More

    ಗ್ರೇ ಮಾರ್ಕೇಟ್​ನಲ್ಲಿ ಬಿರುಗಾಳಿ ಎಬ್ಬಿಸಿದ ಐಪಿಒ: ಹಂಚಿಕೆಯಾಗುವ ಮೊದಲೇ ಶೇ. 37ರಷ್ಟು ಹೆಚ್ಚಳವಾದ ಷೇರು!!

    ನವದೆಹಲಿ: ಈ ಐಪಿಒ ಬೂದು (ಗ್ರೇ) ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ, ಟಾಟಾ, ರೈಲ್ವೇ ರೀತಿಯ ಸಂಸ್ಥೆಗಳು ಈ ಕಂಪನಿಯ ಗ್ರಾಹಕರಾಗಿವೆ. ಈ ಐಪಿಒ ಬೆಲೆಯನ್ನು 100ರಿಂದ 108 ರೂಪಾಯಿಗೆ ನಿಗದಿಪಡಿಸಲಾಗಿದ್ದರೂ ಈಗಾಗಲೇ ಗ್ರೇ ಮಾರ್ಕೆಟ್​ ಪ್ರೀಮಿಯಂ (ಜಿಎಂಪಿ- ಬೂದು ಮಾರುಕಟ್ಟೆ ಪ್ರೀಮಿಯಂ) 148 ರೂಪಾಯಿ ಮುಟ್ಟಿದೆ.

    ಯಂತ್ರೋಪಕರಣ ತಯಾರಕ ಮೆಗಾಥರ್ಮ್ ಇಂಡಕ್ಷನ್ (Megatherm Induction) ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಇನಿಷಿಯಲ್​ ಪಬ್ಲಿಕ್​ ಆಫರ್​ ಐಪಿಒ) ಪ್ರತಿ ಷೇರಿಗೆ 100 ರಿಂದ 108 ರವರೆಗೆ ಬೆಲೆಯನ್ನು ನಿಗದಿಪಡಿಸಿದೆ ಎಂದು ಶನಿವಾರ ತಿಳಿಸಿದೆ.

    ಈ ಐಪಿಒ ಚಂದಾದಾರಿಕೆಯು ಜನವರಿ 25ರವರೆಗೆ ಆರಂಭವಾಗಿ, ಜನವರಿ 30 ರಂದು ಮುಕ್ತಾಯಗೊಳ್ಳುತ್ತದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಅಂದರೆ, ಈ ಐಪಿಒದಲ್ಲಿ ಷೇರು ಖರೀದಿಸುವವರು ಜ. 25ರಿಂದ 30ರವರೆಗೆ ಅರ್ಜಿಗಳನ್ನು ಹಾಕಲು ಅವಕಾಶವಿರುತ್ತದ. 10 ರೂಪಾಯಿ ಮುಖಬೆಲೆಯ ಪ್ರತಿ ಷೇರಿಗೆ 100ರಿಂದ 108 ರೂಪಾಯಿವರೆಗೆ ಬೆಲೆ ನಿಗದಿಯಾಗುತ್ತದೆ.

    ಈ ಐಪಿಒ ಸಂಪೂರ್ಣವಾಗಿ 49.92 ಲಕ್ಷ ಈಕ್ವಿಟಿ ಷೇರುಗಳ ಹೊಸ ವಿತರಣೆಯಾಗಿದೆ ಎಂದು ಕಂಪನಿ ಹೇಳಿದೆ.

    ಕಂಪನಿಯು ಷೇರುಗಳ ಸಾರ್ವಜನಿಕ ವಿತರಣೆಯಿಂದ ಅಂದಾಜು 53.91 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

    ಕಂಪನಿಯ ಷೇರುಗಳನ್ನು ಎನ್‌ಎಸ್‌ಇ ಎಮರ್ಜ್ ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿ ಮಾಡಲು ನಿಗದಿಪಡಿಸಲಾಗಿದೆ.

    ಈ ಐಪಿಒದ ಏಕೈಕ ಬುಕ್​-ರನ್ನಿಂಗ್​ ಲೀಡ್ ಮ್ಯಾನೇಜರ್ ಹೆಮ್ ಸೆಕ್ಯುರಿಟೀಸ್ ಲಿಮಿಟೆಡ್ ಆಗಿದ್ದರೆ, ಐಪಿಒಗೆ ರಿಜಿಸ್ಟ್ರಾರ್ ಆಗಿ ಬಿಗ್‌ಶೇರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಹಿಸುತ್ತದೆ.

    ಈ ಐಪಿಒದಲ್ಲಿ ಸಂಗ್ರಹಿಸಲಾಗುವ ಹಣವನ್ನು ಕಾರ್ಖಾನೆಯ ಶೆಡ್‌ನ ನಿರ್ಮಾಣ ಮತ್ತು ಹೆಚ್ಚುವರಿ ಸ್ಥಾವರ ಮತ್ತು ಯಂತ್ರೋಪಕರಣಗಳ ಸ್ಥಾಪನೆಗೆ ಬಂಡವಾಳ ವೆಚ್ಚದಲ್ಲಿ ಬಳಸಿಕೊಳ್ಳಲಾಗುತ್ತದೆ,

    ಮೆಗಾಥರ್ಮ್ ಇಂಡಕ್ಷನ್ ಸಂಸ್ಥೆಯು ಮೆಗಾಥರ್ಮ್ ಎಲೆಕ್ಟ್ರಾನಿಕ್ಸ್‌ನ ಅಂಗಸಂಸ್ಥೆಯಾಗಿದೆ. ಟ್ರಾನ್ಸ್‌ಫಾರ್ಮರ್‌ಗಳು, ಲ್ಯಾಡಲ್ ರಿಫೈನಿಂಗ್ ಫರ್ನೇಸ್‌ಗಳು, ನಿರಂತರ ಎರಕದ ಯಂತ್ರಗಳು, ಫ್ಯೂಮ್ ಹೊರತೆಗೆಯುವ ವ್ಯವಸ್ಥೆಗಳು ಇತ್ಯಾದಿಗಳಂತಹ ಸ್ಟೀಲ್‌ವರ್ಕ್‌ಗಳಿಗಾಗಿ ಅಪ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಈ ಕಂಪನಿಯು ತಯಾರಿಸುತ್ತದೆ, ಅಲ್ಲದೆ, ಮಿಶ್ರಲೋಹ ಮತ್ತು ವಿಶೇಷ ಉಕ್ಕಿನ ಉದ್ಯಮಕ್ಕೆ ವಿದ್ಯುತ್ ಚಾಪ ಕುಲುಮೆಗಳನ್ನು ಸಹ ತಯಾರಿಸುತ್ತದೆ.

    ಉಕ್ಕು, ಇಂಜಿನಿಯರಿಂಗ್, ರೈಲ್ರೋಡ್, ಪೈಪ್ ಮತ್ತು ಟ್ಯೂಬ್, ಆಟೋ ಸಹಾಯಕ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ. MM ಫೋರ್ಜಿಂಗ್ಸ್, ಸ್ಟೀಲ್ ಆಕ್ಸಲ್ಸ್, ಶ್ಯಾಮ್ ಮೆಟಾಲಿಕ್ಸ್, ಶಾರದಾ ಎನರ್ಜಿ, ಪ್ರಕಾಶ್ ಇಂಡಸ್ಟ್ರೀಸ್, ಇಂಡಿಯನ್ ರೈಲ್ವೇಸ್, BHEL, ಟಾಟಾ ಕಂಪನಿಗಳು ಟಾಟಾ ಮೋಟಾರ್ಸ್, ಮಹೀಂದ್ರಾ,
    CESC, ಹಿಂಡಾಲ್ಕೊ ಮತ್ತು ಆರ್ಡನೆನ್ಸ್ ಫ್ಯಾಕ್ಟರಿ ಮುಂತಾದವುಗಳು ಇದರ ದೇಶೀಯ ಗ್ರಾಹಕರಾಗಿವೆ.

    ಈ ಐಪಿಒದ ಪ್ರತಿ ಷೇರಿಗೆ ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) 40 ರೂಪಾಯಿ ತೋರಿಸುತ್ತಿದೆ. ಅಂದರೆ, ಐಪಿಒದಲ್ಲಿ ಪ್ರತಿ ಷೇರಿಗೆ ನಿಗದಿಯಾದ ಬೆಲೆಗಿಂತ ಹೆಚ್ಚುವರಿ ದರ. ಈ ಮೂಲಕ ಈ ಷೇರಿನ ಬೆಲೆ ಗ್ರೇ ಮಾರ್ಕೆಟ್​ನಲ್ಲಿ 148 ರೂಪಾಯಿ ತಲುಪಿದೆ. ಮಾರುಕಟ್ಟೆಯಲ್ಲಿ ಲಿಸ್ಟಿಂಗ್​ ಆಗುವ ದಿನವೇ ಇದು ಶೇಕಡಾ 37ರಷ್ಟು ಹೆಚ್ಚಳವಾಗಿ 148 ರೂಪಾಯಿ ತಲುಪಬಹುದಾಗಿದೆ.

    ಈ ಐಪಿಒದಲ್ಲಿ ಷೇರು ಹಂಚಿಕೆಯು ಜನವರಿ 31 ರಂದು ಆಗಬಹುದು. ಷೇರು ಹಂಚಿಕೆಯಾಗದ ಐಪಿಒ ಅರ್ಜಿದಾರರಿಗೆ ಫೆ. 1ರಂದು ಹಣವನ್ನು ವಾಪಸು ನೀಡಬಹುದಾಗಿದೆ. ಈ ಕಂಪನಿಯ ಷೇರುಗಳನ್ನು ಫೆಬ್ರವರಿ 2 ರಂದು ಷೇರು ಮಾರುಕಟ್ಟೆಯಲ್ಲಿ ವಹಿವಾಟಿಗಾಗಿ ಪಟ್ಟಿ ಮಾಡಬಹುದಾಗಿದೆ.

    ಮೆಗಾಥರ್ಮ್ ಇಂಡಕ್ಷನ್ ಸಂಸ್ಥೆಯ ಲಾಭವು 2021-22ರಲ್ಲಿ 1.1 ಕೋಟಿಯಿಂದ 2022-23 ರಲ್ಲಿ 14 ಕೋಟಿ ರೂಪಾಯಿಗೆ ಏರಿದೆ.

    ಶನಿವಾರದ ವಿಶೇಷ ವಹಿವಾಟಿನಲ್ಲಿ ಕುಣಿದ ಕರಡಿ: ಷೇರು ಸೂಚ್ಯಂಕ ಕುಸಿತಕ್ಕೆ ಕಾರಣಗಳೇನು?

    ಇದೆಲ್ಲಾ ರಾಮ ಲಲ್ಲಾನ ಕೃಪಾಶೀರ್ವಾದ: ಅಯೋಧ್ಯೆಯ ಈ ಕಂಪನಿ ಷೇರು ನೀವು ಖರೀದಿಸಿದ್ದರೆ ಒಂದೇ ವಾರದಲ್ಲಿ ಹಣ ದುಪ್ಪಟ್ಟು!!

    ಎಚ್​ಡಿಎಫ್​ಸಿ ಷೇರು ಬೆಲೆ ಕುಸಿತವೇ ನಿಮಗೆ ಲಾಭಕ್ಕೆ ದಾರಿ: ಹೂಡಿಕೆ ವಿಶ್ಲೇಷಕರು ಹೀಗೇಕೆ ಹೇಳುತ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts