More

    ಅಸ್ತಿತ್ವವಿಲ್ಲದ ಬೋರ್‌ವೆಲ್‌ಗೆ ಕರೆಂಟ್ ಬಿಲ್; 131 ಕೊಳವೆಬಾವಿಗಳಿಗೆ 5 ಕೋಟಿ ರೂ.

    ಕೊಟ್ಟೂರು: ತಾಲೂಕಿನ 14 ಗ್ರಾಪಂಗಳಲ್ಲಿ ಅಸ್ತಿತ್ವದಲ್ಲಿಲ್ಲದ 131 ಬೋರ್‌ವೆಲ್‌ಗಳಿಗೆ ಜೆಸ್ಕಾಂ 5.78 ಕೋಟಿ ರೂ.ಬಿಲ್ ನೀಡಿದೆ ಎಂದು ತಾಪಂ ಇಒ ವಿಶ್ವನಾಥ್ ಹೇಳಿದರು.

    ತಾಪಂ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಪಂ ಅಸ್ತಿತ್ವದಲ್ಲಿ ಇರುವ ಮತ್ತು ಇಲ್ಲದಿರುವ ಕೊಳವೆಬಾವಿಗಳನ್ನು ವರ್ಗೀಕರಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ತಾಪಂ ಸಾಮಾನ್ಯ ಸಭೆಯಲ್ಲಿ ನೀಡಿದ ಸೂಚನೆ ಯಂತೆ ಸಮೀಕ್ಷೆ ನಡೆಸಿದ್ದು, ತಾಲೂಕಿನಲ್ಲಿ ಒಟ್ಟು 342 ಬೋರ್‌ವೆಲ್‌ಗಳಿವೆ. ಈ ಪೈಕಿ 131 ಸ್ಥಗಿತವಾಗಿದ್ದರೂ, ಜೆಸ್ಕಾಂ ಬಿಲ್ ಕೊಟ್ಟು ಹಣ ಪಾವತಿಸಿಕೊಂಡಿದೆ ಎಂದು ತಿಳಿಸಿದರು. ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಕೇಳಿದರೆ, ಗ್ರಾಪಂ ಪಿಡಿಒಗಳು ಸ್ಥಗಿತ ಬೋರ್‌ವೆಲ್‌ಗಳನ್ನು ಪಟ್ಟಿ ಮಾಡಿ ಸಲ್ಲಿಸಿದ್ದರೆ, ಬಿಲ್ ರದ್ದು ಪಡಿಸುತ್ತಿದ್ದೆವು. ಪಿಡಿಒಗಳು ಪತ್ರ ಬರೆಯದ ಕಾರಣ ಬಿಲ್ ನೀಡಲಾಗಿದೆ ಎನ್ನುತ್ತಿದ್ದಾರೆ.

    ಜೆಸ್ಕಾಂ-ಗ್ರಾಪಂಗಳ ನಡುವಿನ ಸಮನ್ವಯತೆ ಕೊರತೆಯಿಂದ ತಾಲೂಕಿನ 342 ಬೋರ್‌ವೆಲ್‌ಗಳಿಂದ 18.5 ಕೋಟಿ ರೂ. ಬಿಲ್ ಬಂದಿದೆ. ಈಗ ತಾಲೂಕಿನ ಎಲ್ಲ ಗ್ರಾಪಂಗಳಿಂದ ವರದಿ ಪಡೆದು ಜಿಪಂಗೆ ಸಲ್ಲಿಸಲಾಗಿದೆ. ಅದನ್ನು ಜಿಪಂ, ಸರ್ಕಾರಕ್ಕೆ ಕಳಿಸಿದ್ದು, ಏನು ಕ್ರಮ ಕೈಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಇಒ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts