More

    ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ಆಚರಣೆ: ಸಮವಸ್ತ್ರ ಬದಿಗಿಟ್ಟು ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿದ ವಿಜಯಪುರ ಪೊಲೀಸರು

    ವಿಜಯಪುರ: ಪೊಲೀಸರಿಗೆ ಪ್ರತಿ ದಿನ ಖಾಕಿ ಬಟ್ಟೆಯೇ ಸಂಗಾತಿ. ಅವರ ವೃತ್ತಿ ಜೀವನದಲ್ಲಿ ಬಹುತೇಕ ಬಣ್ಣ ಬಣ್ಣದ ಧಿರಿಸು ಅವರಿಗೆ ಕನಸಿನ ಮಾತೇ ಸರಿ. ಕಷ್ಟವೋ ಸುಖವೋ ಬಂದಿದ್ದೆಲ್ಲ ಬರಲಿ ಅನ್ನುತ್ತಾ ಬಿಸಿಲಿನ ಝಳಕ್ಕೆ ಮೈ ಒಡ್ಡುತ್ತಾ ತಲೆ ನೋವಿನ ಪ್ರಕರಣಗಳನ್ನು ಭೇದಿಸುತ್ತಾ ದಿನ ನಿತ್ಯದ ಜಂಜಾಟದಲ್ಲಿ ಒದ್ದಾಡುತ್ತಿರುತ್ತಾರೆ. ಅಂತಹ ಪೊಲೀಸರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದರೆ ಹೇಗಿರುತ್ತೆ? ಎನ್ನುವುದಕ್ಕೆ ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆ ಸಾಕ್ಷಿಯಾಯಿತು.

    ನಾಡಿನೆಲ್ಲೆಡೆ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು. ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಜಬರ್ದಸ್ತ್ ಆಗಿ ಕಾಣುತ್ತಿದ್ದ ಪೊಲೀಸರು ಇಂದು ಸಾಂಪ್ರದಾಯಿಕ ಶೈಲಿಯ ಬಿಳಿ ಧರಿಸನ್ನು ತೊಟ್ಟು ಮಿಂಚಿದರು. ಬಿಳಿ ಪಂಚೆ, ಬಿಳಿ ಗಾಂಧಿ ಟೋಪಿ ಹಾಗೂ ಬಿಳಿ ಶರ್ಟ್​ನಲ್ಲಿ ಕಂಗೊಳಿಸಿದರು.

    ಠಾಣೆಯಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ವಾಹನಗಳು, ರಿವಾಲ್ವಾರ್​, ಬಂದೂಕುಗಳನ್ನು ಅಲಂಕಾರಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸಿದರು. ಪೂಜೆಯ ಬಳಿಕ ಸಿಬ್ಬಂದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಠಾಣೆಯ ಪಿಎಸ್ಐ ಯತೀಶ್ ಕೆ.ಎನ್., ಪ್ರೊಬೆಷನರಿ ಪಿಎಸ್ಐ. ಸುಷ್ಮಾ ಬಿ.ಎನ್ ಹಾಗೂ ಠಾಣೆಯ ಪೊಲೀಸ್ ಸಿಬ್ಬಂದಿ ಹಾಜರಿದ್ದರು. (ದಿಗ್ವಿಜಯ ನ್ಯೂಸ್​)

    ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿಪಿ ಹತ್ಯೆ ಪ್ರಕರಣ: ಆರೋಪಿ ಡೈರಿಯಲ್ಲಿದ್ದ ಬರಹ ನೋಡಿ ದಂಗಾದ ಪೊಲೀಸರು

    ಬೈಕ್​ನಲ್ಲಿ ಬಂದು ಭಾನುವಾರ ಮಾತ್ರ ಸರಗಳ್ಳತನ! ಖದೀಮನ ಹಿನ್ನೆಲೆ ತಿಳಿದು ಬೆರಗಾದ ಹಾಸನ ಪೊಲೀಸರು

    ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಮುಂಬೈನಲ್ಲಿ ಖರೀದಿಸಿರುವ ಐಷಾರಾಮಿ ಅಪಾರ್ಟ್​ಮೆಂಟ್​ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts