅಂಗಡಿ ಮಾಲೀಕ ನಬೀಸಾಬ್ ಎಂಬವರು ನೀಡಿದ್ದ ದೂರಿನ ಮೇರೆಗೆ ಬಂಧಿಸಲಾಗಿತ್ತು.

    ಹೀಗೆ ಜಾಮೀನಿನ ಮೂಲಕ ಜೈಲಿನಿಂದ ಬಿಡುಗಡೆಯಾದ ಶ್ರೀರಾಮಸೇನೆ ಕಾರ್ಯಕರ್ತರಿಗೆ ಇಂದು ಇಲ್ಲಿನ ಸಾಧನಕೇರಿಯಲ್ಲಿನ ಕಚೇರಿಯಲ್ಲಿ ವಿಶೇಷ ರೀತಿಯಲ್ಲಿ ಸ್ವಾಗತ ಕೋರಲಾಯಿತು. ಕಲ್ಲಂಗಡಿ ಹಣ್ಣನ್ನು ಒಡೆದು ಆರೋಪಿಗಳಾಗಿ ಜೈಲಿಗೆ ಹೋಗಿದ್ದ ಇವರನ್ನು ಸಂಘಟನೆಯ ಸದಸ್ಯರು ಕುಂಬಳಕಾಯಿ ಬದಲು ಕಲ್ಲಂಗಡಿ ಹಣ್ಣನ್ನೇ ಒಡೆದು ಸ್ವಾಗತ ಕೋರಿದರು.

    ಅದೊಂದು ಫೋನ್​ ಕರೆಗೆ ಸಿಎಂ ವಾಪಸ್​ ಬಂದರು; ಕರೆ ಮಾಡಿದ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts