More

    ಬೆದರಿಕೆ ಎದುರಾದ್ರೆ ಹೋರಾಡ್ತೇವೆ, ಒಳಿತಿಗಾಗಿ ಸಮರ ಮಾಡ್ತೇವೆ- ಚೀನಾಕ್ಕೆ ದೋವಲ್ ಕಡಕ್ ಎಚ್ಚರಿಕೆ

    ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಅವರು ಸಮರ ಸನ್ನದ್ಧತೆಯ ಸಂದೇಶ ರವಾನಿಸಿದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಚೀನಾಕ್ಕೆ ಕಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಎಲ್ಲಿ ಬೆದರಿಕೆ ಎದುರಾಗುವುದೋ ಅಲ್ಲಿ ಭಾರತ ಹೋರಾಟ ನಡೆಸುತ್ತದೆ. ಒಳಿತಿಗಾಗಿಯೇ ಸಮರ ಮಾಡುತ್ತೇವೆ ಎಂದು ದೋವಲ್ ಎಚ್ಚರಿಸಿದ್ದಾರೆ.

    ನಾವು ನಮ್ಮ ರಾಷ್ಟ್ರವನ್ನು ರಕ್ಷಿಸುತ್ತಿಲ್ಲ, ರಾಜ್ಯವನ್ನಷ್ಟೇ ರಕ್ಷಿಸುತ್ತಿದ್ದೇವೆ. ಭಾರತದ ಸಂತರು ರೂಪಿಸುರುವಂಥದ್ದು ರಾಷ್ಟ್ರ. ಅದಕ್ಕೆ ಅಳಿವಿಲ್ಲ. ರಾಜ್ಯ ಹಾಗಲ್ಲ. ಅದಕ್ಕೆ ಕೊನೆ ಇದೆ ಎಂದು ದೋವಲ್​ ಹೇಳಿದ್ದಾರೆ.

    ಇದನ್ನೂ ಓದಿ:  ಸಿಕ್ಕಿಂ ಸಮೀಪ ಚೀನಾ ಗಡಿಯಲ್ಲಿರುವ ಸೇನಾ ನೆಲೆಯಲ್ಲಿ ಆಯುಧ ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್

    ಈ ನಡುವೆ, ರಾಜನಾಥ್ ಸಿಂಗ್ ಅವರು ಸೈನಿಕರೊಂದಿಗೆ ದಸರಾ ಆಚರಿಸಿ, ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲದೆ, ಚೀನಾ ಜತೆಗಿನ ಗಡಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಯಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ಧರಾಗಿರುವುದಾಗಿ ಚೀನಾಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ ಇಂದು ಬಾಷಣದಲ್ಲಿ ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಸೇನಾ ಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಮೈಸೂರು ದಸರಾ ಅಂಬಾರಿ ಆನೆಗಳ ಕಥೆ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts