More

    ತುಮಕೂರಿಗಿಲ್ಲ ಬೇಸಿಗೆಯಲ್ಲಿ ನೀರಿನ ಸಮಸ್ಯೆ!

    ತುಮಕೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಇನ್ನೂ 190 ಎಂಸಿಎಫ್‌ಟಿಯಷ್ಟು ನೀರಿದ್ದು, ಈ ವರ್ಷ ಬೇಸಿಗೆಯಲ್ಲಿ ತುಮಕೂರಿಗರಿಗೆ ಕುಡಿಯೋ ನೀರಿನ ಸಮಸ್ಯೆ ಎದುರಾಗೋಲ್ಲ. ಆದರೆ, ಸೂಕ್ತ ನೀರು ನಿರ್ವಹಣೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸುವ ಅನಿವಾರ್ಯತೆ ಇದೆ.

    ಬುಗಡಹನಳ್ಳಿ ಜಲಸಂಗ್ರಹಗಾರದಲ್ಲಿ ಸದ್ಯ 190 ಎಂಸಿಎಫ್‌ಟಿ ನೀರಿದ್ದು, ಹೆಬ್ಬಾಕ ಕೆರೆಯಲ್ಲೂ 70 ಎಂಸಿಎಫ್‌ಟಿ ನೀರಿದೆ. ಇದಲ್ಲದೆ, ಮೈದಾಳ ಕೆರೆಯಲ್ಲೂ 150 ಎಂಸಿಎಫ್‌ಟಿ ನೀರು ಇದೆ. ಹಾಗಾಗಿ, ಈ ಬೇಸಿಗೆಯಲ್ಲಿ ಸೂಕ್ತ ನೀರು ನಿರ್ವಹಣೆ ಮಾಡಿದಲ್ಲಿ ಸಮರ್ಪಕವಾಗಿ ನೀರು ಪೂರೈಸಬಹುದಾಗಿದೆ.

    ಮಾಸಾಂತ್ಯಕ್ಕೆ ಮತ್ತೆ ಹೇಮೆ: ಕಳೆದ ವರ್ಷ ಆಗಸ್ಟ್ 11 ರಿಂದ ಮೊದಲನೇ ಬಾರಿ ಹೇಮೆ ನೀರನ್ನು ಬುಗಡನಹಳ್ಳಿಗೆ ಹರಿಸಲಾಗಿತ್ತು. ನಂತರ ಅಕ್ಟೋಬರ್ 2 ರಿಂದ 16ರವರೆಗೆ 2ನೇ ಬಾರಿ ನೀರು ಬಿಡಲಾಗಿದ್ದು 183 ಎಂಸಿಎಫ್‌ಟಿಯಷ್ಟು ನೀರು ಭರ್ತಿ ಮಾಡಲಾಯಿತು. ಜತೆಗೆ ಪರ್ಯಾಯವಾಗಿ ಹೆಬ್ಬಾಕ ಕೆರೆಗೂ ನೀರು ಹರಿಸಲಾಗಿತ್ತು. ಹಾಗಾಗಿ, ಹಾಲಿ ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ 190 ಎಂಸಿಎಫ್‌ಟಿಯಷ್ಟು ನೀರು ಲಭ್ಯವಿದೆ.

    ಪ್ರತಿನಿತ್ಯ 1.8 ಎಂಸಿಎಫ್‌ಟಿ ನೀರು: ಪ್ರತಿನಿತ್ಯ ನಗರಕ್ಕೆ ಎಂಎಸಿಎಫ್‌ಟಿಯಷ್ಟರಂತೆ ನಗರಕ್ಕೆ ನೀರು ಪೂರೈಸಲಾಗುತ್ತಿದ್ದು ಬೇಸಿಗೆ ಮುಗಿಯುವವರೆಗೆ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಅಷ್ಟರೊಳಗೆ ಮತ್ತೊಮ್ಮೆ ಹೇಮಾವತಿ ಜಲಾಶಯದಿಂದ ನೀರು ಹರಿಸುವ ಸಾಧ್ಯತೆಗಳಿವೆ. ಏಪ್ರಿಲ್ ಮೊದಲವಾರದೊಳಗೆ ನೀರು ಹರಿಸಿದ್ದೇ ಆದಲ್ಲಿ 2020ರ ಅಕ್ಟೋಬರ್‌ವರೆಗೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.

    18 ಟಿಎಂಸಿ ನೀರು: ಜಿಲ್ಲೆಗೆ ನೀರು ಪೂರೈಸುವ ಗೊರೂರು ಹೇಮಾವತಿ ಜಲಾಶಯದಲ್ಲಿ ಹಾಲಿ 18 ಟಿಎಂಸಿ ನೀರು ಇದೆ. ಮಾರ್ಚ್ 2ನೇ ವಾರದವರೆಗೆ ಜಲಾಶಯದಲ್ಲಿ ಇಷ್ಟೊಂದು ನೀರು ಲಭ್ಯವಿದ್ದು 3ನೇ ಬಾರಿಗೆ ನಗರಕ್ಕೆ ನೀರು ಹರಿಸಬಹುದಾಗಿದೆ. ನಗರದಲ್ಲಿ 24/7 ಕುಡಿಯುವ ನೀರು ಯೋಜನೆ ಕೈಗೆತ್ತಿಕೊಂಡಿರುವ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ (ಕೆಯುಡಬ್ಲೂೃಎಸ್‌ಎಸ್‌ಬಿ)
    ಯವರು ಹೇಮೆ ನೀರು ಪೋಲು ಮಾಡದೆ ಇದ್ದರೆ ಸಮಗ್ರವಾಗಿ ಕುಡಿಯುವ ನೀರನ್ನು ಜನರಿಗೆ ಪೂರೈಸಬಹುದಾಗಿದೆ.

    ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ಹರಿಸುವ ವೇಳೆ ಹೆಬ್ಬಾಕ ಕೆರೆಯನ್ನು ಸಹ ಭರ್ತಿ ಮಾಡಿಕೊಳ್ಳಲಾಗಿದ್ದು, ಸದ್ಯ ಅಲ್ಲಿ 70 ಎಂಸಿಎಫ್‌ಟಿ ನೀರು ಲಭ್ಯವಿದೆ. ಇದಲ್ಲದೆ, ನಗರಕ್ಕೆ ನೀರು ಪಡೆಯುವ ಮೈದಾಳ ಕೆರೆಯಲ್ಲು 150 ಎಂಸಿಎಫ್‌ಟಿಯಷ್ಟು ನೀರು ಇದೆ. ಹಾಗಾಗಿ, ಈ ಬಾರಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ.

    ಬುಗಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೇಮೆ ನೀರು ಲಭ್ಯವಿದ್ದು, ಬೇಸಿಗೆಯಲ್ಲಿ ಯಾವುದೇ ರೀತಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಬಳಸಿಕೊಳ್ಳಲಾಗುವುದು. ಜತೆಗೆ ನೀರು ನಿರ್ವಹಣೆಗೆ ಗಮನಹರಿಸಲಾಗುವುದು.
    ಟಿ.ಭೂಬಾಲನ್
    ಆಯುಕ್ತ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts