More

    ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೆ ಆದ್ಯತೆ

    ಶೃಂಗೇರಿ: ವಿದೇಶದಲ್ಲಿರುವ ಭಾರತೀಯರ ರಕ್ಷಣೆ ಹಾಗೂ ಸುರಕ್ಷತೆ ಮೊದಲ ಕರ್ತವ್ಯ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.
    ಪ್ರವಾಸಿ ಮಂದಿರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುಕ್ರೇನ್ ಮತ್ತು ರಷ್ಯಾ, ಇಸ್ರೇಲ್ ಮತ್ತು ಪ್ಯಾಲಸ್ತೀನ್ ನಡುವೆ ಯುದ್ಧ ಸಂಭವಿಸಿದಾಗ ಅನೇಕ ಭಾರತೀಯರು ತೊಂದರೆಯಲ್ಲಿ ಸಿಲುಕಿಕೊಂಡಿದ್ದರು. ಇಂತಹ ಸಂದರ್ಭಗಳಲ್ಲಿ ಮತ್ತು ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ರಕ್ಷಣೆ, ಮೃತರಾದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ಷೇತ್ರಕ್ಕೆ ಎರಡು ನಿಗಮ ಮಂಡಳಿ ಅಧ್ಯಕ್ಷರನ್ನು ನೀಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯಾಗಿದ್ದ ಇವರಿಗೆ ಈಗ ಮತ್ತೆ ಅದೇ ಜವಾಬ್ಧಾರಿ ನೀಡಲಾಗಿದೆ. 2017-18ರಲ್ಲಿ ಮೆಣಸೆ-ಕೆರೆಮನೆ ರಸ್ತೆಗೆ ಸಿಎಂ ಅನುದಾನದಡಿ 20 ಲಕ್ಷ ರೂ. ಅನುದಾನ ಕೊಡಿಸುವಲ್ಲಿ ಇವರ ಸೇವೆ ಅಮೂಲ್ಯ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡಿದ್ದಾರೆ ಎಂದರು.
    ಡಾ.ಆರತಿಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶಿವಮೂರ್ತಿ, ತ್ರಿಮೂರ್ತಿ, ಅನಿಲ್ ಹೊಸಕೊಪ್ಪ, ದಿನೇಶ್ ಹೆಗ್ಡೆ, ಲಕ್ಷ್ಮೀಶ, ಕುರಾದಮನೆ ವೆಂಕಟೇಶ, ಪೂರ್ಣಿಮಾ ಸಿದ್ದಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಹೆಗ್ಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts