More

    ರಾಜ್ಯಕ್ಕೆ ಹಿಂಗಾರು ಆಗಮನ: ಎಷ್ಟು ಮಳೆ, ಎಲ್ಲಿಯವರೆಗೆ?; ಇಲ್ಲಿದೆ ಮಾಹಿತಿ..

    ಬೆಂಗಳೂರು: ಈಶಾನ್ಯ ಮಾನ್ಸೂನ್ (ಹಿಂಗಾರು ಮಳೆ ) ರಾಜ್ಯಕ್ಕೆ ಅಧಿಕೃತವಾಗಿ ಆಗಮನವಾಗಿದೆ. ವಾಡಿಕೆಯಂತೆ ಪ್ರಸ್ತುತ ತಿಂಗಳ 2ನೇ ವಾರದಲ್ಲಿ ಆಗಮಿಸಬೇಕಿತ್ತು. ಆದರೆ, ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಸಕ್ರಿಯವಾಗಿದ್ದ ಕಾರಣ ಹಿಂಗಾರು ವಾಡಿಕೆಗಿಂತ ತಡವಾಗಿ ಪ್ರವೇಶಿಸಿದೆ.

    ಈ ಬಾರಿ ದೇಶಾದ್ಯಂತ ವಾಡಿಕೆಯಷ್ಟೇ ಹಿಂಗಾರು ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ಭವಿಷ್ಯ ನುಡಿದಿದೆ. ಡಿ.31ರವರೆಗೆ ಹಿಂಗಾರು ಮುಂದುವರಿಯಲಿದೆ ಎಂದೂ ಅದು ತಿಳಿಸಿದೆ.

    ನ.3ರಿಂದ ಚುರುಕು: ರಾಜ್ಯದಲ್ಲಿ ನ.3ರಿಂದ ಹಿಂಗಾರು ಚುರುಕುಗೊಳ್ಳಲಿದೆ. ರಾಮನಗರ, ಮಂಡ್ಯ, ಚಾಮರಾಜನಗರ ಮತ್ತು ಕೊಡಗಿನಲ್ಲಿ ನ.3ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ.

    ತಮಿಳುನಾಡು,ಪುದಿಚೇರಿ, ಕಾರೈಕಲ್, ಕೇರಳ, ಮಾಹೆ, ದಕ್ಷಿಣ ಕರ್ನಾಟಕ ಹಾಗೂ ರಾಯಲಸೀಮಾ ಭಾಗಗಳಲ್ಲಿ ಅ.30ರಂದು ಈಶಾನ್ಯ ಮಾನ್ಸೂನ್ ಆವರಿಸಿದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.

    ಭಗತ್ ಸಿಂಗ್ ಪಾತ್ರಕ್ಕೆಂದು ರಿಹರ್ಸಲ್ ಮಾಡುತ್ತಿದ್ದ ಬಾಲಕ ನಿಜವಾಗಿಯೂ ಉರುಳಿಗೆ ಬಲಿಯಾದ!

    ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts