More

    ವಾಟ್ಸ್ಯಾಪ್ ಅಪ್​ಡೇಟ್​: ನಿಮಗೆ ನೀವೇ ಮೆಸೇಜ್​ ಮಾಡಿಕೊಳ್ಳಬಹುದು!

    ಬೆಂಗಳೂರು: ಹೌದು! ಇನ್ನು ವಾಟ್ಸ್ಯಾಪ್​ನಲ್ಲಿ ನಮಗೆ ನಾವೇ ಸಂದೇಶಗಳನ್ನು ಕಳಿಸಿಕೊಳ್ಳಬಹುದು. ಮೆಟಾ (ಫೇಸ್​ಬುಕ್​) ಮಾಲೀಕತ್ವದ ವಾಟ್ಸ್ಯಾಪ್​ನಲ್ಲಿ ಈ ಹೊಸ ಫೀಚರ್​ ಅನ್ನು ಪರಿಚಯಿಸಲಾಗಿದ್ದು ಇದು ಈಗ ಎಲ್ಲಾ ಬಳಕೆದಾರರಿಗೂ ಲಭ್ಯವಾಗಿದೆ.

    ಈ ಹಿಂದೆ ಈ ಫೀಚರ್​, ವಾಟ್ಸ್ಯಾಪ್​ನ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಇದೀಗ ಸಾರ್ವಜನಿಕರಿಗೂ ಲಭ್ಯವಾಗಿದ್ದು ಇದು ಅನೇಕ ಜನರ ಕೆಲಸ ಸುಭ ಮಾಡಲಿದೆ ಎನ್ನಲಾಗುತ್ತಿದೆ.

    ಅನೇಕರು, ಅಗತ್ಯ ಮಾಹಿತಿಯನ್ನು ಸೇವ್​ ಮಾಡಿಕೊಳ್ಳಲು ತಾವೊಬ್ಬರೇ ಇರುವ ಗ್ರೂಪ್​ಗಳನ್ನು ಸೃಷ್ಟಿಸಿಕೊಂಡು ಅಲ್ಲಿಗೆ ಅಗತ್ಯ ಮೆಸೇಜ್​ಗಳನ್ನು ಕಳಿಸುತ್ತಿದ್ದರು. ಇದನ್ನು ತಪ್ಪಿಸಲು ಇದೀಗ ವಾಟ್ಸ್ಯಾಪ್​ ಈ ಫೀಚರ್​ಅನ್ನು ಪರಿಚಯಿಸಿದೆ ಎನ್ನಲಾಗುತ್ತಿದೆ.

    ಹೊಸ ಫೀಚರ್​ ಬಳಸುವುದು ಹೇಗೆ?
    ಈ ಫೀಚರ್​ ಅನ್ನು ಬಳಸಲು ಶುರು ಮಾಡುವುದು ತೀರಾ ಸರಳ. ವಾಟ್ಸ್ಯಾಪ್​ ಅಪ್ಲಿಕೇಶನ್​ ತೆರೆದ ಕೂಡಲೆ ಸಾಧಾರಣವಾಗಿ ಎಲ್ಲಾ ಚಾಟ್​ಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅಲ್ಲೇ ಕೆಳಗಡೆ ಬಲ ಬದಿಗೆ ಪರದೆ ಮೇಲೆ ಮೆಸೇಜ್​ನ ಐಕಾನ್​ಅನ್ನು ಕಾಣಬಹುದು. ಇಲ್ಲಿ ಹೋಗಿಯೇ ಈ ಹಿಂದೆ ಹೊಸ ಗ್ರೂಪ್​ಗಳನ್ನು ಸೃಷ್ಟಿಸುವುದು ಇತ್ಯಾದಿ ಮಾಡುತ್ತೇವೆ.

    ಈ ಐಕಾನ್​ ಮೇಲೆ ಒತ್ತಿದರೆ ‘ನ್ಯೂ ಗ್ರೂಪ್​’ ‘ನ್ಯೂ ಕಾಂಟ್ಯಾಕ್ಟ್​’ ‘ನ್ಯೂ ಕಮ್ಯುನಿಟಿ’ ಎಂದು ಮೊದಲ ಮೂರು ಆಯ್ಕೆಗಳು ಕಾಣಸಿಗುತ್ತವೆ. ಅವುಗಳ ಕೆಳಗೆ ನಾಲ್ಕನೇ ಆಯ್ಕೆಯಾಗಿ ನಿಮ್ಮ ಹೆಸರನ್ನು ಬರೆದು ಅದರ ಎದುರು ಆವರಣ ಚಿಹ್ನೆ ಅಥವಾ ಬ್ರಾಕೆಟ್​ನಲ್ಲಿ ಯೂ ಎಂದು ಬರೆದಿರುತ್ತದೆ. ಅದನ್ನು ಒತ್ತಿ ಏನಾದರೂ ಒಂದು ಸಂದೇಶ ಕಳಿಸಿ. ಅದರಿಂದಾಗಿ ಈ ಚಾಟ್​, ಚಾಟ್​ಲಿಸ್ಟ್​ನಲ್ಲಿ ಕಾಣಸಿಗುತ್ತದೆ. ನಂತರ ಇದನ್ನು ಬಳಸುತ್ತಾ ಇರಬಹುದು. ಇದರಿಂದಾಗಿ ಪ್ರಯಾಣ ಮಾಡುವಾಗ ಅಗತ್ಯ ದಾಖಲೆಗಳ ಫೋಟೊ, ಅಗತ್ಯ ಮಾಹಿತಿ, ಇತ್ಯಾದಿಗಳನ್ನು ಮೆಸೇಜ್​ ರೂಪದಲ್ಲಿ ಸೇವ್​ ಮಾಡಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts