More

    ಯಾವ ಅಡೆತಡೆಗೆ ಹೆದರುವುದಿಲ್ಲ

    ಭಟ್ಕಳ: ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಹಿಂದುಳಿ ವರ್ಗ 2ಎ ಹಿತರಕ್ಷಣಾ ವೇದಿಕೆಯಿಂದ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಮಾವೇಶಕ್ಕೆ ತಾಲೂಕಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ವೇದಿಕೆ ಅಧ್ಯಕ್ಷ ಜೆ.ಡಿ. ನಾಯ್ಕ ಹೇಳಿದರು.

    ಭಾನುವಾರ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆ ಸುರಿದಿದೆ. ಆದರೂ ನಮ್ಮ ಬೈಕ್ ಸವಾರರು ಜಾಗೃತಿ ಮೂಡಿಸುವ ದಿಸೆಯಲ್ಲಿ ರ‍್ಯಾಲಿ ನಡೆಸಿದ್ದಾರೆ. ನಮ್ಮ ಹೋರಾಟಕ್ಕೆ ಯಾವ ಅಡೆ ತಡೆ ಬಂದರೂ ನಾವು ಮುನ್ನುಗ್ಗುವುದು ನಿಶ್ಚಿತ ಎಂದರು.

    ಸಮಾವೇಶದ ಪೂರ್ವಭಾವಿಯಾಗಿ ಮುರ್ಡೆಶ್ವರ ಮತ್ತು ಭಟ್ಕಳ ಭಾಗದಿಂದ ನೂರಾರು ಯುವಕರು ಗ್ರಾಮಾಂತರ ಪ್ರದೇಶಗಳಲ್ಲಿ ಬೈಕ್ ರ‍್ಯಾಲಿ ಮೂಲಕ ಸಂಚರಿಸಿ ಜನಜಾಗೃತಿ ಮೂಡಿಸಿದರು. ಸಮಾವೇಶದ ಉದ್ದೇಶ, ನಮ್ಮ ಹಕ್ಕುಗಳ ರಕ್ಷಣೆಗೆ ಹೋರಾಟದ ಸ್ವರೂಪವನ್ನು ವಿವರಿಸಿ ಜನಜಾಗೃತಿ ಮೂಡಿಸಲಾಯಿತು. ಪೊಲೀಸ್ ಮೈದಾನದಿಂದ ಆರಂಭವಾದ ಬೈಕ್ ರ‍್ಯಾಲಿ ಕಿತ್ರೆ, ಮಾರುಕೇರಿ, ಕೋಣಾರ, ಸರ್ಪನಕಟ್ಟೆ, ಪುರವರ್ಗ, ಚೌಥನಿ, ಮುಂಡಳ್ಳಿ, ಬಂದರ, ತಲಗೋಡ, ಕರಿಕಲ್, ಜಾಲಿ, ತಂಗಿನಗುಂಡಿ, ಕುಕ್ಕನೀರ್, ವೆಂಕಟಾಪುರ, ಹುರುಳಿಸಾಲ್ ಗ್ರಾಮವನ್ನು ಸುತ್ತಿ ಪುನಃ ಪೊಲೀಸ್ ಮೈದಾನ ತಲುಪಿತು.

    ಮುರ್ಡೆಶ್ವರ ಭಾಗದ ರ‍್ಯಾಲಿ ಬೈಲೂರಿನಿಂದ ಆರಂಭಗೊಂಡು ಮುರ್ಡೆಶ್ವರ ಪಟ್ಟಣ ಹಾದು ಬಸ್ತಿ ಮೂಲಕ ಹೆದ್ದಾರಿಯಲ್ಲಿ ಶಿರಾಲಿ, ವೆಂಕಟಾಪುರದ ಮಾರ್ಗವಾಗಿ ಆಗಮಿಸಿತು.

    ಪ್ರಮುಖರಾದ ವಿಠ್ಠಲ ನಾಯ್ಕ, ಸಂತೋಷ ನಾಯ್ಕ ಗಣಪತಿ ನಾಯ್ಕ ಮುಠ್ಠಳ್ಳಿ, ಈರಪ್ಪ ಗರ್ಡಿಕರ ಸೇರಿ ಸಾವಿರಾರು ಜನರು ಇದ್ದರು.

    ಫೋಟೋ-21ಬಿಕೆಎಲ್2-ಭಟ್ಕಳ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಜೆ.ಡಿ. ನಾಯ್ಕ ಚಾಲನೆ ನೀಡಿದರು. ವಿಠ್ಠಲ ನಾಯ್ಕ, ಸಂತೋಷ ನಾಯ್ಕ ಗಣಪತಿ ನಾಯ್ಕ ಮುಠ್ಠಳ್ಳಿ, ಈರಪ್ಪ ಗರ್ಡಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts