More

    ಕ್ರಿಕೆಟ್​ ಆಡುವಾಗಲೇ ಕುಸಿದುಬಿದ್ದು ಟೆಕ್ಕಿ ದುರ್ಮರಣ: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

    ನೋಯ್ಡಾ: ಪ್ರಸ್ತುತ ದಿನಗಳಲ್ಲಿ ಹೃದಯಾಘಾತವು ಕೂಡ ಒಂದು ಟ್ರೆಂಡಿಂಗ್ ವಿಷಯವಾಗಿದೆ. ಈ ಹೃದಯಾಘಾತ ಯಾವಾಗ? ಯಾರಿಗೆ? ಹೇಗೆ? ಬರುತ್ತದೋ ಗೊತ್ತಿಲ್ಲ. ಆಟವಾಡುತ್ತಿರುವಾಗಲೇ ಕುಸಿದು ಬಿದ್ದು, ಆಸ್ಪತ್ರೆಗೆ ಬರುವಷ್ಟರಲ್ಲಿ ಹೃದಯಾಘಾತದಿಂದ ಸಾಯುವವರೂ ಇದ್ದಾರೆ. ನಿದ್ದೆ ಮಾಡುವಾಗ, ಟಿವಿ ನೋಡುವಾಗ ಹೃದಯಾಘಾತಗಳು ಸಂಭವಿಸುತ್ತಿವೆ. ದಿನಕ್ಕೆ ನಾಲ್ಕೈದು ಹೃದಯಾಘಾತದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದರಲ್ಲೂ ಕರೊನಾ ನಂತರ ಹೃದಯಾಘಾತಗಳ ಸಂಖ್ಯೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳವಳಕಾರಿ ವಿಚಾರ ಏನೆಂದರೆ, ಚಿಕ್ಕಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ.

    ತಾಜಾ ಪ್ರಕರಣವೊಂದರಲ್ಲಿ ಕ್ರಿಕೆಟ್​ ಆಡುವಾಗ ನೋಯ್ಡಾ ಮೂಲದ ಟೆಕ್ಕಿಯೊಬ್ಬ ಪಿಚ್​ ಮೇಲೆಯೇ ಕುಸಿದುಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.

    ಮೃತ ಟೆಕ್ಕಿಯನ್ನು ವಿಕಾಸ್​ ನೇಗಿ ಎಂದು ಗುರುತಿಸಲಾಗಿದೆ. ರನ್​ ಗಳಿಸಲು ನಾನ್​ಸ್ಟ್ರೈಕರ್​ ವಿಭಾಗದ ಕಡೆಗೆ ಓಡುವಾಗ ಪಿಚ್​ ಮಧ್ಯದಲ್ಲೇ ಕುಸಿದುಬಿದ್ದರು. ಇದನ್ನು ನೋಡಿ ಕೀಪರ್​ ಹತ್ತಿರ ಓಡಿ ಬಂದರು. ಇದೇ ವೇಳೆ ಇತರೆ ಆಟಗಾರರು ಸಹ ನೆರವಿಗೆ ಧಾವಿಸಿದರು. ತಕ್ಷಣ ಹತ್ತಿರದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ವಿಕಾಸ್​ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಕಾಸ್​ ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಹೃದಯಾಘಾತವೇ ವಿಕಾಸ್​ ಸಾವಿಗೆ ಕಾರಣ ಎಂದು ವೈದ್ಯರು ಮರಣೋತ್ತರ ವರದಿಯಲ್ಲಿ ಘೋಷಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ವಿಕಾಸ್, ಕೋವಿಡ್‌ ಸಂತ್ರಸ್ತರಾಗಿದ್ದರು. ಆದರೆ, ಆರೋಗ್ಯವಾಗಿದ್ದರು. ಫಿಟ್ ಆಗಲು ನೋಯ್ಡಾ ಮತ್ತು ದೆಹಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದರೆ, ಈಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ, ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದ್ರೋಗವು ವಿಶ್ವಾದ್ಯಂತ ಸಾವಿಗೆ ಗಮನಾರ್ಹ ಕಾರಣವಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೃದಯ ಸ್ತಂಭನ ಅಥವಾ ಹೃದಯ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ನಮ್ಮ ವೇಗದ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿನ ಬದಲಾವಣೆ ಪ್ರಮುಖ ಕಾರಣವಾಗಿದೆ.

    ಹೃದಯಾಘಾತವು ವಯಸ್ಸಾದ ವ್ಯಕ್ತಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಈ ಹಿಂದೆ ನಂಬಲಾಗಿತ್ತು, ಆದರೆ ಈಗ 30 ರಿಂದ 40 ವರ್ಷದೊಳಗಿನ ಪ್ರತಿಯೊಬ್ಬ ಯುವಕನ ಮೇಲೆಯೂ ಹೃದಯಾಘಾತ ಪರಿಣಾಮ ಬೀರುತ್ತಿದೆ. (ಏಜೆನ್ಸೀಸ್​)

    ಪರೋಟ ತಿಂದ ಮರುದಿನವೇ ಯುವಕ ದುರ್ಮರಣ! ಮರಣೋತ್ತರ ವರದಿಯಲ್ಲಿತ್ತು ಭಯಾನಕ ಸಂಗತಿ

    ಭಾವೈಕ್ಯತೆಯ ಸಂದೇಶ; ಮುಸ್ಲಿಂ ಮುಖಂಡನ ಮನೆಯಲ್ಲಿ ಪೂಜೆ, ಭಜನೆ

    Gold, Silver Price; ಇಂದು ಕೂಡಾ ಚಿನ್ನ-ಬೆಳ್ಳಿ ದರ ತಟಸ್ಥ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts