More

    ಸಾರ್ವಜನಿಕವಾಗಿ ಕಾಣಿಸಿಕೊಂಡ ಸರ್ವಾಧಿಕಾರಿ ಕಿಮ್ ಪತ್ನಿ

    ಪಾಂಗಯೊಂಗ್: ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಧರ್ಮಪತ್ನಿ ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

    ಬುಧವಾರ ನಡೆದ ಉತ್ತರ ಕೋರಿಯಾದ ನ್ಯಾಷನಲ್ ಡೇ ಸಮಾರಂಭದಲ್ಲಿ ಕಿಮ್ ಜೊತೆ ಅವರ ಪತ್ನಿ ರಿ ಸೋಲ್ ಜು ಅವರು ಕಿಮ್ ಜೊತೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ವರ್ಷಗಳು ಆಗಿದ್ದವು.

    ಕಿಮ್ ಸರ್ಕಾರದ ಅಧಿಕೃತ ಪತ್ರಿಕೆಯಾದ ರೋಡೊಂಗ್ ಸಿನ್​ಮುನ್ ರಿ ಸೋಲ್ ಜು, ಕಿಮ್ ಜೊತೆ ಇರುವ ಈ ಫೋಟೊವನ್ನು ಪ್ರಕಟಿಸಿದೆ.

    ಕಿಮ್ ಅವರ ತಂದೆ ದಿವಂಗತ ಕಿಮ್ ಜಾಂಗ್ ಅವರ ಜನ್ಮದಿನಾಚರಣೆ ಪ್ರಯುಕ್ತ ಫೆ 17 ರಂದು ಉತ್ತರ ಕೋರಿಯಾದ ನ್ಯಾಷನಲ್ ಡೇ ಆಚರಿಸಲಾಗುತ್ತದೆ. ಈ ಪ್ರಯುಕ್ತ ರಾಜಧಾನಿ ಪಾಂಗಯೊಂಗ್ ಮಾನಸೊಡೆ ಕಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ಕಿಮ್ ದಂಪತಿ ವೀಕ್ಷಿಸಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts