More

    ಜ. 22ರಂದು ಷೇರು ಮಾರುಕಟ್ಟೆಯಲ್ಲಿ ಟ್ರೇಡ್​ ಇಲ್ಲ: ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಪ್ರಕಾರ ರಜೆ ಘೋಷಣೆ

    ಮುಂಬೈ: ಭಾರತೀಯ ಇಕ್ವಿಟಿ ಮಾರುಕಟ್ಟೆಗಳು ಜನವರಿ 22 ರಂದು (ಸೋಮವಾರ) ರಜೆ ಇರುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​ ಮತ್ತು ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​ ಎರಡೂ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿವೆ.

    ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಜನವರಿ 22 ಸೋಮವಾರದಂದು ಈಕ್ವಿಟಿ ಮತ್ತು ಇಕ್ವಿಟಿ ಉತ್ಪನ್ನಗಳ ಮಾರುಕಟ್ಟೆಗಳು ಮುಚ್ಚಲ್ಪಡಲಿವೆ.

    ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 25 ರ ಅಡಿಯಲ್ಲಿ ಘೋಷಿಸಲಾದ ಸಾರ್ವಜನಿಕ ರಜೆಯ ಕಾರಣ ಜನವರಿ 22 ರಂದು ಸೋಮವಾರ ಟ್ರೇಡ್​ ರಜೆಯನ್ನು ಘೋಷಿಸಲಾಗಿದೆ ಎಂದು ಎನ್‌ಎಸ್‌ಇ ಪ್ರಕಟಣೆಯಲ್ಲಿ ತಿಳಿಸಿದೆ.

    ಸೋಮವಾರದಿಂದ ಸಂಜೆ 5 ಗಂಟೆಯಿಂದ ಸರಕುಗಳ (commodities) ವಹಿವಾಟು ನಡೆಯಲಿದೆ ಎಂದು ಎನ್‌ಎಸ್‌ಇ ಹೇಳಿದೆ.

    ವೆಬ್​ಸೈಟ್​ ಪರಿಶೀಲನೆಗಾಗಿ ಶನಿವಾರ (ಜ.20) ಅಲ್ಪ ಅವಧಿಗೆ ಷೇರು ವಹಿವಾಟು ನಡೆಸುವುದಾಗಿ ಈ ಮೊದಲು ತಿಳಿಸಿದ್ದು ಬಿಎಸ್​ಇ ಮತ್ತು ಎನ್​ಎಸ್​ಇ ನಂತರ ಈ ಅವಧಿಯಲ್ಲಿ ಬದಲಾವಣೆ ಮಾಡಿದವು. ಶನಿವಾರದಂದು ಪೂರ್ಣ ಅವಧಿಗೆ ವಹಿವಾಟು ನಡೆಸಿದವು.

    ರಾಮ ಮಂದಿರ ತೀರ್ಪು ಕುರಿತು ನಿಖರ ಭವಿಷ್ಯ ಹೇಳಿದ್ದ ಜ್ಯೋತಿಷಿ: ಅಯೋಧ್ಯೆ, ಭಾರತ ಕುರಿತು ನುಡಿದಿರುವುದು ಅದ್ಭುತ…

    ಗ್ರೇ ಮಾರ್ಕೇಟ್​ನಲ್ಲಿ ಬಿರುಗಾಳಿ ಎಬ್ಬಿಸಿದ ಐಪಿಒ: ಹಂಚಿಕೆಯಾಗುವ ಮೊದಲೇ ಶೇ. 37ರಷ್ಟು ಹೆಚ್ಚಳವಾದ ಷೇರು!!

    ಶನಿವಾರದ ವಿಶೇಷ ವಹಿವಾಟಿನಲ್ಲಿ ಕುಣಿದ ಕರಡಿ: ಷೇರು ಸೂಚ್ಯಂಕ ಕುಸಿತಕ್ಕೆ ಕಾರಣಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts