More

    ಸಂಸತ್ತಿನ ಚಳಿಗಾಲದ ಅಧಿವೇಶನ ಈ ಸಲ ಇಲ್ಲ – ಕೋವಿಡ್ 19 ಕಾರಣ ಎಂದ ಸರ್ಕಾರ

    ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ನಡೆಯಬೇಕಾಗಿದ್ದ ಚಳಿಗಾಲದ ಸಂಸತ್ ಅಧಿವೇಶನ ಈ ಬಾರಿ ನಡೆಸಲಾಗುವುದಿಲ್ಲ. ಕೋವಿಡ್ 19 ಸೋಂಕಿನ ಕಾರಣ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯ ಅಧೀರ್ ರಂಜನ್ ಚೌಧರಿ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಜೋಶಿ, 2021ರ ಜನವರಿ ತಿಂಗಳಲ್ಲಿ ಮುಂಗಡ ಪತ್ರ ಅಧಿವೇಶನವನ್ನು ಇಟ್ಟುಕೊಳ್ಳುವುದು ಸೂಕ್ತವೆನಿಸುತ್ತದೆ. ಸದ್ಯದ ಕೋವಿಡ್ 19 ಸನ್ನಿವೇಶದಲ್ಲಿ ಚಳಿಗಾಲದ ಅಧಿವೇಶನ ದೆಹಲಿಯಲ್ಲಿ ನಡೆಸುವುದು ತುಸು ಕಷ್ಟವೇ ಸರಿ. ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ನಾವು ಡಿಸೆಂಬರ್ ಮಧ್ಯಭಾಗದಲ್ಲಿದ್ದೇವೆ. ಕರೊನಾ ಲಸಿಕೆಯೂ ಶೀಘ್ರವೇ ಲಭ್ಯವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

    ಸೆಪ್ಟೆಂಬರ್ ತಿಂಗಳಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆದಿತ್ತು. ಕರೊನಾ ನಿಯಮಗಳನ್ನು ಪಾಲಿಸಿಕೊಂಡು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡದ್ದಾಗ್ಯೂ 19 ಲೋಕಸಭಾ ಸದಸ್ಯರು ಮತ್ತು 8 ರಾಜ್ಯಸಭಾ ಸದಸ್ಯರಿಗೆ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಚಳಿಗಾಲದ ಅಧಿವೇಶನ ನಡೆಸದಿರುವ ತೀರ್ಮಾನ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ವಿಧಾನಪರಿಷತ್ ಹೈಡ್ರಾಮಾ – ಕೈ-ಕೈ ಮಿಲಾಯಿಸಿದ್ರು, ಉಪಸಭಾಪತಿಯನ್ನು ಪೀಠದಿಂದ ದರ ದರನೆ ಎಳೆದೊಯ್ದರು ಕಾಂಗ್ರೆಸ್​ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts