More

    ಕೊನೆ ದಿನ ನಾಮಪತ್ರಗಳ ಅಬ್ಬರ: 52 ಅಭ್ಯರ್ಥಿಗಳಿಂದ 62 ಉಮೇದುವಾರಿಕೆ

    ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಜಿಲ್ಲೆಯಲ್ಲಿ 52 ಅಭ್ಯರ್ಥಿಗಳಿಂದ 62 ಉಮೇದುವಾರಿಕೆ ಸಲ್ಲಿಕೆಯಾಗಿದೆ.
    ಪ್ರಮುಖವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ರವಿಕುಮಾರ್ ಗಣಿಗ ಮೂರು, ಜೆಡಿಎಸ್‌ನಿಂದ ರಾಮಚಂದ್ರು ಎರಡು ಮತ್ತು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ವಿಜಯಾನಂದ ಎರಡು ನಾಮಪತ್ರ, ಎಚ್.ಎನ್.ಯೋಗೇಶ್, ಮಹಾಲಿಂಗಪ್ಪ, ಬಿಜೆಪಿಯಿಂದ ಅಶೋಕ್ ಜಯರಾಂ, ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್.ದೇವರಾಜು, ಮೇಲುಕೋಟೆ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ ಉಮೇದುವಾರಿಕೆ ಸಲ್ಲಿಸಿದರು.
    ಮಂಡ್ಯ ಕ್ಷೇತ್ರದಿಂದ ಆಪ್‌ನಿಂದ ಪುಟ್ಟಸ್ವಾಮಿ, ಬಿಎಸ್ಪಿಯಿಂದ ಎಸ್.ಶಿವಶಂಕರ್, ಪಕ್ಷೇತರ ಅಭ್ಯರ್ಥಿಗಳಾದ ಕೆ.ಎಸ್.ಮಲ್ಲಿಕಾರ್ಜುನ, ಡಾ.ಎಚ್.ಕೃಷ್ಣ, ಎಸ್.ಜೆ.ಮಂಜುನಾಥ, ಎಚ್.ಸಿ.ಶಿವರಾಮು, ಐರಾ ನ್ಯಾಷನಲ್ ಪಾರ್ಟಿಯಿಂದ ಸುವರ್ಣ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಡಿ.ಜಿ.ನಾಗರಾಜು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ಯಿಂದ ಎಂ.ಪಿ.ವಿಶ್ವ, ಮಳವಳ್ಳಿಯಿಂದ ಭಾರತೀಯ ಬೆಳಕು ಪಾರ್ಟಿಯಿಂದ ಸಿ.ಎಂ.ನಾಗರಾಜುಮೂರ್ತಿ, ಬಿಎಸ್ಪಿಯಿಂದ ಎಂ.ಕೃಷ್ಣಮೂರ್ತಿ, ಕರುನಾಡು ಪಾರ್ಟಿಯಿಂದ ಎಚ್.ಕೆ.ಕೃಷ್ಣ, ಪಕ್ಷೇತರ ಅಭ್ಯರ್ಥಿಗಳಾಗಿ ಜೆ.ಉಮಾ, ಎಂ.ಎಸ್.ಮಾಧವ್‌ಕಿರಣ್, ಸಿದ್ದರಾಜು, ಎಚ್.ಬಿ.ಸುಧಾ, ಎಲ್.ಕೆ.ಶಿವಣ್ಣ, ಆರ್.ನಾಗೇಶ್, ಮದ್ದೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಮನೋಹರ, ಎನ್.ಸಿ.ಪುಟ್ಟರಾಜು, ನದೀಂ ಬೇಗ್, ಮೇಲುಕೋಟೆಯಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಯೋಗಾನಂದ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಕೆ.ಆರ್.ಮಹೇಂದ್ರಕುಮಾರ್, ಪಕ್ಷೇತರನಾಗಿ ಸಿ.ಎಸ್.ಪುಟ್ಟರಾಜು ನಾಮಪತ್ರ ಸಲ್ಲಿಸಲಿದ್ದಾರೆ.
    ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಎಸ್ಪಿಯಿಂದ ಪಿ.ಆನಂದ, ಆಪ್‌ನಿಂದ ಬಿ.ಪುಷ್ಪಾ, ಅಖಿಲ ಭಾರತ ಮಾನವ ಹಕ್ಕು ಪಕ್ಷದಿಂದ ಅನಿಲ್‌ಕುಮಾರ್, ಪಕ್ಷೇತರರಾಗಿ ಎಂ.ಎಂ.ಮಹೇಶ್‌ಗೌಡ, ಟಿ.ಎಸ್.ವೆಂಕಟೇಶ್, ಎಚ್.ಡಿ.ಜವರೇಗೌಡ, ಕೆ.ದೇವಿಕಾ, ವೈ.ಎಂ.ಗಿರೀಶ್, ಎಸ್.ಮಂಜುನಾಥ, ನಾಗಮಂಗಲದಿಂದ ಕಾಂಗ್ರೆಸ್‌ನಿಂದ ಎನ್.ಚಲುವರಾಯಸ್ವಾಮಿ, ಜೆಡಿಎಸ್‌ನಿಂದ ಸುರೇಶ್‌ಗೌಡ, ಬಿಜೆಪಿಯಿಂದ ಸುಧಾ, ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಯೋಗಾನಂದಮೂರ್ತಿ, ಬಿಎಸ್ಪಿಯಿಂದ ಕೆ.ಎಚ್.ಮಹದೇವ, ಆಪ್‌ನಿಂದ ಬಿ.ಯೋಗೇಶ್, ಪಕ್ಷೇತರರಾಗಿ ಬಿ.ಎಂ.ಮಲ್ಲಿಕಾರ್ಜುನ, ಟಿ.ಸುರೇಶ್, ಎಂ.ಎಲ್.ಪ್ರಕಾಶ್, ಕೆ.ಆರ್.ಪೇಟೆ ಕ್ಷೇತ್ರದಿಂದ ಆಪ್‌ನಿಂದ ಶಿವಣ್ಣ, ಪಕ್ಷೇತರ ಅಭ್ಯರ್ಥಿಯಾಗಿ ಕೆ.ಮೀನಾಕ್ಷಮ ಉಮೇದುವಾರಿಕೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts