More

    ಮತ್ತೆ ಏರಿತು ಸಿಲಿಂಡರ್​ ದರ: ಈಗ ಒಂದು ಸಿಲಿಂಡರ್​ಗೆ ಎಷ್ಟು ಹಣ ತೆರಬೇಕು ಗೊತ್ತಾ?

    ನವದೆಹಲಿ: ಸಬ್ಸಿಡಿ ರಹಿತ ಎಲ್​ಪಿಜಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಾದ ಚೆನ್ನೈ, ಕೋಲ್ಕತ್ತ ಮತ್ತು ಮುಂಬೈ ನಗರಗಳಲ್ಲಿ ಪ್ರತಿ ಸಿಲಿಂಡರ್​ ಮೇಲೆ 150 ರೂಪಾಯಿಯುಷ್ಟು ಹೆಚ್ಚಳ ಮಾಡಿರುವುದಾಗಿ ಇಂಡಿಯನ್​ ಆಯಿಲ್​ ಸಂಸ್ಥೆ ತಿಳಿಸಿದೆ.

    ದೆಹಲಿಯಲ್ಲಿ ನಿನ್ನೆವರೆಗೆ 714 ರೂಪಾಯಿಯಿದ್ದ ಸಬ್ಸಿಡಿ ರಹಿತ ಸಿಲಿಂಡರ್​ ಒಂದರ ಬೆಲೆಯು ಇಂದು 858.5 ರೂಪಾಯಿಗೆ ಏರಿದೆ. ಮುಂಬೈನಲ್ಲಿ 684.5 ರೂಪಾಯಿ ಇದ್ದ ಸಿಲಿಂಡರ್​ ಬೆಲೆಯು ಇಂದು 829 ರೂಪಾಯಿ ಆಗಿದೆ. ಕೊಲ್ಕತ್ತದಲ್ಲಿ 747 ರೂಪಾಯಿಯಿದ್ದ ಬೆಲೆಯು 896ರೂಪಾಯಿ ಆಗಿದೆ. ಚೆನ್ನೈನಲ್ಲಿ 734 ರೂಪಾಯಿಯಿಂದ 881 ರೂಪಾಯಿಗೆ ಏರಿಸಲಾಗಿದೆ.

    ಕಳೆದ ಆಗಸ್ಟ್​ ತಿಂಗಳಿನಿಂದ ಇಂದಿನವರೆಗೆ ಗಮನಿಸಿದರೆ ದೆಹಲಿಯಲ್ಲಿ ಒಂದು ಸಿಲಿಂಡರ್​ (14.2ಕೆ.ಜಿ) ಬೆಲೆಯಲ್ಲಿ 284 ರೂಪಾಯಿ ಹೆಚ್ಚಳವಾಗಿದ್ದು, ಮುಂಬೈನಲ್ಲಿ 283 ರೂಪಾಯಿ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ.

    ಈ ತಿಂಗಳಿನಿಂದ 19 ಕೆ.ಜಿಯ ಸಬ್ಸಿಡಿ ರಹಿತ ಸಿಲಿಂಡರ್​ಗಳ ಬೆಲೆಯು ದೆಹಲಿಯಲ್ಲಿ 1,540.5 ರೂಪಾಯಿ ಮತ್ತು ಮುಂಬೈನಲ್ಲಿ 1,241 ರೂಪಾಯಿ ಆಗಿರಲಿದೆ ಎಂದು ಇಂಡಿಯನ್​ ಆಯಿಲ್​ ಸಂಸ್ಥೆಯು ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts